ದಾವಣಗೆರೆ: ನಗರದ ಕೆಟಿಜೆ ನಗರ ಠಾಣಾ ವ್ಯಾಪ್ತಿಯ ಸರಸ್ವತಿ ನಗರದ ಟ್ಯಾಂಕ್ ಪಾರ್ಕ್ ಒಳಗಡೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿಕೊಂಡ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿ 60 ಸಾವಿರ ರೂ. 1165 ಗ್ರಾಂ ಗಾಂಜಾ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ.
ದಾವಣಗೆರೆ ಕೆಟಿಜೆ ನಗರದ ರಾಕೇಶ್, ಕೆ.ಎಲ್., ಶ್ರೀರಾಮ ಬಡಾವಣೆಯ ಖಾಜಾಮೊಹಿದ್ದೀನ್ ಸಾಹಿಲ್ ಬಂಧಿತ ಆರೋಪಿಗಳು.
Read also : ಫೈರಸಿಗಿಂತ ಚಿತ್ರಮಂದಿರಗಳ ಮಾಫಿಯಾ ದೊಡ್ಡದು : ನಟ ಝೈದ್ ಖಾನ್
ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ನಗರ ಉಪವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷ ಸುನೀಲ್ ಕುಮಾರ್ ಹೆಚ್.ಎಸ್., ಪೆÇಲೀಸ್ ಅಧಿಕಾರಿ ಸಿಬ್ಬಂದಿ ತಂಡ ಸ್ಥಳಕ್ಕೆ ದಾಳಿ ಮಾಡಿದ್ದು,ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ 60 ಸಾವಿರ ರೂ. ಮೌಲ್ಯದ 1165 ಗ್ರಾಂ ಗಾಂಜಾ, ಎರಡು ಅರ್ಧ ಚಂದ್ರಾಕೃತಿಯುಳ್ಳ ಕಬ್ಬಿಣದ ಎರಡು ಮಚ್ಚುಗಳು, ಒಟ್ಟು 1500 ರೂ. ನಗದು ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
