ದಾವಣಗೆರೆ : ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ‘ತಂಬಾಕು ಸೇವನೆ ಯಿಂದಾಗುವ ದುಷ್ಪರಿಣಾಮಗಳ ಅರಿವು ಕುರಿತು ಜಾಗೃತಿ’ ಕಾರ್ಯಕ್ರಮ ನಡೆಯಿತು.
ಶೈಲಾ ಶಾಮನೂರು ಅವರು ಮಾತನಾಡಿ, ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಹಾಗೂ ತಂಬಾಕು ಉತ್ಪನ್ನಗಳ ವ್ಯಸನದಿಂದ ಹೇಗೆ ಹೊರಬರಬೇಕೆಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್ ಅವರು ಮಾತನಾಡಿ,ಮಾದಕ ವ್ಯಸನದಿಂದ ಯುವಜನತೆಯು ಹೇಗೆ ತಮ್ಮನ್ನು ಕಾಪಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
Read also : ನೀಟ್|ವೈದ್ಯಕೀಯ ಆಕಾಂಕ್ಷಿಗಳ ಸಾವು ನೋವು: ಲೇಖನ ದರ್ಶನ್ ಕುರುಬಾಸ್
ಐ.ಕ್ಯೂ. ಎ.ಸಿ. ಸಂಚಾಲಕ ಡಾ.ರುದ್ರೇಶ ಬಿ.ಜೆ., ಎನ್.ಎಸ್.ಎಸ್. ಅಧಿಕಾರಿಗಳಾದ ಡಾ. ವಿಶ್ವನಾಥ ಪಿ ಮತ್ತು ಡಾ. ಕವಿತಾ ಅರ್.ಜಿ ಉಪಸ್ಥಿತರಿದ್ದರು.
