Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ನಾಯಕ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಬಡ್ತಿಯಿಂದ ವಂಚಿತ : ಮಾರಪ್ಪ ನಾಯಕ ಮಗದಂಪೂರ ಆಕ್ರೋಶ
ತಾಜಾ ಸುದ್ದಿ

ನಾಯಕ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಬಡ್ತಿಯಿಂದ ವಂಚಿತ : ಮಾರಪ್ಪ ನಾಯಕ ಮಗದಂಪೂರ ಆಕ್ರೋಶ

Dinamaana Kannada News
Last updated: March 1, 2026 4:04 pm
Dinamaana Kannada News
Share
Davanagere
SHARE

ಜಗಳೂರು : ರಾಜ್ಯದಲ್ಲಿ 15 ಜನ ಶಾಸಕರಿದ್ದರು ಇವರಿಗೆ ಸಮುದಾಯದ ಮೇಲೆ ಕಾಳಜಿ ಇಲ್ಲ ಸಮುದಾಯದ ಮೇಲೆ ಹಲ್ಲೆಗಳು ಸಹ ಅತ್ಯಾಚಾರವಾದರೂ ಸಹ 15 ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ ಜೊತೆಗೆ 5 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣ ಪತ್ರವನ್ನು ಅನ್ಯ ಸಮುದಾಯದವರು ಪಡೆದುಕೊಂಡಿದ್ದಾರೆ. ಇದರಿಂದಾಗಿ ನಾಯಕ ಸಮುದಾಯದವರು ಉದ್ಯೋಗ ಶಿಕ್ಷಣ, ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರು ಹಾಗೂ ಅಧ್ಯಕ್ಷರು ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮಾರಪ್ಪ ನಾಯಕ ಮಗದಂಪೂರ ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಮುಂಭಾಗದಲ್ಲಿ ಪರಿಶಿಷ್ಟ ಪಂಗಡದ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಟ ,ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ ಶಾಸಕರುಗಳ ಮನೆಯ ಮುಂದೆ ಪ್ರತಿಭಟನೆ ಧರಣಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದರ ಬಗ್ಗೆ ಅಧಿವೇಶನದಲ್ಲಿ ಮಾತನಾಡಬೇಕು ಎಂಬ ಆಸಕ್ತಿ ಕೂಡ ಈ ಶಾಸಕರಿಗೆ ಇಲ್ಲದೇ ಇರುವುದರಿಂದ ಎಸ್ಟಿ ಸಮುದಾಯದ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯಗಳ ನಡೆಯುತ್ತಲೇ ಇವೆ ಎಂದರು.

ರಾಜ್ಯದಲ್ಲಿ 75 ಲಕ್ಷಕ್ಕೂ ಅಧಿಕ ನಾಯಕ ಸಮಾಜದವರಿಂದ ಇವರು 15 ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆಯಾದ ಶಾಸಕರು ಸಮುದಾಯದ ಅಭಿವೃದ್ಧಿಯ ಬಗ್ಗೆ ಮರೆತು ಹೋಗಿದ್ದಾರೆ. 2ಕ್ಕೂ ಅಧಿಕ ದಿನಗಳ ಕಾಲ ವಾಲ್ಮೀಕಿ ಶ್ರೀಗಳು ಹೋರಾಟದ ಫಲವಾಗಿ ಮೂರರಷ್ಟಿದ್ದ ಮೀಸಲಾತಿಯನ್ನು ಏಳಕ್ಕೆ ಏರಿಕೆಯಾಗಿದೆ. ಆದರೆ, ರಾಜ್ಯ ಸರ್ಕಾರ ಹಳೇ ಮೀಸಲಾತಿ ಪ್ರಕಾರ ನೇಮಕಾತಿ ಮಾಡಲು ಹೊರಟಿರುವುದು ನಾಯಕ ಸಮುದಾಯಕ್ಕೆ ಮರಣ ಶಾಸನವಾಗಲಿದೆ ಎಂದು ಕಿಡಿಕಾರಿದರು.

5 1/2 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವಂತಹ ಅನ್ಯ ಸಮುದಾಯದವರು ನಾಯಕ ಸಮಾಯನ ಸಮುದಾಯದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದಂತವರು ವೈದ್ಯಕೀಯ ಇಂಜಿನಿಯರಿಂಗ್ ಸೇರಿದಂತೆ ಇತರೆ ಪದವಿಗಳಲ್ಲಿ ಸ್ಥಾನಗಿತ್ತಿಸಿಕೊಳ್ಳುತ್ತಿದ್ದಾರೆ ಹಾಲಿ ಉದ್ಯೋಗದಲ್ಲಿರುವ ಸಮುದಾಯದವರು ಬಡ್ತಿ ಇಲ್ಲದೆ ಅದೇ ಹುದ್ದೆಯಲ್ಲಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನಿಗಮದಲ್ಲಿದ್ದ ಸಾವಿರ ಕೋಟಿ ರೂಗಳನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿದ್ದು ಕೂಡಲೇ ಸರ್ಕಾರವು 15 ಸಾವಿರ ಕೋಟಿ ರೂಗಳನ್ನು ಮೀಸಲಿಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು.

ನಾಯಕ ಸಮಾಜದ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ 15 ಜನ ಶಾಸಕರು ಮುಂಬರುವ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಬನ್ನಿ ಎಂದು ಸೂಚನೆ ನೀಡಿದರು.

ರಾಜ್ಯ ಎಸ್ಸಿ ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿಯ ರಾಜ್ಯಾಧ್ಯಕ್ಷ ಶ್ರವಣಕುಮಾರ ಡಿ ನಾಯಕ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದಲ್ಲಿ ತಾಂಡವಾಡುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 5,000ಕ್ಕೂ ಹೆಚ್ಚು ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಇದು ತನಿಖೆ ಯಾಗಬೇಕು ಸರ್ಕಾರ 56 ಸಾವಿರ ಹುದ್ದೆಯನ್ನು ತುಂಬುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದು ಎಸ್ಸಿ ಸಮುದಾಯದ ಒಳ ಮೀಸಲಾತಿಯಂತೆ ಮತ್ತು ಎಸ್ಟಿ ಸಮುದಾಯದ ಮೀಸಲಾತಿಯಂತೆ ನೇಮಕಾತಿಯನ್ನು ಮಾಡಿಕೊಳ್ಳಬೇಕು. ಎಂದು ಒತ್ತಾಯಿಸಿದರು.

Read also : ಒಳ ಮೀಸಲಾತಿ ವರ್ಗೀಕರಣ ಜಾರಿಗೆ ವಿಳಂಬ:ದಾವಣಗೆರೆ ಬಂದ್‌ಗೆ ಮಾದಿಗ ಸಂಘಟನೆಗಳ ಕರೆ

ಈ ವೇಳೆ ಎಸ್ ಕೆ ಪಿ ಸಿ ಸಿ ಎಸ್ ಟಿ ಪ್ರಧಾನ ಕಾರ್ಯದರ್ಶಿ ಎಂಡಿ ಕೀರ್ತಿ ಕುಮಾರ್ ಮನವಿ ಸ್ವೀಕರಿಸಿ ಮಾತನಾಡಿ, ಸಮಾಜಕ್ಕೆ ಆಗುತ್ತಿರುವಂತ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವುದು ಶ್ಲಾಘನೀಯ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇರುವುದು ಸಮುದಾಯದ ಶಾಸಕರುಗಳು ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದಾಗ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ತುಮಕೂರಿನ ಹಿರಿಯ ಮುಖಂಡ ಮಾರಣ್ಣ ಪಾಳೆಗಾರ, ರಾಜ್ಯ ಉಪಾಧ್ಯಕ್ಷ ನಿಜಲಿಂಗಪ್ಪ, ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗಪ್ಪ ನಾಯಕ, ಯುವ ಹೋರಾಟಗಾರರಾದ ನಿಂಗಣ್ಣ ಎಂ ಚಿಗರಹಳ್ಳಿ, ಜಗಳೂರು ತಾಲೂಕಿನ ಅಧ್ಯಕ್ಷ ಬುಳ್ಳೆನಳ್ಳಿ ನಾಗರಾಜ್ , ಉಪಾಧ್ಯಕ್ಷ ಸಿಡಿ ಹನುಮಂತಪ್ಪ, ಕಾರ್ಯದರ್ಶಿ ಸೂರಲಿಂಗಪ್ಪ ಮುಖಂಡರಾದ ಲಕ್ಷ್ಮಣ ಸೇರಿದಂತೆ ಮತ್ತಿತರರು ಹಾಜರಿದ್ದರು.

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂನಾಯಕ ಸಮುದಾಯ
Share This Article
Twitter Email Copy Link Print
Previous Article Davanagere ಒಳ ಮೀಸಲಾತಿ ವರ್ಗೀಕರಣ ಜಾರಿಗೆ ವಿಳಂಬ:ದಾವಣಗೆರೆ ಬಂದ್‌ಗೆ ಮಾದಿಗ ಸಂಘಟನೆಗಳ ಕರೆ
Next Article jagalore ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು : ಡಾ.ಎ.ಬಿ.ರಾಮಚಂದ್ರಪ್ಪ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

ಗುಡಿಸಲ ಬಾಗಿಲಲ್ಲಿ ಹಸಿದ ಹೊಟ್ಟೆಯಲ್ಲಿ ಭಾರ ಹೊತ್ತವಳ ಬರುವಿಕೆಗೆ ಕರುಳಪ್ರೀತಿಯ ಕಣ್ಣುಗಳ ಸದಾ ಕಾಯುವಿಕೆ ಗುಡಿಸಲೊಳಗೆ  ಕಗ್ಗತ್ತಲು ಆಗಲೇ ಉರಿದು…

By Dinamaana Kannada News

ರೌಡಿಶೀಟರ್‌ಗಳ ಪರೇಡ್ | ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ : ಎಸ್ಪಿ

ದಾವಣಗೆರೆ (Davanagere): ಜನರಿಗೆ ಅನಗತ್ಯವಾಗಿ ತೊಂದರೆ ನೀಡಿದರೆ ಹಾಗೂ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ರೌಡಿಶೀಟರ್‌ಗಳಿಗೆ ಜಿಲ್ಲಾ…

By Dinamaana Kannada News

ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್‌ ಅವಹೇಳನ : ಪ್ರಕರಣ ದಾಖಲು

ದಾವಣಗೆರೆ (Davanagere) : ಡಾ.ಬಿ.ಆರ್.ಅಂಬೇಡ್ಕರ ಬಗ್ಗೆ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವವರ ವಿರುದ್ದ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ…

By Dinamaana Kannada News

You Might Also Like

jagalore
ತಾಜಾ ಸುದ್ದಿ

ದುಬೈ ಪ್ರವಾಸ : ಜಗಳೂರು ತಾಲೂಕಿನ 15 ಜನ ಪ್ರವಾಸಿಗರು ಸುರಕ್ಷಿತ

By Dinamaana Kannada News
jagalore
ತಾಜಾ ಸುದ್ದಿ

ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು : ಡಾ.ಎ.ಬಿ.ರಾಮಚಂದ್ರಪ್ಪ

By Dinamaana Kannada News
Davanagere
ತಾಜಾ ಸುದ್ದಿ

ಒಳ ಮೀಸಲಾತಿ ವರ್ಗೀಕರಣ ಜಾರಿಗೆ ವಿಳಂಬ:ದಾವಣಗೆರೆ ಬಂದ್‌ಗೆ ಮಾದಿಗ ಸಂಘಟನೆಗಳ ಕರೆ

By Dinamaana Kannada News
District Collector G.M. Gangadharaswamy
ತಾಜಾ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಬಿಸಿಗಾಳಿ: ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿ ಪ್ರಕಟ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?