ಜಗಳೂರು : ಗುರುಸಿದ್ದೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ತಾಲೂಕಿನ ಬಿದರಕೆರೆ ಗ್ರಾಮದ ಆರಾಧ್ಯ ದೈವವಾದ ಶ್ರೀ ಗುರು ಸಿದ್ದೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಜರುಗಿತು ಸ್ವಾಮಿಯ ಮೂರ್ತಿಯನ್ನು ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ವಿವಿಧ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಮಾಡಿದ ನಂತರ ರಥೋತ್ಸವದ ಪಟದ ಹಾರಜು ಪ್ರಕ್ರಿಯೆ ನಡೆಯಿತು.
ಹರಾಜು ಪ್ರಕ್ರಿಯೆಯಲ್ಲಿ ತಾಪಂ ಮಾಜಿ ಸದಸ್ಯ ಬಸವರಾಜು ಎಂಬತ್ತು ಸಾವಿರದ ಒಂದು ರೂ ಗೆ ತೆಗೆದುಕೊಂಡರು.
ನಂತರ ಸೇರಿದ್ದ ಸಾವಿರಾರು ಭಕ್ತಾದಿಗಳು ಸ್ವಾಮಿಯನ್ನು ನೆನೆಯುತ್ತ ರಥವನ್ನು ಎಳೆದರು.
ಇದನ್ನೂ ಓದಿ : ದಾವಣಗೆರೆಯ ಯುವ ಗಾಯಕಿ ಫಿಲ್ಮ್ ಫೇರ್ ಅವಾರ್ಡ್ ಗೆ ನಾಮಿನೇಟ್
ಸ್ವಾಮಿಯ ರಥೋತ್ಸವವನ್ನು ಮಾಡುವುದರಿಂದ ಸಕಾಲಕ್ಕೆ ಮಳೆ ಬೆಳೆಯಾಗಲಿದ್ದು ಊರಿನಲ್ಲಿ ಗ್ರಾಮದಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂಬುದು ಹಿರಿಯರ ನಂಬಿಕೆಯಾಗಿದೆ.
ರಥೋತ್ಸವದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಸರ್ಕಾರಿ ನೌಕರ ಸಂಘದ ನಿರ್ದೇಶಕ ಸತೀಶ್ , ಪ್ರಧಾನ ಕಾರ್ಯದರ್ಶಿ ಧರ್ಮನಾಯ್ಕ್, ರಥೋತ್ಸವಕ್ಕೆ ಬಿದರಕೆರೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ದಾವಣಗೆರೆ, ಚಿತ್ರದುರ್ಗ, ಚಳ್ಳಕೆರೆಯ ಭಕ್ತಾದಿಗಳು ಭಾಗವಹಿಸಿದ್ದರು.
