ಆಯುರ್ವೇದ ಶಸ್ತ್ರ ಚಿಕಿತ್ಸೆಯ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ

ಕ್ಷಾರಸೂತ್ರ : ಇದು ಅತ್ಯಂತ ಯಶಸ್ವಿ ಪರಿಣಾಮಕಾರಿ ಶಸ್ತ್ರ ಚಿಕಿತ್ಸಾ ಪದ್ಧತಿಗಳಲ್ಲಿ ಒಂದಾಗಿದ್ದು ಮುಖ್ಯವಾಗಿ ಮೂಲವ್ಯಾಧಿ, ಫಿಸ್ಟುಲಾ, ಪಿಲೋನಿಡಲ್ ಸೈನಸ್ ಚಿಕಿತ್ಸೆಗೆ ಬಳಸಲಾಗುತ್ತದೆ.
ಅಂಗರಚನಾಶಾಸ್ತ್ರ: ದೇಹವನ್ನು ಅರ್ಥಮಾಡಿಕೊಳ್ಳಲು ಶವಪರೀಕ್ಷೆ (Dissection) ಪದ್ಧತಿಯನ್ನು ಕಲಿಸಿಕೊಟ್ಟರು, ಇದು ಆ ಕಾಲಕ್ಕೆ ಕ್ರಾಂತಿಕಾರಿ ತಂತ್ರವಾಗಿತ್ತು.
ವೈದ್ಯಕೀಯ ನೀತಿ: ಹಿಪ್ಪೊಕ್ರೇಟ್ಸ್‌ಗಿಂತಲೂ ಮೊದಲೇ ವೈದ್ಯರಿಗಾಗಿ ನೀತಿ ಸಂಹಿತೆಯನ್ನು ರೂಪಿಸಿದರು.
ವಿವಿಧ ಶಸ್ತ್ರ ಚಿಕಿತ್ಸಾ ವಿಧಾನಗಳು: ಸುಶ್ರುತ ಮಹರ್ಷಿಯವರು ಪಾಸ್ಟಿಕ್ ಸರ್ಜರಿ (rhinoplasty) ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಕಿಬ್ಬೊಟ್ಟೆಯ ಶಸ್ತ್ರ ಚಿಕಿತ್ಸೆ, ಕಲ್ಲುಗಳನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ಬಗ್ಗೆ ಪ್ರಾಚೀನ ಭಾರತದ ಈ ಶಸ್ತ್ರಚಿಕಿತ್ಸಾ ಪದ್ಧತಿಗಳು ಆ ಕಾಲದ ಅತ್ಯುನ್ನತ ವೈದ್ಯಕೀಯ ಜ್ಞಾನವನ್ನು ತೋರಿಸುತ್ತವೆ. ಬಹಳ ವಿವರವಾಗಿ ಬರೆದಿದ್ದಾರೆ.
ಅರಿವಳಿಕೆ: ಪ್ರಾಚೀನ ಭಾರತದಲ್ಲಿ ಅರಿವಳಿಕೆಯ (Anesthesia) ಬಳಕೆಯ ಬಗ್ಗೆಯೂ ಅರಿವಿತ್ತು.3
ಇತರ ತಂತ್ರಗಳು: ರಕ್ತಸ್ರಾವವನ್ನು ನಿಯಂತ್ರಿಸಲು ಮತ್ತು ನೋವನ್ನು ನಿವಾರಿಸಲು ಬಿಸಿ ಮಾಡುವ ‘ಅಗ್ನಿಕರ್ಮ’ ಮತ್ತುರಕ್ತವನ್ನು ಶುದ್ಧೀಕರಿಸುವ ‘ರಕ್ತಮೋಕ್ಷಣೆ’ (ರಕ್ತ ಹಿಂಡುವುದು)ನಂತಹ ತಂತ್ರಗಳನ್ನೂ ಬಳಸಲಾಗುತ್ತಿತ್ತು. ಪ್ರಾಚೀನ ಭಾರತದ ಈ ಶಸ್ತ್ರಚಿಕಿತ್ಸಾ ಪದ್ಧತಿಗಳು ಆ ಕಾಲದ ಅತ್ಯುನ್ನತ ವೈದ್ಯಕೀಯ ಜ್ಞಾನವನ್ನು ತೋರಿಸುತ್ತವೆ.
ಈಗಿನ ಚರ್ಚೆ ಏನಂದರೆ : ಬಹುತೇಕ ಬಹು ಕಾಲದಿಂದ ಕೇಳಿಬರುವ ಪ್ರಶ್ನೆ ಏನಂದರೆ ಆಯುರ್ವೇದ ಶಸ್ತ್ರ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದಾರೆಯೇ ಅಥವಾ ಅಧಿಕಾರವಿದೆಯೇ ? ಈ ಪ್ರಶ್ನೆಗೆ ಉತ್ತರ ತಿಳಿದು ಕೊಳ್ಳಲು ನಾವು ಹಿಂದಿನ ಕಾಲದ ಐತಿಹಾಸಿಕ ಮತ್ತು ಶಾಸ್ತ್ರೀಯ ಪದ್ದತಿಯನ್ನು ನೋಡಲೇಬೇಕು. ಪ್ರಾಚೀನ ಭಾರತದಲ್ಲಿ ಶಸ್ತ್ರ ಚಿಕಿತ್ಸೆಯು ಅತ್ಯಂತ ಸುಧಾರಿತವಾಗತ್ತು.
Read also : ಜಿಗಣೆ ಚಿಕಿತ್ಸೆಅದರ ಔಷಧೀಯ ಮಹತ್ವ: ಡಾ.ಬಿ.ಶಿವಕುಮಾರ್
ಇತ್ತೀಚಿಗೆ ಕೇಂದ್ರ ಸರ್ಕಾರವು ದಿನಾಂಕ 20/11/2020 ರಂದು ಭಾರತ ರಾಜಪತ್ರ (the gazette of India)ಹಾಗೂ ಕಳೆದ ತಿಂಗಳು ಆಂಧ್ರ ಪ್ರದೇಶ ಸರ್ಕಾರವು 58 ವಿಧದ ಶಸ್ತ್ರ ಚಿಕಿತ್ಸೆಗಳನ್ನು ಆಯು ರ್ವೇದ ತಜ್ಞ ವೈದ್ಯರು ಶಲ್ಯ ತಂತ್ರ ಹಾಗೂ ಶಾಲಾಕ್ಯ ತಂತ್ರದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದು ಎಂದು ಅನುಮತಿಸಿದೆ.
ತಜ್ಞ ವೈದ್ಯಾಧಿಕಾರಿಗಳು
ಆಯುಷ್ಮಾನ್ ಆರೋಗ್ಯ ಮಂದಿರ
ನರಗನಹಳ್ಳಿ ದಾವಣಗೆರೆ
9886624267
