ಜಗಳೂರು : ರಾಜ್ಯದಲ್ಲಿ 2028ರವರೆಗೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ವಸತಿ ಸಚಿವ ಬಿ.ಝಡ್. ಜಮ್ಮೀರ್ ಅಹಮ್ಮದ್ ಹೇಳಿದರು.
ಬುಧವಾರ ತಾಲ್ಲೂಕಿನ ಶಾಸಕ ಬಿ.ದೇವೇಂದ್ರಪ್ಪ ಅವರ ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಗ್ರಾಮದ ದುರ್ಗಾಂಭಿಕ ದೇವಿ ಜಾತ್ರೆ ಹಿನ್ನೆಲೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ಮಾಡಬೇಕು.ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೊರಟಿಲ್ಲ, ಊಹಾಪೋಹ ಸುದ್ದಿ,ವದಂತಿಗಳಿಗೆ ಕಿವಿಗೊಡಬೇಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಭದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿಯ ಹತ್ಯೆಗೊಳಗಾದ ರಾಜಶೇಖರ್ ಕುಟುಂಬಕ್ಕೆ ಜಮೀರ್ ಅಹ್ಮದ್ 25 ಲಕ್ಷ ರೂ. ಪರಿಹಾರ ನೀಡಿದ್ದೇನೆ. 50 ಕೋಟಿ ಕೊಟ್ಟರೂ ರಾಜಶೇಖರ ಜೀವ ಮರಳಿ ಬರಲ್ಲ, ಕುಟುಂಬಕ್ಕೆ ದುಖಃ ಭರಿಸಲಿ.ರಾಜಶೇಖರ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಎರಡು ಬಾರಿ ಮಾಡಿದ ಆರೋಪ ವಿಚಾರ ಸತ್ಯಕ್ಕೆದೂರ,ಎರಡು ಬಾರಿ ಪೋಸ್ಟ್ ಮಾರ್ಟಮ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಜಮೀರ್ ಅಹ್ಮದ್ ವಾಗ್ದಾಳಿ:
ಬಡವರಿಗೆ ಕೊಟ್ರೆ ಯಾಕೆ ಹೊಟ್ಟೆಕಿಚ್ಚು ಪಡ್ತೀರಾ?,ನಿಮಗೆ ಕೊಡೋಕಂತೂ ಮನಸ್ಸಿಲ್ಲ,ದೇವರು ನಿಮಗೆ ಅಂತಹ ಮನಸು ಕೊಟ್ಟಿಲ್ಲ,ನಮ್ಮಂತವರಿಗೆ ಮನಸು ಕೊಟ್ಟಿದ್ದಾನೆ ಯಾಕೆ ಹೊಟ್ಟೆಕಿಚ್ಚು ಪಡ್ತೀರಾ?,ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ರು, ಜನಾರ್ದನ ರೆಡ್ಡಿ ಎರಡು ಬಾರಿ ಸಚಿವರಾಗಿದ್ರು, ಶ್ರೀರಾಮುಲು ಸಹ ಸಚಿವರಾಗಿದ್ರು ಎಲ್ಲವನ್ನೂ ಅರ್ಥಮಾಡಿಕೊಳ್ಳಬೇಕಿದೆ.ತನಿಖಾಧಿಕಾ ರಿ ರಿಕ್ವೆಸ್ಟ್ ಮಾಡಿದ್ರೆ ಮತ್ತೊಮ್ಮೆ ಪೊಸ್ಟ್ ಮಾರ್ಟಮ್ ಮಾಡಬಹುದು ಎಂದು ತಿಳಿಸಿದರು.
ಇದೇ ವೇಳೆ ಪ್ರಗತಿಪರ ಸಂಘಟನೆ ಕಾರ್ಯಕರ್ತರು ತಾಲ್ಲೂಕಿನ ವಸತಿರಹಿತರಿಗೆ ವಸತಿ ಸೌಲಭ್ಯ ಒದಗಿಸಲು ಮನವಿಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಬಿ.ದೇವೇಂದ್ರಪ್ಪ,ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್,ಕಂಪ್ಲಿ ಶಾಸಕ ಗಣೇಶ್,ಹರಪನಹಳ್ಳಿ ಶಾಸಕಿ ಲತಾಮಲ್ಲಿಕಾರ್ಜುನ್,ಕೆಪಿಸಿಸಿ ಎಸ್ ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ,ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ ಡಾ.ರವಿಕುಮಾರ್,ಸೇರಿದಂತೆ ಇತರರು ಇದ್ದರು.
