ಜಗಳೂರು: ಮಲೆನಾಡಿನಿಂದ ಬರದ ನಾಡಿಗೆ ಬಂದು ಬರದ ನಾಡಿನಿಂದ ಹಿಮಾಲಯ ಪರ್ವತಕ್ಕೆ ತೆರಳಿರುವ ಅಲ್ಲಿ ತಮ್ಮ ಸೇವೆಯನ್ನು ಮಾಡಲು ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಕಣ್ವ ಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು.
ರಾಜ್ಯದಲ್ಲಿ ಅತಿ ಹಿಂದುಳಿದಿರುವಂತಹ ಹೊರನಾಡು ಪ್ರದೇಶವಾಗಿದ್ದ ಜಗಳೂರು ತಾಲೂಕಿನಲ್ಲಿರುವ ಕಣ್ಣ ಕುಪ್ಪೆ ಗವಿಮಠದ ಪೀಠಾಧ್ಯಕ್ಷರಾದ ನಂತರ ಮಠದಲ್ಲಿ ಬೊಗಸೆ ಅಕ್ಕಿ ಇಲ್ಲದಂತಹ ಸಂದರ್ಭದಲ್ಲಿ ಪೀಠಾಧ್ಯಕ್ಷರಾದ ಇವರು ಅಕ್ಕ ಪಕ್ಕದ ಜಮೀನುಗಳಿಂದ ಸೊಪ್ಪು ತಂದು ಬೇಯಿಸಿಕೊಂಡು ಜೀವನ ನಡೆಸಿ ಮಠವನ್ನು ದೇಶ ಅಲ್ಲದೆ ವಿಶ್ವದಾದ್ಯಂತ ಪಸರಿಸುವಂತ ಕೆಲಸ ಶ್ರೀಗಳಿಂದ ನಡೆಯುತ್ತಿದೆ.
ಜನನ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದ ಎಂ ಡೇರೆಯ್ಯಸ್ವಾಮಿ ಮತ್ತು ಶಾರದಮ್ಮನವರ ಏಳು ಜನ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು.
ಬಾಲ್ಯ: ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಾಗಡಿ ಗ್ರಾಮದಲ್ಲಿ ಪ್ರೌಢ ಶಿಕ್ಷಣವನ್ನು ಹಿರೇಮಾಗಡಿ ಗ್ರಾಮದಲ್ಲಿ ಮುಗಿಸಿದ ನಂತರ ಬ್ಯಾಡಗಿ ತಾಲೂಕಿನಲ್ಲಿ ಶಿಕ್ಷಣ ಮುಂದುವರಿಸಿ ದಾಗ ಗುರುಪಾದರಾದ್ಯ ವೈದಿಕ್ಯ ಜ್ಯೋತಿಷ್ಯರ ಹತ್ತಿರ ಜ್ಯೋತಿಷ್ಯ ಕಲಿತರು ಇವರ ಆಸಕ್ತಿ ಮತ್ತು ನಿಷ್ಠೆಯನ್ನು ಕಂಡಂತಹ ಗುರುಪಾದರಾಧ್ಯರು ಬಾಳೆಹೊನ್ನೂರು ಪೀಠದ ಶ್ರೀಗಳಿಗೆ ಈ ಹುಡುಗ ಉತ್ತಮವಾಗಿ ಅಧ್ಯಯನ ಮಾಡಿಕೊಂಡಿದ್ದಾರೆ. ಯಾವುದಾದರೂ ಒಂದು ಮಠಕ್ಕೆ ಪೀಠಾಧಿಪತಿಯನ್ನಾಗಿ ಮಾಡಿದರೆ ಹೆಸರಾಂತ ಸ್ವಾಮಿಯಾಗಿ ಬೆಳೆಯ ಲಿದ್ದಾರೆ ಎಂದಾಗ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಣ್ವ ಕಣ್ವ ಕುಪ್ಪೆ ಗವಿಮಠದಲ್ಲಿ ಮುಮ್ಮಡಿ ಶ್ರೀಗಳು ಲಿಂಗೈಕ್ಯರಾಗಿ ಖಾಲಿ ಇದ್ದ ಸ್ಥಾನಕ್ಕೆ ಶ್ರೀಗಳನ್ನು ಪೀಠಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ವಿದ್ಯಾ ಶೈಕ್ಷಣಿಕ ಅರ್ಹತೆ: ಪಿಯುಸಿ ಐಟಿಐ ಬಿಎ ಪದವೀಧರರಾಗಿ , ಜ್ಯೋತಿಷ್ಯಶಾಸ್ತ್ರ ಆಗಮ ವೇದ ಮತ್ತು ಸಂಸ್ಕೃತ ಅಧ್ಯಾಯನ, ಶಂಭುಲಿಂಗಯ್ಯ ಡಿ ಎಂ ,ಪೂರ್ವಾಶ್ರಮದ ಹೆಸರಾಗುತ್ತು. ಉತ್ತರಾದಿ ಕತ್ವ: 2005 ಜೂನ್ 12ರಂದು ಭಾನುವಾರ ಉತ್ತರಾದಿಕತ್ವ ಪ್ರಾಪ್ತಿಯಾಯಿತು,
ಪಟ್ಟಾಧಿಕಾರ: 2005 ಮೇ 5 ರ ಭಾನುವಾರದಂದು ಪಟ್ಟ ಅಧ್ಯಕ್ಷರನ್ನಾಗಿ ಬಾಳೆಹೊನ್ನೂರು ಶ್ರೀಗಳು ಉಜ್ಜಯಿನಿ ಶ್ರೀಗಳು ನೇತೃತ್ವದಲ್ಲಿ ವೀರಶೈವ ಪದ್ಧತಿಯ ಪ್ರಕಾರ ಪಟ್ಟಾಧಿಕಾರವನ್ನು ಮಾಡಲಾಯಿತು.
ಖಾಲಿ ಮಠಕ್ಕೆ ಪೀಠಾಧಿಕಾರತ್ವ: ಮುಮ್ಮಡಿ ಶ್ರೀಗಳ ಲಿಂಗೈಕ್ಯರ ಮೂರು ವರ್ಷಗಳ ನಂತರ ಪಟ್ಟದ್ದಾಕ್ಷರಾಗಿ ಬಂದಂತ ಶ್ರೀಗಳಿಗೆ ಮಠದಲ್ಲಿ ಸೆರಿ ಅಕ್ಕಿಯೂ ಸಹ ಇಲ್ಲದೆ ಇರುವಂತ ಸ್ಥಿತಿಯಲ್ಲಿ ಶ್ರೀಗಳು 15 ದಿನಗಳ ಕಾಲ ಅಕ್ಕಪಕ್ಕದ ಜಮೀನುಗಳಿಂದ ಸೊಪ್ಪನ್ನು ತಂದು ಬೇಯಿಸಿಕೊಂಡು ಸೇವನೆ ಮಾಡಿ ಬದುಕಿದರು.
ಖಾಲಿ ಇದ್ದ ಮಠಕ್ಕೆ ಭಕ್ತರ ದಂಡು ಹರಿಯುವಂತೆ ಮಾಡಿದ ಶ್ರೀಗಳು: ಪ್ರತಿನಿತ್ಯ ಇವರ ಪೂಜಾ ಕಾರ್ಯಗಳು ಹಾಗೂ ಜ್ಯೋತಿಷ್ಯ ವಾಣಿಯ ನಂತರ ಜಿಲ್ಲೆ ಅಲ್ಲದೆ ರಾಜ್ಯ ವರರ ರಾಜ್ಯಗಳಿಂದ ಸಹ ಭಕ್ತ ಸಮೂಹವನ್ನು ಸಂಪಾದಿಸಿ ಮಠವನ್ನು ಅಭಿವೃದ್ಧಿಪಡಿಸಿದರು.
ತಾವು ಸೊಪ್ಪು ತಿಂದು ಮಠಕ್ಕೆ ಬರುವ ಭಕ್ತರಿಗೆ ಮೃಷ್ಟಾನ್ನ ನೀಡಿದ ಶ್ರೀಗಳು :ಪಟ್ಟಾಧಿಕರಾದ ಪ್ರಾರಂಭದ ದಿನಗಳಲ್ಲಿ ಸೊಪ್ಪು ತಿಂದು ಜೀವನ ನಡೆಸಿದ ಶ್ರೀಗಳು ಮಠಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಿದ್ದು ಪ್ರತಿನಿತ್ಯ ಮಠಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಇಂದಿಗೂ ಸಹ ನಡೆಯುತ್ತಿದೆ.
ಮಠದಲ್ಲಿ ಹಬ್ಬ ಆಚರಣೆಗಳು: ಯುಗಾದಿ ಸಂವತ್ಸರೋಸ್ತವ, ಪಟ್ಟಾದಿಕರ ವರ್ಧಂತಿ ಮಹೋತ್ಸವ, ಜೇಷ್ಠ ಆಶಾಡ ಮಾಶಗಳ ಪೂಜೆ, ಶ್ರಾವಣ ಮಾಸದ ವಿಶೇಷ ಪೂಜೆ, ಶರವನ್ನ ರಾತ್ರಿ ಪೂಜಾ ಮಹೋತ್ಸವ, ಧನುರ್ಮಾಸ ಪೂಜಾ ಸ್ಥಾನ ಪೂಜಾ ಕಾರ್ಯಗಳು ನಡೆಯುತ್ತಿದ್ದವು.
ಮಕರ ಸಂಕ್ರಾಂತಿ ಎಂದು ಮಹಾರಥೋತ್ಸವ: ಸಂಕ್ರಾಂತಿ ಶುಭದಿನದ ಧನುರ್ಮಾಸ ಪೂಜಾ ಪ್ರತಿಷ್ಠಾನ ಮಂಗಳ ಮತ್ತು ಕ್ಷೇತ್ರದ ಮೂಲಪುರುಷ ಶ್ರೀ ಗವಿ ಶಾಂತಲಿಂಗೇಶ್ವರ ಮಹಾ ರಥೋತ್ಸವ ಜರುಗುತ್ತಿದೆ.
ಕಣ್ವ ಕುಪ್ಪೆಯಿಂದ ಕೇದಾರನಾಥಕ್ಕೆ : 2011ರಲ್ಲಿ ಕೇದಾರನಾಥನ ದರ್ಶನ ಪಡೆದವರು ಕೇದಾರ ಶ್ರೀಗಳ ಗಳನ್ನು ಮಠಕ್ಕೆ ಕರೆಸಿ ಪೂಜಾ ಕಾರ್ಯಗಳನ್ನು ಮಾಡಬೇಕೆಂಬ ಉದ್ದೇಶದಿಂದ ಭಕ್ತಿಯಿಂದ ಆಹ್ವಾನ ನೀಡಿದಾಗ ಕೇದಾರ ಶ್ರೀಗಳು 2013ರಲ್ಲಿ ಕಣ್ವ ಕುಪ್ಪೆ ಗವಿಮಠಕ್ಕೆ ಬಂದು ಶ್ರಾವಣ ಮಾಸದ ಪೂಜಾ ಕಾರ್ಯಗಳನ್ನು ಮಾಡಿದರು. ಈ ವೇಳೆ ಕೇದಾರ ಶ್ರೀಗಳು ಕಣ್ವ ಕುಪ್ಪೆ ಶ್ರೀಗಳ ಪೂಜಾ ಕಾರ್ಯವನ್ನು ನೋಡಿ ಶಿಷ್ಯಾತ್ವಾಧಿಕಾರವನ್ನು ನೀಡಿದರು.
Read also : ಎ.ವಿ.ಕಮಲಮ್ಮ ಮಹಿಳಾ ಕಾಲೇಜ್ : ತಂಬಾಕು ಸೇವನೆ ಜಾಗೃತಿ ಕಾರ್ಯಕ್ರಮ
ನಂತರ ಕೇದಾರನಾಥ ಶ್ರೀಗಳ ಆಹ್ವಾನದಂತೆ ಕಣ್ವ ಕುಪ್ಪೆ ಶ್ರೀಗಳು 2015ರಲ್ಲಿ ಕೇದಾರದಲ್ಲಿ 183 ದಿನಗಳ ಕಾಲ ಮಹಾಮಂಡಲ ಪೂಜಾ ಕಾರ್ಯವನ್ನು ನೆರವೇರಿಸಿದರು.
ನಂತರ ಆಗಾಗ ತೆರಳಿ ಪೂಜಾ ಕಾರ್ಯಗಳನ್ನು ಮಾಡುತ್ತಿದ್ದ ಶ್ರೀಗಳಿಗೆ ಕೇದಾರ ಶ್ರೀಗಳು 2026 ಫೆಬ್ರವರಿ 12ರಂದು ಕೇದಾರನಾಥ ಪೀಠಕ್ಕೆ ಉತ್ತಾರಧಾರಿಯಾಗಿ ನೇಮಕ ಮಾಡಿದ್ದಾರೆ. ತಾಲೂಕಿನ ಕೀರ್ತಿಯನ್ನು ರಾಜ್ಯಾ ದೇಶ ಅಲ್ಲದೆ ವಿಶ್ವಕ್ಕೆ ಪಸರಿಸುವಂತಹ ಕೆಲಸ ಶ್ರೀಗಳಿಂದ ನಡೆದಿದೆ.
