ದಾವಣಗೆರೆ : ದಾವಣಗೆರೆ ಬಿಜೆಪಿ ಅಭ್ಯರ್ಥಿ ವಿರುದ್ದ ಬಂಡಾಯ ಸಾರಿರುವ ಬಿಜೆಪಿ ನಾಯಕರು ಅಚ್ಚರಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.
ನಗರದ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಮನೆಯಲ್ಲಿ ಸಭೆ ಸೇರಿದ ಸಭೆ ನಡೆಸಿದ ಬಳಿಕ ಬಂಡಾಯ ನಾಯಕರು ಮಾತನಾಡಿದರು.
ದಾವಣಗೆರೆ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ಬದಲಾಗಬೇಕು. ಬದಲಾಗದಿದ್ದರೇ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ನಿಲ್ಲಿಸಿ ಗೆಲ್ಲಿಸಿ ನರೇಂದ್ರ ಮೋದಿಗೆ ಅವರಿಗೆ ಒಪ್ಪಿಸುತ್ತೇವೆ ಎಂದರು.
ಮಾಜಿ ಸಚಿವರಾದ ಕರುಣಾಕರ ರೆಡ್ಡಿ, ಎಸ್ ಎ ರವೀಂದ್ರನಾಥ ಹಾಗೂ ಎಂಪಿ ರೇಣುಕಾಚಾರ್ಯ ಮಾತನಾಡಿ, ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಸ್ಪರ್ಧೆಯಿಂದ ಹಿಂದೆ ಸರಿಸಬೇಕು. ಇದಕ್ಕೆ ನಾಮಪತ್ರ ಕೊನೆಯ ದಿನದ ವರೆಗೂ ಅಭ್ಯರ್ಥಿ ಬದಲಾವಣೆಗೆ ಅವಕಾಶವಿದೆ. ಬದಲಾಯಿಸುತ್ತಾರೆ ಎಂಬ ವಿಶ್ವಾಸವಿದೆ.
ನಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ, ನಡ್ಡಾ ವಿರುದ್ಧ ಅಥವಾ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಹೋಳಿ ಹುಣ್ಣಿಮೆ ನಂತರ ಸ್ವಾಮೀಜಿಗಳ ಭೇಟಿ ನಿರ್ಧಾರ
ಬರುವ ಹೋಳಿ ಹುಣ್ಣಿಮೆ ನಂತರ ನಾಡಿನ ಮಠಾಧೀಶರನ್ನು ಭೇಟಿ ಮಾಡಿ, ಅಭಿಪ್ರಾಯ ಪಡೆದು ಕಾರ್ಯಕರ್ತರ ಅಭಿಪ್ರಾಯ ಪಡೆದು ಅಚ್ಚರಿಯ ಅಭ್ಯರ್ಥಿ ಕಣಕ್ಕೆ ಇಳಿಸಲಾಗುವುದು ಎಂದು ಹೇಳಿದರು.
ಪೋನ್ ಟ್ಯಾಪ್ ಭಯ
ನಮ್ಮ ಜೊತೆಗೆ ಪಕ್ಷದ ವರಿಷ್ಠರು ಪೋನ್ ನಲ್ಲಿ ಮಾತಾಡುತ್ತಿದ್ದಾರೆ. ಆದರೆ, ಪೋನ್ ಟ್ಯಾಪ್ ಮಾಡುವ ಭಯವಿದೆ. ಹೀಗಾಗಿ ನಾವು ಏನು ಮಾತಾಡಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಶಿವಯೋಗಿ ಸ್ವಾಮೀ, ಮಾಜಿ ಶಾಸಕ ಬಸವರಾಜ್ ನಾಯ್ಕ, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ. ಜೆ ಅಜಯಕುಮಾರ, ಮಾಡಾಳ್ ಮಲ್ಲಿಕಾರ್ಜುನ್ ಇತರರು ಇದ್ದರು.