Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಯಲ|ಚುಕ್ಕೆ ಜಿಂಕೆಗಳು ಮೃತ : ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ತರಾಟೆ
ತಾಜಾ ಸುದ್ದಿ

ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಯಲ|ಚುಕ್ಕೆ ಜಿಂಕೆಗಳು ಮೃತ : ಅಧಿಕಾರಿಗಳಿಗೆ ಶಾಸಕ ಬಸವಂತಪ್ಪ ತರಾಟೆ

Dinamaana Kannada News
Last updated: January 19, 2026 12:07 pm
Dinamaana Kannada News
Share
SHARE
ದಾವಣಗೆರೆ: ತಾಲೂಕಿನ ಆನಗೋಡು ಬಳಿಯಿರುವ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಯಲಕ್ಕೆ ಸೋಮವಾರ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ಪರಿಶೀಲನೆ ನಡೆಸಿದರು.
ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು ಚುಕ್ಕೆ ಜಿಂಕೆಗಳು ಮೃತ ಪಟ್ಟ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಈ ಸಂದರ್ಭದಲ್ಲಿ  ಸೂಕ್ತ ನಿರ್ವಹಣೆ ಇಲ್ಲದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕಿರು ಮೃಗಾಲಯದಲ್ಲಿರುವ ಜಿಂಕೆಗಳು, ಕರಡಿಗಳು ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳನ್ನು ವೀಕ್ಷಣೆ ಮಾಡಿ  ಅವುಗಳ ಆರೋಗ್ಯ, ಪೂರೈಸುವ ಆಹಾರದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮೃಗಾಲಯದಲ್ಲಿ 94 ಹೆಣ್ಣು, 58 ಗಂಡು ಹಾಗೂ 18ಮರಿಗಳು ಸೇರಿ ಒಟ್ಟು 170  ಚುಕ್ಕೆ ಜಿಂಕೆಗಳಿವೆ. ನಾಲ್ಕು ಜಿಂಕೆ ಗಳು ಮೃತಪಟ್ಟಿವೆ. ಇದು ‘ಹೆಮರಾಜಿಕ್ ಸೆಪ್ಟಿ ಸೆಮಿಯಾ’ (ಎಚ್‌ಎಸ್) ಎಂಬ ಸಾಂಕ್ರಾಮಿಕ ರೋಗವಿರ ಬಹುದು ಎಂದು ಪ್ರಾಣಿ ಆರೋಗ್ಯ ಸಲಹಾ ಸಮಿತಿಯು ಶಂಕಿಸಲಾಗಿದೆ.
ರೋಗ ಹರಡದಂತೆ ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆಯನ್ನು ತಕ್ಷಣವೇ ಪ್ರಾರಂ ಭಿಸಲಾಗಿದೆ. ಹಿರಿಯ ಪಶುವೈದ್ಯರು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮ  ಜಾರಿ ಗೊಳಿಸಲಾಗಿದೆ ಎಂದು ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದರು.
Read also :Political analysis|ಡೋಂಟ್ ವರಿ ಕಮ್ ಟು ಡೆಲ್ಲಿ
ಆಹಾರ ದಾಸ್ತಾನು ಕೊಠಡಿಯಲ್ಲಿರುವ ಕೊಳತೆ ತರಕಾರಿ, ಕೊಳತೆ ಕಾಳುಗಳನ್ನು ನೋಡಿದರೆ ಪ್ರಾಣಿ, ಪಕ್ಷಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. 33 ಲಕ್ಷ ರೂ. ಖರ್ಚು ಮಾಡಿ ಆಹಾರ ಸಾಮಗ್ರಿ ಖರೀದಿಸಲಾಗಿದೆ ಎಂದಿದೆ.
ಆದರೆ ಇಲ್ಲಿ ಅಷ್ಟೊಂದು ಹಣ ಖರ್ಚು ಮಾಡದಿರುವುದು ಕಂಡು ಬರುತ್ತಿದೆ. ಸಮರ್ಪಕ ಆಹಾರ ಪದಾರ್ಥಗಳು ಇಲ್ಲ. ಅಲ್ಲದೇ ಹಣ ದುರ್ಬಳಕೆ ಆಗುತ್ತಿದೆ ಎಂದು ಸಾರ್ವ ಜನಿಕರಿಂದ ದೂರುಗಳು ಕೇಳಿ ಬಂದಿವೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೋಗದ ನಿಖರ ಕಾರಣ ತಿಳಿಯಲು ಮೊದಲು ಮೃತಪಟ್ಟಿದ್ದ ಜಿಂಕೆಯ ಅಂಗಾAಗಗಳ ಮಾದರಿಗಳನ್ನು ಪ್ರಯೋ ಗಾಲಯಕ್ಕೆ ಕಳುಹಿಸಿ, ನಿಖರ ಕಾರಣ ತಿಳಿದ ಬಳಿಕ ಸೂಕ್ತ ಚಿಕಿತ್ಸೆ ನೀಡಿದ್ದರೆ ಸಾವಿನ ಸಂಖ್ಯೆ ತಪ್ಪಿಸಬಹುದಿತ್ತು. ಸಾಂಕ್ರಾಮಿಕ ರೋಗದ ಲಕ್ಷಣಗಳು ಕಾಣಿಸುತ್ತಿದ್ದರೂ, ತಕ್ಷಣದ ಚಿಕಿತ್ಸೆ ಮತ್ತು ತಜ್ಞರ ನೆರವು ಪಡೆ ಯುವಲ್ಲಿ ವಿಳಂ ಬವಾಗಿರುವುದು ನಿರ್ವಹಣೆ ಕೊರೆತೆಯನ್ನು ಸೂಚಿಸುತ್ತದೆ. ಇದು ಪುನರಾವರ್ತನೆಯಾದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡ ಲಾಗುವುದು ಎಂದು ಎಚ್ಚರಿಸಿದರು.
ಅಷ್ಟೇ ಅಲ್ಲದೇ ಕಿರು ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ನೂರು ಜನ ಪ್ರವಾ ಸಿಗರು ಬಂದರೆ 25  ಜನ ಪ್ರವಾಸಿಗರಿಗೆ ಮಾತ್ರ ಟಿಕೆಟ್ ಹರಿದು ಉಳಿದ ಹಣವನ್ನು ದುರ್ಬಳಕೆ ಮಾಡಿ ಕೊಳ್ಳಲಾಗುತ್ತಿದೆ ಎಂದು ಆರೋಪಗಳು ಸಾಕಷ್ಟು ಕೇಳಿ ಬಂದಿವೆ.  ಮುಂದೆ ಈ ರೀತಿ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಿರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಡಿಎಫ್‌ಒ ಹರ್ಷವರ್ಧನ್, ಆರ್‌ಎಫ್‌ಒ ಇನಾಯತ್, ಎಸಿಎಫ್ ಆನಂದ್, ಗ್ರಾಪಂ ಮಾಜಿ ಅಧ್ಯಕ್ಷ ನಸರುಲ್ಲ, ಗ್ರಾಮದ ಮುಖಂಡರಾದ ಪ್ರಕಾಶ್, ರಾಜಪ್ಪ, ರವಿ, ಸನಾವುಲ್ಲ, ರುದ್ರಪ್ಪ, ಶಿವು, ಮಲ್ಲೇಶ್‌ನಾಯ್ಕ್, ಫಿರೋಜ್ ಅಹ್ಮದ್, ಜೀವನ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ನಿರ್ವಹಣೆಯ ಲೋಪಗಳ ಕಾರಣದಿಂದ ಸಾಂಕ್ರಾಮಿಕ ರೋಗ ಹರಡಿ ಜಿಂಕೆಗಳು ಸಾವು ಸಂಭವಿಸಿರುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.
-ಕೆ.ಎಸ್.ಬಸವಂತಪ್ಪ, ಶಾಸಕ.
TAGGED:ComdinamaanaFour spotted deer deadIndira Priyadarshini Mini ZooMLA Basavanthappa
Share This Article
Twitter Email Copy Link Print
Previous Article Political analysis Political analysis|ಡೋಂಟ್ ವರಿ ಕಮ್ ಟು ಡೆಲ್ಲಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಿನಮಾನ ಹೆಮ್ಮೆ : ಬಳ್ಳಾರಿ ಜಾಲಿ ಹೂಗಳ ಕವಿ- ಪೀರ್ ಬಾಷಾ

Kannada News | Dinamaanada Hemme  | Dinamaana.com | 06-07-2024 ಆಕ್ಕಾ...ಸೀತಾ ನಿನ್ನಂತೆ ನಾನೂ ಶಂಕಿತ  (Peer Basha)…

By Dinamaana Kannada News

ನಕಲಿ ಬಂಗಾರ ಪ್ರಕರಣ : ಆರೋಪಿ ಸೆರೆ 5 ಲಕ್ಷ ನಗದು ವಶಕ್ಕೆ

ದಾವಣಗೆರೆ : ನಕಲಿ ಬಂಗಾರ ನೀಡಿ, ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಹದಡಿ ಪೊಲೀಸರು ಬಂಧಿತರಿಂದ  5 ಲಕ್ಷ ನಗದು…

By Dinamaana Kannada News

ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಅ.9 :  ಪ್ರಸಕ್ತ ಸಾಲಿನಲ್ಲಿ  ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂ ಸೇವಾ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಓಪಿಎಸ್ ಜಾರಿಗಾಗಿ ಯಾವುದೇ ತೆರನಾದ ಹೋರಾಟಕ್ಕೂ ಸಿದ್ಧ : ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ

By Dinamaana Kannada News
Davanagere
ತಾಜಾ ಸುದ್ದಿ

ಆನಗೋಡು ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸಾವು| ಸೂಕ್ತ ಮುನ್ನಚ್ಚರಿಕೆ ಕ್ರಮ : ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ​

By Dinamaana Kannada News
Davanagere
ತಾಜಾ ಸುದ್ದಿ

ಜಿಲ್ಲೆಯಲ್ಲಿ ಆಡಳಿತ ಯಂತ್ರ ಸತ್ತು ಹೋಗಿದೆ : ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಅಪಾದನೆ

By Dinamaana Kannada News
ತಾಜಾ ಸುದ್ದಿ

ಸಂವಿಧಾನದ ಆಶಯಗಳ ಬಗ್ಗೆ ತಿಳಿವಳಿಕೆ ತುಂಬಾ ಅವಶ್ಯ : ಇಮ್ಮಡಿ ಶ್ರೀ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?