Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು : ಡಾ.ಎ.ಬಿ.ರಾಮಚಂದ್ರಪ್ಪ
ತಾಜಾ ಸುದ್ದಿ

ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು : ಡಾ.ಎ.ಬಿ.ರಾಮಚಂದ್ರಪ್ಪ

Dinamaana Kannada News
Last updated: March 1, 2026 4:20 pm
Dinamaana Kannada News
Share
jagalore
SHARE
ಜಗಳೂರು: ಸಮಾಜದಲ್ಲಿ ಶೋಷಿತ ಸಮುದಾಯಗಳಿಂದ  ಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು ಎಂದು ಮಾನವಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ.ರಾಮಚಂದ್ರಪ್ಪ ಹೇಳಿದರು.
ಭಾನುವಾರ ಪಟ್ಟಣದ ಪ್ರೇರಣಾ ಚರ್ಚ್ ನಲ್ಲಿ ಮಾನವಬಂಧುತ್ವ ವೇದಿಕೆ ತಾಲ್ಲೂಕು ಘಟದದಿಂದ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶೋಷಿತ ಸಮುದಾಯಗಳಿಗೆ ಕೋಮುವಾದಿ ಸರಕಾರಗಳು ಧರ್ಮದ ಅಫೀಮು ಬೆರೆಸಿದ್ದಾರೆ.ಮನುವಾದ ವಿಜಂಭಿಸುವ ಹುನ್ನಾರ ನಡೆಯುತ್ತಿದೆ.ಮನುವಾದಕ್ಕೆ ಸಂವಿಧಾನವೇ ಪ್ರತಿರೋಧ ಶಕ್ತಿಯಾಗಿದೆ.ತಳಸಮುದಾಯಗಳಿಗೆ ಅರಿವಿಲ್ಲದ ರೀತಿ ಯಲ್ಲಿ ಪೂರ್ವಜರ ಕಾಲಘಟ್ಟದಿಂದಲೂ ದೇವದಾಸಿ ಪದ್ದತಿ,ಶೋಷಣೆ,ಮೌಢ್ಯತೆಗಳಿಗೆ ಬಲಿಯಾಗಿದ್ದಾರೆ.ಬಡತನ,ಜಾತಿ ಪದ್ದತಿಯಿಂದ ಇಂದಿಗೂ ಉತ್ತಮ ಶಿಕ್ಷಣ ಸಿಗುತ್ತಿಲ್ಲ.ಪ್ರತಿಯೊಬ್ಬರೂ ಸಂವಿಧಾನ ಬದ್ದ ಹಕ್ಕುಗಳನ್ನು ಸದ್ಬಳಕೆ ಮಾಡಿ ಕೊಂಡು ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಮಕ್ಕಳ ಬದುಕಿನಲ್ಲಿ ಅಕ್ಷರದ ಬೆಳಕು ಚೆಲ್ಲಬೇಕು.ಎಲ್ಲಾ ವರ್ಗದವರಲ್ಲಿಯೂ ಬ್ರಾಹ್ಮಣ್ಯವಾದಕ್ಕೆ ಕಡಿವಾಣಹಾಕಬೇಕು.ರಾಜಕೀಯ,ಶೈಕ್ಷಣಿಕ,ಆರ್ಥಿಕ,ಸಾಮಾಜಿಕ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರಬೇಕಿದೆ.ಕೆಲ ಹುಸಿ ದೇಶ ಪ್ರೇಮಿ ಗಳಿಂದ  ದೇಶದ ಸಂವಿಧಾನಕ್ಕೆ ಆಪತ್ತು ಎದುರಾಗುತ್ತಿದೆ. ಬಹುತ್ವ ರಾಷ್ಟ್ರದಲ್ಲಿ ಏಕತ್ವ ಸಾಧಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿಸ್ವಾರ್ಥ ಮನೋಭಾವದಿಂದ ಮಾನವಬಂಧುತ್ವ ವೇದಿಕೆ ವತಿಯಿಂದ ಉಚಿತ ತರಬೇತಿ ಕೇಂದ್ರ ತೆರೆದು,ಊಟ,ವಸತಿಯೊಂದಿಗೆ ಶೋಷಿತ ವರ್ಗದ ಮಕ್ಕಳಿಗೆ ಆಸಕ್ತ ಕ್ಷೇತ್ರದಲ್ಲಿ ಬದುಕು ರೂಪಿ ಸಲು ತರಬೇತಿ ನೀಡುತ್ತಿದೆ. ಮಾನವಬಂಧುತ್ವ ವೇದಿಕೆ ಯಾವುದೇ ಧರ್ಮ,ಸಂಸ್ಕೃತಿ ವಿರೋಧಿಯಲ್ಲ.ವೈಚಾರಿಕತೆಯಡಿ ದೇಶದ ವಾಸ್ತವಿಕತೆಯನ್ನು ಜನಸಾಮಾನ್ಯರಿಗೆ ಜಾಗೃತಿಮೂಡಿಸುದಾಗಿದೆ ಎಂದು ಹೇಳಿದರು.

ಪ್ರಾಂಶುಪಾಲ ಬಿ.ನಾಗಲಿಂಗಪ್ಪ ಮಾತನಾಡಿ,ಸಂವಿಧಾನ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ  ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರು ತಿರುಚುವ ಮೂಲಕ ಸಮಾಜದಲ್ಲಿ ಸಾಮರಸ್ಯತೆ ಹಾಳುಮಾಡುವುದಲ್ಲದೆ ಅಂಬೇಡ್ಕರ್ ಅನುಯಾಯಿಗಳಿಗೆ ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾರೆ.ದೇಶದಲ್ಲಿ ಸಂವಿಧಾನ ಎಲ್ಲಾವರ್ಗದವರಿಗೂ ಮೀಸಲಾತಿ ಹಕ್ಕು ಕಲ್ಪಿಸಿದೆ.ಮಹಿಳೆಯರಿಗೆ ಸಮಾನತೆ,ಮತದಾನ,ಆಸ್ತಿ ಹಕ್ಕು ನೀಡಿದೆ ದೇಶದಲ್ಲಿ ಧರ್ಮ,ದೇವರುಗಳಿಂದ ಬದಲಾವಣೆ ಸಾಧ್ಯವಿಲ್ಲ ಸಂವಿಧಾನದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ನಿರೂಪಿಸಿದರು.

Read also : ನಾಯಕ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಬಡ್ತಿಯಿಂದ ವಂಚಿತ : ಮಾರಪ್ಪ ನಾಯಕ ಮಗದಂಪೂರ ಆಕ್ರೋಶ
ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಸಂಚಾಲಕ ವಕೀಲ ಟಿ.ಬಸವರಾಜ್ ಮಾತನಾಡಿ,ತಾಲ್ಲೂಕಿನಲ್ಲಿ ಮೌಢ್ಯತೆಗಳನ್ನು ತೊಲಗಿಸಲು ಮಾನವ ಬಂಧುತ್ವ ವೇದಿಕೆಯಡಿ ಸ್ಮಶಾನವಾಸ್ತವ್ಯ,ಬಸವಪಂಚಮಿ,ಸೇರಿದಂತೆ ಹಲವಾರು ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ.45 ಗ್ರಾಮಶಾಖೆಗಳನ್ನು ಸ್ಥಾಪಿಸಲಾಗಿದೆ ಮುಂದಿನ ದಿನಗಳಲ್ಲಿ ಹೋಬಳಿವಾರು ಶಾಖೆಗಳನ್ನು ಸ್ಥಾಪಿಸಿ ಜನಜಾಗೃತಿಯೊಂದಿಗೆ ಬೃಹತ್ ಕಾರ್ಯಕ್ರಮ ಆಯೋಜಿಸಿ,ಮಾನವ ಬಂಧುತ್ವ ವೇದಿಕೆಯ ರುವಾರಿಗಳಾಗದ ಸಚಿವ ಜಾರಕಿಹೊಳಿ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವವೇದಿಕೆಯ ವಿಭಾಗೀಯ ಸಂಚಾಲಕ ಮಾಡಾಳ್ ಶಿವಕುಮಾರ್,ಜಿಲ್ಲಾ ಸಂಚಾಲಕ ಧನ್ಯಕುಮಾರ್ ಎಚ್.ಎಂ ಹೊಳೆ,ಫಾದರ್ ರೊನಾಲ್ಡ್,ವಕೀಲರಾದ ಆರ್ ಓಬಳೇಶ್,ತಿಪ್ಪೇಸ್ವಾಮಿ ಸಿ.ಎಂ ಹೊಳೆ,ಜೆ.ಟಿ ಮಹಾಂತೇಶ್,ರುದ್ರೇಶ್,ಕರಿಬಸಯ್ಯ,ನಾಗೇಶ್,ಭೂಪತಿ,ಮುಖಂಡರಾದ ನಜೀರ್ ಅಹಮ್ಮದ್,ವಿಜಯ್ ಕೆಂಚೋಳ್,ಸತೀಶ್ ಮಲೆಮಾಚಿಕೆರೆ,ಮಾದಿಹಳ್ಳಿ ಮಂಜುನಾಥ್,ಗುಡ್ಡದಲಿಂಗನಹಳ್ಳಿ ನಾಗರಾಜ್,ತಿಮ್ಮಣ್ಣ,ಬಡಪ್ಪ,ಇಂದಿರಾ,ಸುಮಾ,ಸುಜಾತ,ಉಮಾದೇವಿ,ಕುಮಾರನಾಯ್ಕ,ಶಿವಲಿಂಗಪ್ಪ,ನಾಗರಾಜ್,ಓಬಳೇಶ್,ತಿಪ್ಪೇಸ್ವಾಮಿ, ಸೇರಿದಂತೆ ಇದ್ದರು.
  ದೇಶದಲ್ಲಿ ಕೆಲವರಿಂದ ಸುಳ್ಳು ವಿಜೃಂಭಿಸಿ ಸತ್ಯವನ್ನು ಮರೆಮಾಚಲಾಗಿದೆ.ಸಂವಿಧಾನ ಆಶಯಗಳ ಗಟ್ಟಿಗೊಳಿಸಲು ಯುವಸಮೂಹಕ್ಕೆ‌ ಜಾಗೃತಿ ಅಗತ್ಯ.ಬುದ್ದ,ಬಸವ ಅಂಬೇಡ್ಕರ್ ಅವರ ಸಂದೇಶಗಳನ್ನು ಸಮಾಜಕ್ಕೆ   ತಿಳಿಸಬೇಕಿದೆ.ಧರ್ಮ,ದೇವರ ಹೆಸರಗಳಲ್ಲಿ ಜನರ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ.ಸಂವಿಧಾನ ಉಳಿವಿಗಾಗಿ ಸಂಕಲ್ಪ ಅಗತ್ಯ.
—- ಕೆ ಪಿ.ಪಾಲಯ್ಯ,ಮಾಜಿ ಜಿ.ಪಂ‌ ಸದಸ್ಯ,
ಮಾನವ ಬಂಧುತ್ವ ವೇದಿಕೆ ರಾಜ್ಯ ಮುಖಂಡ.
TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಮಾನವಬಂಧುತ್ವ ವೇದಿಕೆಮೌಢ್ಯತೆಗಳ ಪ್ರತಿಬಿಂಬಕ ಸಂಸ್ಕೃತಿಯ ಆಚರಣೆ ಸಲ್ಲದು
Share This Article
Twitter Email Copy Link Print
Previous Article Davanagere ನಾಯಕ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಬಡ್ತಿಯಿಂದ ವಂಚಿತ : ಮಾರಪ್ಪ ನಾಯಕ ಮಗದಂಪೂರ ಆಕ್ರೋಶ
Next Article jagalore ದುಬೈ ಪ್ರವಾಸ : ಜಗಳೂರು ತಾಲೂಕಿನ 15 ಜನ ಪ್ರವಾಸಿಗರು ಸುರಕ್ಷಿತ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಭದ್ರಾ ಜಲಾಶಯ: ಒಳಹರಿವು ತುಸು ಇಳಿಕೆ

ಶಿವಮೊಗ್ಗ, ಜು. 20:   ಭದ್ರಾ ಜಲಾಶಯದ ಒಳಹರಿವಿನಲ್ಲಿ ಶನಿವಾರ ತುಸು ಇಳಿಕೆ ಕಂಡುಬಂದಿದೆ. ಉಳಿದಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ…

By Dinamaana Kannada News

ದಾವಣಗೆರೆ ವಿಶ್ವವಿದ್ಯಾನಿಲಯ|ಜಾಗತಿಕ ನಾಗರಿಕತ್ವ ಅನಿವಾರ್ಯ: ಪ್ರೊ.ನಿರಂಜನ

ದಾವಣಗೆರೆ: ವಿದ್ಯಾರ್ಥಿಗಳು ಕೇವಲ ಪದವೀಧರರಾಗದೆ, ಜಾಗತಿಕ ಅನುಭವ, ಆತ್ಮವಿಶ್ವಾಸ ಮತ್ತು ವಿಶಾಲ ವೃತ್ತಿ ಅವಕಾಶಗಳೊಂದಿಗೆ ಜಾಗತಿಕ ನಾಗರಿಕರಾಗುವಿಕೆ ಅನಿವಾರ್ಯವಾಗಿದೆ ಎಂದು…

By Dinamaana Kannada News

ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ: ವೈದ್ಯರು ಇಲ್ಲದ್ದನ್ನು ಕಂಡು ಶಾಸಕ ಬಸವಂತಪ್ಪ ಗರಂ

ದಾವಣಗೆರೆ:  ಆರೋಗ್ಯ ಹದಗೆಟ್ಟರೆ ರೋಗಿಗಳು ಆರೋಗ್ಯ ಕೇಂದ್ರಗಳತ್ತ ದೌಡಾಯಿಸುವುದು ಸಾಮಾನ್ಯ. ಆದರೆ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿ ಇರದಿದ್ದರೆ ಆಸ್ಪತ್ರೆಗೆ…

By Dinamaana Kannada News

You Might Also Like

jagalore
ತಾಜಾ ಸುದ್ದಿ

ದುಬೈ ಪ್ರವಾಸ : ಜಗಳೂರು ತಾಲೂಕಿನ 15 ಜನ ಪ್ರವಾಸಿಗರು ಸುರಕ್ಷಿತ

By Dinamaana Kannada News
Davanagere
ತಾಜಾ ಸುದ್ದಿ

ನಾಯಕ ಸಮುದಾಯ ಉದ್ಯೋಗ ಮತ್ತು ಶಿಕ್ಷಣ ಬಡ್ತಿಯಿಂದ ವಂಚಿತ : ಮಾರಪ್ಪ ನಾಯಕ ಮಗದಂಪೂರ ಆಕ್ರೋಶ

By Dinamaana Kannada News
Davanagere
ತಾಜಾ ಸುದ್ದಿ

ಒಳ ಮೀಸಲಾತಿ ವರ್ಗೀಕರಣ ಜಾರಿಗೆ ವಿಳಂಬ:ದಾವಣಗೆರೆ ಬಂದ್‌ಗೆ ಮಾದಿಗ ಸಂಘಟನೆಗಳ ಕರೆ

By Dinamaana Kannada News
District Collector G.M. Gangadharaswamy
ತಾಜಾ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಬಿಸಿಗಾಳಿ: ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಹಾಗೂ ಮಾರ್ಗಸೂಚಿ ಪ್ರಕಟ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?