ಜಗಳೂರು : ಕಾಯಕದಲ್ಲಿ ಶ್ರದ್ಧೆ ಭಕ್ತಿ ಗುರು ನಿಷ್ಠೆ ಇದ್ದರೆ ಪರಮಾತ್ಮನು ಆಶೀರ್ವಾದ ಮಾಡುತ್ತಾನೆ. ಕೇದಾರ ಪೀಠಕ್ಕೆ ಉತ್ತರಾಧಿಕಾರಿಯನ್ನಾಗಿ ಘೋಷಣೆ ಮಾಡಿದ ಸಂದರ್ಭ ನನಗೆ ಆಶ್ಚರ್ಯವಾಗಿತ್ತು ಎಂದು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾಸ್ವಾಮೀಜಿಯವರು ಕೇದಾರ ಪೀಠದ ಉತ್ತರಾಧಿಕಾರಿಯಾಗಿ ನೇಮಕಗೊಂಡು ಇದೇ ಪ್ರಥಮ ಬಾರಿಗೆ ಆಗಮಿಸಿದ ಹಿನ್ನೆಲೆ ಭಕ್ತಸಮೂಹ ಕಣ್ವ ಕುಪ್ಪೆ ಮಠದಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಸ್ವಾಗತ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಆಶೀರ್ಚನ ನೀಡಿದರು.
ನಾನು ಕೇದಾರ ಪೀಠದ ಉತ್ತರಾಧಿಕಾರಿಯಾಗುವ ಅಪೇಕ್ಷಿತನಲ್ಲ, ಕಣ್ವ ಕುಪ್ಪೆ ಮಠದಲ್ಲಿ 2012ರಲ್ಲಿ ನಡೆದ ಧರ್ಮ ಅನುಷ್ಠಾನ ಕಾರ್ಯಕ್ರಮದಲ್ಲಿ ಕೇದಾರ ಶ್ರೀಗಳ ಭಾಗವಹಿಸಿದ್ದರು ಈ ವೇಳೆ ಸಾಮಿಪ್ಯ ದಿಂದ ಅವರು ನನ್ನ ಧಾರ್ಮಿಕ ಸೇವೆ ಗುರುತಿಸಿರುವುದು ಸುಕೃತ ಸೌಭಾಗ್ಯ ನನ್ನದು ಭಗವಂತನ ಇಚ್ಛೆಯಂತೆ ಅವಕಾಶ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಪ್ರಾಮಾಣಿಕ ಕರ್ತವ್ಯವನ್ನು ಮಾತ್ರ ಮಾಡಬೇಕು.ಅದರ ಫಲಾಫಲವನ್ನು ಭಗವಂತನ ಇಚ್ಛೆಗೆ ಬಿಡಬೇಕು.ಭಗವಂತ ಮೆಚ್ಚಿದರೆ ಮನೆಯ ಚಪ್ಪರ ಕಿತ್ತು ಹಾಕಿ ಶಾಂತಿ,ನೆಮ್ಮದಿ,ಐಶ್ವರ್ಯ ಕೊಡತ್ತಾನೆ. ಮುನಿದರೆ ಚರ್ಮ ಹರಿದು ಕಸಿದುಕೊಳ್ಳುತ್ತಾನೆ ಎಂದರು.
ಫೆ.12 ರಂದು ಕೇದಾರದಲ್ಲಿ 2 ಲಕ್ಷ ಭಕ್ತಸಮೂಹ ನೆರದಿದ್ದನ್ನು ಕಂಡು ಅಚ್ಚರಿಗೊಳಿಸಿತು.108 ಕುಂಡ ಗಳಲ್ಲಿನ ಯಜ್ಞಯಾಗಾದಿ,ಪ್ರಸಾದ,ಪೂಜಾಕೈಂಕರ್ ಯಗಳು ವಿಶೇಷವಾಗಿತ್ತು.ವೇದಿಕೆಯಲ್ಲಿ ನನ್ನನ್ನು ಉತ್ತರಾಧಿಕಾರಿಯಾಗಿ ಘೋಷಿಸಿದರು. ಕೇದಾರ ಪೀಠದ ಬಾಗಿಲು ರಾಷ್ಟ್ರಪತಿ,ಪ್ರಧಾನಮಂತ್ರಿಗಳು ಆಗಮಿಸಿದರೂ ಬಾಗಿಲು ತೆರೆಯದೆ,ಕೇದಾರ ಶ್ರೀಗಳು ಆಗಮಿಸಿದರೆ ಮಾತ್ರ ಬಾಗಿಲು ತೆರೆಯುವುದು ವಿಶೇಷವಾಗಿದೆ ಎಂದರು.
ಮಲೆನಾಡಿನಿಂದ ಬರದನಾಡಿಗೆ 2006 ರಲ್ಲಿ ಆಗಮಿಸಿದ ವೇಳೆ ಒಂದು ಕೆಜಿ ಅಕ್ಕಿಯೂ ಇಲ್ಲದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಮಠವನ್ನು ಬೆಳೆಸಿರುವೆ.ಮುಮ್ಮಡಿ ಶಾಂತಲಿಂಗ ಸ್ವಾಮೀಜಿ ಅವರ ಕೃಪಾಶೀರ್ವಾದದಿಂದ ನಾನು ಸಾಗುವೆ. ಹೃದಯಭಾಗ ಕಣ್ವಕುಪ್ಪೆ ಮಠವನ್ನು ಬಿಡುವುದಿಲ್ಲ.ಭಕ್ತರಲ್ಲಿ ಆತಂಕಸಲ್ಲದು,ವರ್ಷದ ವೈಶಾಖ,ಜೇಷ್ಠ ಮಾಸದಲ್ಲಿ ಮಾತ್ರ ಕೇದಾರಕ್ಕೆ ತೆರಳಲಾಗುವುದು.ಉಳಿದಂತೆ ಭಕ್ತರಿಗೆ ಸ್ಥಳೀಯವಾಗಿ ಲಭ್ಯವಾಗುವೆ.ಕೇದಾರ ಪೀಠ ಅಲಂಕರಿಸಲು ಇನ್ನೂ ಅನೇಕ ಕಾಯ್ದೆಗಳು,ವ್ರತಗಳಿವೆ ಎಂದು ತಿಳಿಸಿದರು.
ವಿಜಯನಗರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡಮುಣಗು ತಿಪ್ಪೇಸ್ವಾಮಿ ಮಾತನಾಡಿ,ಕೇದಾರ ಪೀಠದಲ್ಲಿ ಬೃಹತ್ ವೇದಿಕೆಯಲ್ಲಿ ಲಕ್ಷಾಂತರ ಭಕ್ತ ಸಮೂಹದ ಸಮ್ಮುಖದಲ್ಲಿ ಕಣ್ವಕುಪ್ಪೆ ಶ್ರೀಗಳು ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವುದು ಸಂತಸ ತಂದಿದೆ.ಭೀಮಾಶಂಕರ ಭಗವತ್ಪಾದರ ನಂತರ ಕೇದಾರ ಪೀಠ ಕಣ್ವಕುಪ್ಪೆ ಶ್ರೀಗಳ ಸಾರಥ್ಯದಲ್ಲಿ ಇನ್ನೂ ಉನ್ನತಮಟ್ಟದಲ್ಲಿ ಅಭಿವೃದ್ದಿಗೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗದ ವಿಜಾಪುರ ಬಸವರಾಜ್ ಮಾತನಾಡಿ,ಅತ್ಯಂತ ಆಳವಾದ ಆಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸಿ,ನಿರ್ಗಗಳವಾಗಿ ಆಶೀರ್ವಚನ ನೀಡುವ ಕಣ್ವಕುಪ್ಪೆ ಶಾಂತಲಿಂಗ ಸ್ವಾಮೀಜಿ ಅವರ ಪರಿಶ್ರಮಕ್ಕೆ ಇನ್ನೂ ಉತ್ತಮ ಧಾರ್ಮಿಕ, ಸಾಮಾಜಿಕ ಸೇವೆಗೆ ಉತ್ತಮ ಅವಕಾಶಸಿಕ್ಕಿದೆ ಎಂದರು.
ಈ ಸಂದರ್ಭದಲ್ಲಿ ಭಕ್ತರಾದ ಶರಣಪ್ಪ,ಬಸವರಾಜ್,ಪ್ರಕಾಶ್,ಜಯ್ಯಣ್ ಣ,ಮುರುಗೇಶ್,ರುದ್ರೇಶ್,ಎನ್.ಎಂ.ಲೋ ಕೇಶ್,ಶಿವಕುಮಾರ್ ಸ್ವಾಮಿ,ಡಾ.ಹಾಲಸ್ವಾಮಿ, ಕರಿಬಸಪ್ಪ , ಅರುಣ್ ಕುಮಾರ್ ಸೇರಿದಂತೆ ನೂರಾರು ಸಂಖ್ಯೆಯ ಭಕ್ತರು ಇದ್ದರು.
ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕಾಗಿರುವ ಜಗಳೂರಿನಲ್ಲಿ ಕಣ್ವ ಕುಪ್ಪೆ ಗವಿ ಮಠ ಇರುವುದು ವಿಶೇಷ ಅದರಲ್ಲಿಯೂ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠಕ್ಕೆ ಉತ್ತರ ಅಧಿಕಾರಿಯಾಗಿ ನೇಮಕವಾಗಿರುವುದು ತಾಲೂಕು ಅಲ್ಲದೆ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್
