ಹರಪನಹಳ್ಳಿ : ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಪ್ರಸಿದ್ಧ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ ದೇವಿ ಪುಣ್ಯ ಕ್ಷೇತ್ರಕ್ಕೆ ಭರತ ಹುಣ್ಣಿಮೆ ಅಂಗವಾಗಿ ಭಾನುವಾರ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡಿದ್ದರು.
ಸುಮಾರು 600 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ನೆಲಸಿರುವ ಉಚ್ಚೆಂಗೆಮ್ಮ ದೇವಿಗೆ ಹರಿಹರ ಬಾಗಿಲು, ಪಾದಗಟ್ಟೆ ದ್ವಾರ, ತೋಪಿನ ದುರ್ಗಮವಾದ ಬೆಟ್ಟದ ಕಿರಿದಾದ ದಾರಿಯಲ್ಲಿ ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ಭಕ್ತರು ದರ್ಶನಕ್ಕೆ ಬಂದಿದ್ದರು.
ಹುಣ್ಣಿಮೆಗಳಲ್ಲಿಯೇ ಭರತ ಹುಣ್ಣಿಮೆಯು ಉಚ್ಚೆಂಗೆಮ್ಮ ದೇವಿ ಭಕ್ತರಿಗೆ ಪವಿತ್ರ ಹಾಗೂ ವಿಶಿಷ್ಟವಾಗಿದೆ. ಹಾಗಾಗಿ ದಾವಣಗೆರೆ, ವಿಜಯನಗರ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಬಂದಿದ್ದರು.
ಮಾಧ್ಯಹ್ನ ವೇಳೆಗೆ ಬಿಸಿಲ ಪ್ರಖರತೆ ಬೆವರಿದ ಭಕ್ತರು ಬೆಟ್ಟದ ಬಂಡೆ, ಕಲ್ಲು, ಕೋಟೆ, ಮರಗಳ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂತು. ದೇವಿಯ ನೈವೇದ್ಯಕ್ಕೆ ರೊಟ್ಟಿ, ಬದನೆಕಾಯಿ ಪಲ್ಯೆ, ಮೊಸರು ಬುತ್ತಿ, ಹಣ್ಣು, ಹೂ, ಕಾಯಿ, ಕರ್ಪೂರಗಳಿಂದ ಪೂಜೆಯನ್ನು ನೆರೆವೇರಿಸಿ ಭಕ್ತಿ ಸಮರ್ಪಿಸಿದರು.
ಹುಣ್ಣಿಮೆ ಅಂಗವಾಗಿ ಬೆಟ್ಟದ ಮೇಲೆ ನೆಲೆಸಿರುವ ಉಚ್ಚಂಗೆಮ್ಮ ದೇವಿಗೆ ಕುಂಕುಮಾರ್ಚನೆ, ಎಲೆ ಪೂಜೆ, ಹೊಳೆ ಪೂಜೆ, ಕ್ಷೀರಾಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಮುತ್ತೈದೆ ಹುಣ್ಣಿಮೆ: ಪುನರ್ವಸತಿ ಕಲ್ಪಿತ ದೇವದಾಸಿಯರು, ಜೋಗಪ್ಪ, ಜೋಗತಿ ಯರಿಗೆ ಇದು ಮುತ್ತೈದೆ ಹುಣ್ಣಿಮೆ ಎಂದೇ ಹೇಳಲಾಗುತ್ತದೆ. ದೇವರು ಹೊತ್ತವರು ಗುಡ್ಡದಲ್ಲಿರುವ ಆನೆಹೊಂಡದಲ್ಲಿ ಸ್ನಾನ ಮಾಡಿ ತಮ್ಮಲ್ಲಿರುವ ಹಳೆ ಪಡ್ಲಿಗೆಗಳನ್ನು ಅಲ್ಲಿ ಬಿಟ್ಟು ಹೊಸ ಪಡ್ಲಿಗೆ ಯನ್ನು ತಲೆಯ ಮೇಲೆ ಹೊತ್ತು ದೇವಿಯ ದರ್ಶನ ಪಡೆಯುತ್ತಾರೆ.
ಕಳೆದ ಬನದ ಹುಣ್ಣಿಮೆಯಂದು ಬಳೆಗಳನ್ನು ತೆಗೆದ ಇವರು, ಈ ಹುಣ್ಣಿಮೆಯಂದು ಹೊಸ ಬಳೆ ತೊಟ್ಟು ಮುತ್ತೈದೆಯಾಗಿ ರೂಪುಗೊಳ್ಳುವ ಪ್ರತೀತಿ ಇದೆ. ಹಾಗಾಗಿ ಭರತ ಹುಣ್ಣಿಮೆಯನ್ನು ಮುತ್ತೈದೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ.
ಕಾಣದ ಶೌಚಾಲಯ: ಭರತ ಹುಣ್ಣೆಮೆಗೆ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವ ಹಿನ್ನಲೆಯಲ್ಲಿ ತಿಂಗಳ ಹಿಂದಿಯೇ ಜಿಲ್ಲಾಧಿಕಾರಿಗಳು ಮೂಲ ಸೌಕರ್ಯ ಒದಗಿಸಲು ಸೂಚಿಸಿದ್ದರು.
ಆದರೆ, ಪುರಾತತ್ವ ಇಲಾಖೆ ಸ್ಪಂದನೆ ಸಿಗದ ಹಿನ್ನಲೆ ಎಲ್ಲಿಯೂ ಶೌಚಾಲಯ ನಿರ್ಮಿಸಲಾಗಿರಲಿಲ್ಲ. ಇದರಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಮಹಿಳಾ ಭಕ್ತರು ಸಂಕಷ್ಟ ಎದುರಿಸಿದರು. ವಿಧಿ ಇಲ್ಲದೆ ಕೋಟೆ, ಗಿಡ ಗಂಟೆಗಳ ಮೊರೆ ಹೋಗಬೇಕಾಯಿತು.
‘ಅಸಂಖ್ಯಾತ ಭಕ್ತರು ಬಂದಿದ್ದಾರೆ. ಕನಿಷ್ಟ ಶೌಚಾಲಯ ಇಲ್ಲ. ಸ್ನಾನ ಗೃಹ ಇಲ್ಲದಿರುವುದು ನೋವಿನ ಸಂಗತಿ. ಜಿಲ್ಲಾಡಳಿತ ಕೂಡಲೇ ಎಚೆತ್ತುಕೊಳ್ಳಬೇಕು ಎಂದು ಚಿತ್ರದುರ್ಗ ಮೂಲದ ತಾಯವ್ವ’ ಟೀಕಿಸಿದರು.
‘ಭರತ ಹುಣ್ಣಿಮೆ ಅಂಗವಾಗಿ ಉಚ್ಚೆಂಗೆಮ್ಮ ದೇವಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದರು. ನುಸುಕಿನಲ್ಲೆ ದೇವಿ ದರ್ಶನಕ್ಕೆ ಭಕ್ತರು ತಂಡೋಪತAಡವಾಗಿ ಸಾಲುಗಟ್ಟಿ ನಿಂತಿದ್ದರು. ೧೨ ರ ಸುಮಾರಿಗೆ ಭಕ್ತರ ಪ್ರವಾಹವೆ ಹರಿದು ಬಂತು.
ಪಾದಗಟ್ಟೆ, ಬನ್ನಿ ಮಂಟಪ, ಹರಿಹರ ಬಾಗಿಲು ಬಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಜನರನ್ನು ನಿಂಯAತ್ರಿಸಲು ಪೊಲೀಸರು ಹರ ಸಹಾಸ ಪಟ್ಟರು. ಪರಸ್ಥಿತಿ ಬಿಗಡಾಯಸುತ್ತಿದ್ದಂತೆ ಡಿವೈಎಸ್ಪಿ ಸಂತೋಷ್ ಚೌಹಾಣ್ ಅಖಾಡಕ್ಕೆ ಧುಮ್ಮಿಕ್ಕಿದ್ದರು. ಭಕ್ತರ ಪ್ರತ್ಯೇಕ ಸಾಲುಗಳು ನಿರ್ಮಿಸಿ ನೂಕು ನುಗ್ಗಲು ಏರ್ಪಡದಂತೆ ಕರ್ತವ್ಯ ನಿರ್ವಹಿಸಿದರು.
ಪೋಲಿಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿ, ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆಗೆ ಕ್ರಮ ಕೈಗೊಂಡರೂ, ಇಕ್ಕಟ್ಟಾದ ಕಿರುದಾದ ಮುಖ್ಯ ರಸ್ತೆಯಲ್ಲಿ ಎರಡು ಕಿ.ಮೀ ದೂರದವರೆಗೆ ವಾಹನ ನಿಂತಿದ್ದವು.
Read also : ದಾವಣಗೆರೆ : ಶುಲ್ಕ ಮರುಪಾವತಿ ಯೋಜನೆ ಅವಧಿ ವಿಸ್ತರಣೆ
ಹುಣ್ಣಿಮೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ, ಮುಜುರಾಯಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಡ್ರೋನ್, ಸಿಸಿ ಕ್ಯಾಮೆರಾ, ಅನಿಷ್ಟ ಪದ್ದತಿ ಕುರಿತು ಜಾಗೃತಿ ಮೂಡಿಸಲಾಗುತ್ತಿತ್ತು.
ಉಚ್ಚಂಗಿದುರ್ಗದ ಶ್ರೀ ಉಚ್ಚಂಗ್ಯೆಮ್ಮ ದೇವಿಯ ಜಾತ್ರೆಗೆ ‘ದಶಕಗಳಿಂದ ಭರತ ಹುಣ್ಣಿಮೆಗೆ ಬರುತ್ತಿದ್ದು, ಹರಕೆ ತೀರಿಸಿ ಹೋಗುತ್ತೇವೆ’. ಅಲ್ಲಿನ ಆಚಾರ – ವಿಚಾರ ಗಮನ ಸೆಳೆಯುತ್ತದೆ’.ಯರೀಸ್ವಾಮಿ, ಭಕ್ತರು ಹರಪನಹಳ್ಳಿ.
