ದಾವಣಗೆರೆ : ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗಿದ್ದು, ಕರ್ನಾಟಕದ ಹಲವಾರು ಪ್ರಯಾಣಿಕರು ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ನಿರ್ದೇಶನದಂತೆ, ದಾವಣಗೆರೆ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (DEOC) ಹಾಗೂ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನು (SEOC) 24×7 ಸಕ್ರಿಯಗೊಳಿಸಲಾಗಿದ್ದು, ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು ಕ್ರಮ ಕೈಗೊಳ್ಳಲಾಗಿದೆ. ಇರಾನ್, ಇಸ್ರೇಲ್, ಲೆಬನಾನ್, ಯುಎಇ ಸೇರಿದಂತೆ ಹಲವು ದೇಶಗಳ ವಾಯುಪ್ರದೇಶವನ್ನು ಮಾರ್ಚ್ 2ರವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಈ ಆದೇಶವನ್ನು ಮರುಪರಿಶೀಲಿಸಲಾಗುವುದು.
ಸಿಲುಕಿರುವ ಪ್ರಯಾಣಿಕರಲ್ಲಿ ಪ್ರಸ್ತುತ ರಾಜ್ಯದ ಒಟ್ಟು 200ಕ್ಕೂ ಹೆಚ್ಚು ಮಂದಿ ನೆರವಿಗಾಗಿ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದಾರೆ. ಇವರಲ್ಲಿ ದಾವಣಗೆರೆ ಜಿಲ್ಲೆಯ 8 ಮಂದಿ ಯುಎಇ (ದುಬೈ) ನಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ಇವರೆಲ್ಲರೂ ಸುರಕ್ಷಿತವಾಗಿದ್ದಾರೆ.
Read also : Political analysis|ಯಡಿಯೂರೋತ್ಸವಕ್ಕೆ 114ರ ಟಾರ್ಗೆಟ್..
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕ್ಷಿಪ್ರ ಪ್ರತಿಕ್ರಿಯೆ ಕೋಶ ಹಾಗೂ ದೆಹಲಿಯಲ್ಲಿರುವ ಕರ್ನಾಟಕ ಭವನದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲಾಗಿದೆ. ಸ್ಥಳಾಂತರ ಪ್ರಕ್ರಿಯೆಗೆ ವಿಮಾನಯಾನ ಲಭ್ಯವಾದ ತಕ್ಷಣ ಮುಂದಿನ ಕ್ರಮ ವಹಿಸಲಾಗುವುದು.
ಸಹಾಯವಾಣಿ ಸಂಖ್ಯೆಗಳು:
ಸಂಕಷ್ಟದಲ್ಲಿರುವವರು ಅಥವಾ ಅವರ ಕುಟುಂಬದವರು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಸಂಖ್ಯೆಗಳನ್ನು ಸಂಪರ್ಕಿಸಬಹುದು:
ದಾವಣಗೆರೆ ಜಿಲ್ಲಾ ಸಹಾಯವಾಣಿ: 08192-234034
ರಾಜ್ಯ ಸಹಾಯವಾಣಿ: 080-22340676 / 1070
ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು:
ಯುಎಇ (ಟೋಲ್ ಫ್ರೀ): 800-46342, ವಾಟ್ಸಾಪ್: +971543090571
ಸೌದಿ ಅರೇಬಿಯಾ (ರಿಯಾದ್): 00-966-11-4884697
ಇಸ್ರೇಲ್: +972-54-7520711
ಸಂಕಷ್ಟದಲ್ಲಿರುವವರು ಅಥವಾ ಅವರ ಕುಟುಂಬದವರು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಸಂಖ್ಯೆಗಳನ್ನು ಸಂಪರ್ಕಿಸಬಹುದು:
ದಾವಣಗೆರೆ ಜಿಲ್ಲಾ ಸಹಾಯವಾಣಿ: 08192-234034
ರಾಜ್ಯ ಸಹಾಯವಾಣಿ: 080-22340676 / 1070
ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು:
ಯುಎಇ (ಟೋಲ್ ಫ್ರೀ): 800-46342, ವಾಟ್ಸಾಪ್: +971543090571
ಸೌದಿ ಅರೇಬಿಯಾ (ರಿಯಾದ್): 00-966-11-4884697
ಇಸ್ರೇಲ್: +972-54-7520711
ಮಧ್ಯಪ್ರಾಚ್ಯದಲ್ಲಿರುವ ಕನ್ನಡಿಗರು ಸ್ಥಳೀಯ ಸರ್ಕಾರಗಳ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಸಂಬಂಧಪಟ್ಟ ರಾಯಭಾರ ಕಚೇರಿಯ ‘ಸಾರಥಿ ಸಹಾಯತಾ’ (Sarthi Sahayata) ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
