ಮಲಬದ್ಧತೆ ಅಥವಾ constipation ಎಂಬುದು ಸಾಮಾನ್ಯವಾಗಿ ಕಂಡುಬರುವ ಒಂದು ಮಲದ್ವಾರದ ರೋಗವಾಗಿದ್ದು, ಆಯುರ್ವೇದದಲ್ಲಿ ಇದರ ನಿರ್ವಹಣೆಗೆ ಹಲವು ವಿಧದ ಮಾರ್ಗಗಳನ್ನು ಸೂಚಿಸಲಾಗಿದೆ.
ಮಲಬದ್ಧತೆ ಗುದ ರೋಗದ ಮುಖ್ಯ ಖಾಯಿಲೆ ಆಗಿದ್ದು ಇದನ್ನು ತಾತ್ಸಾರ ಮಾಡುವುದು ಅತ್ಯಂತ ಅಪಾಯಕಾರಿಯಾಗಬಲ್ಲದು .
ಮಲಬದ್ಧತೆ ಮತ್ತು ಆಯುರ್ವೇದ ಚಿಕಿತ್ಸೆ ಮಲಬದ್ಧತೆ (Constipation) ಆಯುರ್ವೇದದಲ್ಲಿ “ಕೋಷ್ಟಬಂಧ” ಅಥವಾ “ವಿಬಂಧ” ಎಂದು ಕರೆಯಲಾಗುತ್ತದೆ.
ಮಲವಿಸರ್ಜನೆಗೆ ತೊಂದರೆಯಾಗುವುದು ಕರುಳಿನ ಚಲನೆಗಳು (ವಾರಕ್ಕೆ ಮೂರು ಬಾರಿಗಿಂತ ಕಡಿಮೆ )ಮತ್ತು ಮಲವು ಗಟ್ಟಿಯಾಗಿ ಒಣಗಿದ್ದು ಹಾದು ಹೋಗಲು ಕಷ್ಟವಾಗುವುದು ಮುಖ್ಯ ಲಕ್ಷಣಗಳಾಗಿವೆ.
ಇದು ಮುಖ್ಯವಾಗಿ ವಾತ ದೋಷದ ಹೆಚ್ಚಳ, ತಪ್ಪಾದ ಆಹಾರ-ವಿಹಾರ, ಕಡಿಮೆ ನೀರು ಸೇವನೆ ಮತ್ತು ಆಹಾರದಲ್ಲಿ ನಾರಿನ ಕೊರತೆ ಜಡ ಜೀವನ ಶೈಲಿ ಅಥವಾ ಕೆಲವು ಔಷಧಿಗಳ ಅಡ್ಡ ಪರಿಣಾಮಗಳು ಕಾರಣವಾಗಬಹುದು ಕೆಳಗೆ ಆಯುರ್ವೇದದ ಪರಿಣಾಮಕಾರಿ ಚಿಕಿತ್ಸೆಗಳು, ಮನೆಮದ್ದುಗಳ ವಿವರಿಸಲಾಗಿದೆ.
ಮಲಬದ್ಧತೆಯ ಕಾರಣಗಳು(Causative Factors)
•ನೀರು ಕಡಿಮೆ ಕುಡಿಯುವುದು
•ನಾರಿನಾಂಶ(fiber) ಕಡಿಮೆ ಇರುವ ಆಹಾರ
ಸಂಸ್ಕರಿದ ಆಹಾರ ಅತಿಯಾದ ಸೇವನೆ
•ಜಂಕ್ ಫುಡ್, ದೋಸೆ/ಪೂರಿ/ ಪದಾರ್ಥಗಳು
•ಒತ್ತಡ (stress)
• ಕಡಿಮೆ ದೈಹಿಕ ಚಟುವಟಿಕೆ
•ನಿದ್ರೆಯ ಕೊರತೆ
•ಸರಿಯಾದ ಸಮಯಕ್ಕೆ ಮಲವಿಸರ್ಜನೆ ಮಾಡದಿರುವುದು
-ಕಳಪೆ ಶೌಚಾಲಯದ ಅಭ್ಯಾಸಗಳು
-ಥೈರಾಯ್ಡ್ ಸಮಸ್ಯೆ
-ಅನಾರೋಗ್ಯಕರ ಆಹಾರ,
-ತಿಂದ ಆಹಾರದಲ್ಲಿ ನಾರಿನ ಕೊರತೆ
-ಪ್ರತಿದಿನದ ವ್ಯಾಯಾಮ ಮತ್ತು ಶ್ರಮದ (ಶಾರೀರಿಕ ಚಟುವಟಿಕೆ) ಕೊರತೆ
-ಹೆಚ್ಚಿನ ಒತ್ತಡ ಮತ್ತು ಆತಂಕ
-ದೈಹಿಕ ಚಲನೆಯನ್ನು ನಿಯಂತ್ರಿಸುವ ವಾತ ದೋಷದಲ್ಲಿನ ಅಸಮತೋಲನ
(ಕೆಲ ಒಣಗಿದ, ಫಾಸ್ಟ್ ಫುಡ್‌ಗಳ ಸೇವನೆ )
ಮಲಬದ್ಧತೆ ಲಕ್ಷಣಗಳು
-ಗಟ್ಟಿಯಾದ, ಒಣಗಿರುವ ಮತ್ತು ಹೊರಹಾಕಲು ತೊಂದರೆಕೊಡುವಂತಹ ಮಲ
– ಅಪರೂಪದ ಕರುಳಿನ ಚಲನೆಗಳು, ವಾರಕ್ಕೆ ಮೂರುಹಿಂದಿದೆಯಾದರೆ ಮಲಬದ್ಧತೆ ಎಂದು ಪರಿಗಣಿಸಲಾಗುತ್ತದ
-ಮಲ ವಿಸರ್ಜನೆಯಾಗುವ ಸಮಯದಲ್ಲಿ ತೊಂದರೆ ಅಥವಾ ಆಗಾಗ್ಗೆ ಆಯಾಸಗೊಳಿಸುವಿಕೆ
.-ಹೊಟ್ಟೆ ನೋವು, ಉಬ್ಬುವಿಕೆ, ಬೆನ್ನು ನೋವು ಹಾಗೂ ವಾಯು ಸಮಸ್ಯೆ
– ಸಂಪೂರ್ಣ ಹೊಟ್ಟೆ ಖಾಲಿಯಾಗಿಲ್ಲ ಎನ್ನುವ ಭಾವನೆ ಯಾವುದೋ ರೀತಿಯ ಜೀರ್ಣಕೋಶದ ಅಸ್ವಸ್ಥತೆ -ಒತ್ತಡ
ತಡೆಗಟ್ಟುವ ವಿಧಾನ (Preventive Methods)
-ಆಹಾರದಲ್ಲಿ ಹೆಚ್ಚು ನಾರಿ, ಹಣ್ಣು, ತರಕಾರಿ ಸೇರಿಸಬೇಕು
-ದಿನವಿಡಿ ಸಾಕಷ್ಟು ನೀರು ಕುಡಿಯಬೇಕು
-ನಿಯಮಿತ ವ್ಯಾಯಾಮ ಮತ್ತು -ಪಾದಯಾತ್ರೆಸಮಯಕ್ಕೆ ಆಹಾರ ಸೇವನೆ, ಒತ್ತಡವನ್ನು ನಿಯಂತ್ರಿಸಬೇಕು
ಔಷಧಗಳು: ಕೆಲವು ನೋವು ನಿವಾರಕಗಳು ,ಅಲ್ಯುಮಿನಿಯಂ ಹೊಂದಿರುವ ಖಿನ್ನತೆ ಶಮನಕಾರಿ ಔಷಧಗಳು ಮಲಬದ್ಧತೆಗೆ ಅಡ್ಡ ಪರಿಣಾಮವಾಗಬಹುದು
ಆಯುರ್ವೇದ ಚಿಕಿತ್ಸೆ ಮತ್ತು ಮನೆಮದ್ದುಗಳು
ಒಂದು ಚಮಚ ತ್ರಿಫಲ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ರಾತ್ರಿ ಮಲಗುವಾಗ ತೆಗೆದುಕೊಂಡರೆ ಮಲಬದ್ಧತೆ ಕಡಿಮೆ ಯಾಗುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ವಾತ-ಪಿತ್ತ ನಿಯಂತ್ರಿತವಾಗುತ್ತದೆ
ಔಡಲಎಣ್ಣೆ (ಎರಂಡ ಎಣ್ಣೆ)
1 ಚಮಚ ಬಿಸಿ ನೀರು/ಬಿಸಿ ಹಾಲಿನಲ್ಲಿ ವಾರಕ್ಕೆ 1–2 ಬಾರಿ ಮಾತ್ರ. ಜೇನು ತುಪ್ಪವು ಮಲಬದ್ಧತೆಗೆ ಅತ್ಯುತ್ತಮ ಔಷದವಾಗಿದೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದು.
ರಾತ್ರಿ 6-7 ಒಣ ದ್ರಾಕ್ಷಿಯನ್ನು ನೆನೆಸಿ ಮತ್ತು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಲಬದ್ಧತೆ ಗುಣವಾಗುವುದು
ಆಹಾರ ಸಲಹೆ (Diet Tips)
ತಿನ್ನಬೇಕಾದವು
•ಬಿಸಿ ನೀರು
•ಹಣ್ಣುಗಳು: ಬಾಳೆಹಣ್ಣು, ಪಪ್ಪಾಯಿ,
•ತರಕಾರಿಗಳು: ಸೌತೆಕಾಯಿ, ಪಾಲಕ್,ಬಟಾಣಿ
•ದಾಲ್, ಸಾಂಬಾರ್, ರಾಗಿಜ್ಜೊಳ ಕಂಜಿ
•ಗೋಧಿ/ಓಟ್ಸ್/ಮಿಲ್ಲೆಟ್‌ಗಳು
•ಎಳ್ಳೆಣ್ಣೆ ಅಥವಾ ತುಪ್ಪ
ತಿನ್ನಬಾರದು
•ಗಾಢವಾಗಿ ಫ್ರೈಡ್ ಮಾಡಿದ ಆಹಾರ
•ಚೀಸ್,
•ಹೆಚ್ಚು ಕಾಫಿ/ಚಹಾ
•ಮಸಾಲೆ, ಜಂಕ್ ಫುಡ್
•ರಾತ್ರಿ ಹೊತ್ತು ತುಂಬಾ ತಡವಾಗಿ ಊಟ ಮಾಡುವುದು
ಆಯುರ್ವೇದ ದಿನಚರ್ಯೆ / ಯೋಗ
•ಬೆಳಿಗ್ಗೆ 1 ಗ್ಲಾಸ್ ಬೆಚ್ಚಗಿನ ನೀರು + 1 ಚಮಚ ನಿಂಬೆ + 1 ಚಮಚ ತುಪ್ಪ
•20 ನಿಮಿಷ ನಡಿಗೆ
•ಯೋಗ:
•ಪವನಮುಕ್ತಾಸನ
•ವಜ್ರಾಸನ
•ಭುಜಂಗಾಸನ
•ಹೊಟ್ಟೆಯ ಭಾಗಕ್ಕೆ ಸಣ್ಣ ಎಣ್ಣೆ ಮಸಾಜ್ (Abhyanga) — ವಾತ ಶಾಂತಗೊಳಿಸುತ್ತದೆ.
ಮಲಬದ್ಧತೆ ತೀವ್ರವಾಗಿದ್ದರೆ ಅಥವಾ ಸುಧಾರಿಸದಿದ್ದರೆ ಇದು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿ ದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
Read also : ಆಯುರ್ವೇದ ಮತ್ತು ಶಸ್ತ್ರ ಚಿಕಿತ್ಸೆ : ಡಾ. ಬಿ.ಶಿವಕುಮಾರ
“ಆಯುರ್ವೇದವು ಕೇವಲ ಚಿಕಿತ್ಸೆ ಮಾತ್ರವಲ್ಲ, ಇದು ಒಂದು ಮಾದರಿ ಜೀವನ ಪದ್ಧತಿ ಸಾರುವ ವಿಶೇಷ ಚಿಕಿತ್ಸಾ ವಿಧಾನ ಆಗಿರುವುದರಿಂದ ಇದನ್ನು ಕೇವಲ ಔಷಧಿ ಗಷ್ಟೇ ಸೀಮಿತ ವಾಗಿಸದೆ ಸಂಪೂರ್ಣವಾಗಿ ದಿನಚರಿ ಋತು ಚರಿ ಆಹಾರ ಆಚರಣೆಗಳನ್ನು ಅರಿತು ಪಾಲಿಸಿದಲ್ಲಿ ಇದರ ಸಂಪೂರ್ಣ ಲಾಭ ಸಿಗುವುದರಲ್ಲಿ ಸಂಶಯವಿಲ್ಲಾ
ಡಾ. ಬಿ. ಶಿವಕುಮಾರ್. ಎಮ್ ಎಸ್ (ಶಲ್ಯ ತಂತ್ರ )
ವೈದ್ಯಾಧಿಕಾರಿಗಳು
ಆಯುಷ್ ಆರೋಗ್ಯ ಮಂದಿರ
ನರಗನಹಳ್ಳಿ
ದಾವಣಗೆರೆ ತಾ ಮತ್ತು ಜಿಲ್ಲೆ
