ದಾವಣಗೆರೆ ಫೆ.09 : ಜೀತಪದ್ದತಿಯೂ ಮಾನವೀಯತೆಗೆ ವಿರುದ್ದವಾದ ಪದ್ದತಿ, ಇದರಿಂದ ಮನುಷ್ಯ ಮನುಷ್ಯನನ್ನೇ ಪ್ರಾಣಿಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಮುಕ್ತಿ ಅಲೈಯನ್ಸ್ ಬೆಂಗಳೂರು, ಇವರ ಸಹಯೋಗದಲ್ಲಿ ಜೀತ ಕಾರ್ಮಿಕ ಪದ್ದತಿ ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ದತಿ ಕುರಿತು ಜಾಗೃತಿ ರಥ ಉದ್ಘಾಟಿಸಿ ಚಾಲನೆ ನೀಡಿ ಬಳಿಕ ಮಾತನಾಡಿದರು.
ನಮಲ್ಲಿ ಜೀತ ಪದ್ದತಿಯು ಸುಮಾರು 50 ವರ್ಷದ ಹಿಂದೆ ಕಳೆದು ಹೋಗಿದ್ದರೂ ಸಹ ಈಗಲೂ ಸಂಪೂರ್ಣವಾಗಿ ನಾಶವಾಗಿಲ್ಲ. ಈ ರಥವು ಮಾಹಿತಿಯ ಕಣಜವಾಗಿರುತ್ತದೆ. ಜಾಥ ಮೂಲಕ 13 ದಿನ 194 ಗ್ರಾಮ ಪಂಚಾಯಿತಿಯ ಎಸ್ಸಿ, ಎಸ್ಟಿ ಜನಾಂಗದವರು ವಾಸಿಸುವ ಕಾಲೋನಿಗಳಲ್ಲಿ ಬಾಲ ಕಾರ್ಮಿಕ ಪದ್ದತಿ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.
ಜೀತ ಕಾರ್ಮಿಕ ಪದ್ಧತಿಯ ಪ್ರಕರಣಗಳನ್ನು ಸಹ ಪತ್ತೆ ಹಚ್ಚಿ ಜೀತಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ಮಾಡೋಣ. ಜೀತಪದ್ಧತಿಯಿಂದ ಮುಕ್ತಗೊಳಿಸಿ ಆತ್ಮಸ್ಥೈರ್ಯ ತುಂಬಾಬೇಕು. ಜೀತ ಪದ್ದತಿಯು ನಗರ ಹಾಗೂ ನಗರಹೊರವಲಯದ ಪ್ರದೇಶಗಳಲ್ಲೇ ಹೆಚ್ಚಿಗೆ ಕಂಡುಬರುತ್ತಿದೆ. ಇಟ್ಟಿಗೆ ನಿರ್ಮಾಣ, ಸಣ್ಣ ಕೈಗಾರಿಕೆ, ಕಲ್ಲು ಕ್ವಾರಿ ಸೇರಿ ನಾನಾ ಕಡೆ ಈ ಪದ್ದತಿಯು ಇರುತ್ತದೆ. ಮುಖ್ಯವಾಗಿ ಹೊರಜಿಲ್ಲೆಗಳಿಂದ ಆಗಮಿಸುವ ಕೂಲಿ ಕಾರ್ಮಿಕರೇ ಈ ಪದ್ದತಿಗೆ ಬಲಿಯಾಗುತ್ತಿದ್ದಾರೆ ಎಂದರು.
Read also : ಯುಎಸ್-ಭಾರತ ವ್ಯಾಪಾರ ಒಪ್ಪಂದ,ನಮ್ಮ ಸಾರ್ವಭೌಮತ್ವದ ಮೇಲೆ ದಾಳಿ : ಆನಂದರಾಜು ಖಂಡನೆ
ಜೀತ ಕಾರ್ಮಿಕ ಪದ್ದತಿ ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ದತಿಯ ಕುರಿತು ಪ್ರತಿಜ್ಞಾವಿಧಿ ಭೋಧಿಸಿದರು. ಹಾಗೂ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನಲ್ಲಿ ಲಲಿತಾ ರಾಜೇಂದ್ರ ಎಂಬ ದಂಪತಿಗಳನ್ನು ಸುಮಾರು ವರ್ಷಗಳಿಂದ ಕೆಲಸಮಾಡಿಸಿ ಕೊಳ್ಳುತ್ತಿದ್ದ ಕೂಲಿ ಕಾರ್ಮಿಕರನ್ನು ಜೀತಪದ್ದತಿಯಿಂದ ವಿಮುಕ್ತಿಗೊಳಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಮಹಾಂತೇಶ್, ಕಾರ್ಮಿಕ ಇಲಾಖೆಯ ಅಧಿಕಾರಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.
