Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ನಿರ್ಲಕ್ಷ್ಯವು ಇನ್ನೋಬ್ಬರ ಜೀವಕ್ಕೆ ಕಂಟಕವಾಗದಿರಲಿ
ತಾಜಾ ಸುದ್ದಿ

ನಿರ್ಲಕ್ಷ್ಯವು ಇನ್ನೋಬ್ಬರ ಜೀವಕ್ಕೆ ಕಂಟಕವಾಗದಿರಲಿ

Dinamaana Kannada News
Last updated: April 5, 2024 1:42 pm
Dinamaana Kannada News
Share
Awareness programme
ಜಾಗೃತಿ ಕಾರ್ಯಕ್ರಮ
SHARE

ಹರಿಹರ:  ಕಲಬೆರಕೆ, ಆಸುರಕ್ಷಿತ ಮತ್ತು ಗುಣಮಟ್ಟವಿಲ್ಲದ ಆಹಾರ ತಯಾರಿಕೆ ಹಾಗೂ ವಿತರಣೆ ಮಾಡುವುದು ದಂಡ ಮತ್ತು ಶಿಕ್ಷೆ ವಿಧಿಸಬಹುದಾದ ಆಪರಾಧವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಸಿ. ಹಟ್ಟಿ ಹೇಳಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಮತ್ತು ನಗರಸಭೆ ಸಂಯುಕ್ತಾಶ್ರಯದಲ್ಲಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಆಹಾರ ಉತ್ಪಾದನಾ ಹಾಗೂ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯದ ಮೇಲೆ ದುಷ್ಪಾರಿಣಾಮ

ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವ ಬಣ್ಣ ಹಾಗೂ ರುಚಿಯ ಪೌಡರ್‌ಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಿದರೆ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಇವುಗಳನ್ನು ಬಳಸದಂತೆ ಎಚ್ಚರಿಕೆ ನೀಡಿದ ಅವರು ಗುಣಮಟ್ಟಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಬೇಕೆಂದರು.

ಬಣ್ಣದ ತಿನಿಸುಗಳ ಆಕರ್ಷಣೆಯೆ ಆಪತ್ತಿಗೆ ಕಾರಣ

ಬಣ್ಣ, ಬಣ್ಣದ ತಿನಿಸುಗಳ ಆಕರ್ಷಣೆಯೆ ಆಪತ್ತಿಗೆ ಕಾರಣವಾಗಬಹುದು. ಇತ್ತೀಚಿಗೆ ಮಲೆಬೆನ್ನೂರಿನಲ್ಲಿ ಬೀದಿಬದಿ ತಿಂಡಿ ತಿಂದು ಬಾಲಕನೋರ್ವ ಮೃತಪಟ್ಟಿದ್ದಾನೆ. ಈ ದುರ್ಘಟನೆಯು ಬೀದಿ, ಬದಿ ವ್ಯಾಪಾರಿಗಳ ಜವಾಬ್ದಾರಿಯನ್ನು ಮನವರಿಗೆ ಮಾಡಿಕೊಡುತ್ತದೆ. ನಿಮ್ಮ ನಿರ್ಲಕ್ಷ್ಯವು ಇನ್ನೋಬ್ಬರ ಜೀವಕ್ಕೆ ಕಂಟಕವಾಗದಿರಲಿ ಎಂದು ಕಿವಿ ಮಾತು ಹೇಳಿದರು.

ಸ್ವಚ್ಚತೆ ಮತ್ತು ಗುಣಮಟ್ಟಕ್ಕೆ ಅಧ್ಯತೆ ನೀಡಿ

ಇತ್ತೀಚಿನ ದಿನಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಆನೇಕರು ಆವಲಂಬಿತರಾಗಿದ್ದಾರೆ. ನೀವು ಸ್ವಚ್ಚತೆ ಮತ್ತು ಗುಣಮಟ್ಟಕ್ಕೆ ಅಧ್ಯತೆ ನೀಡಿ, ದಂಡ ಹಾಕುವುದು, ಶಿಕ್ಷೆಗೆ ಈಡು ಮಾಡುವುದು ಸುಲಭ, ಆದರೆ ನಿಮಗೆ ಮೊದಲು ಅರಿವು ಮತ್ತು ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸದಿದ್ದರೆ ಕಾಯ್ದೆಯನ್ವಯ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಿಂಡಿ, ತಿನಿಸು ತಯಾರಿಸಿ ಕಾಳಜಿಯಿಂದ ಮಾರಾಟ ಮಾಡಿ

ಪ್ರಧಾನ ಸಿವಿಲ್ ನ್ಯಾಯಾದೀಶರಾದ ಮಹಾದೇವ ಕಾನಟ್ಟಿ ಮಾತನಾಡಿ, ಸುರಕ್ಷಿತ, ಗುಣಮಟ್ಟ ಮತ್ತು ಸ್ವಚ್ಚತೆಯಿಂದ ಗ್ರಾಹಕರಿಗೆ ಆಹಾರ ನೀಡುವುದು ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಕುಟುಂಬದ ಸದಸ್ಯರೆ ನೀವು ತಯಾರು ಮಡಿದ ಆಹಾರ ಸೇವಿಸುತ್ತಿದ್ದಾರೆಂದು ತಿಳಿದು ತಿಂಡಿ, ತಿನಿಸು ತಯಾರಿಸಿ ಕಾಳಜಿಯಿಂದ ಮಾರಾಟ ಮಾಡಬೇಕು, ಆಹಾರ ಸೇವನೆಯಿಮದ ಯಾರಿಗಾದರೂ ತೊಂದರೆಯಾದರೆ ನೀವು ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಬೇಸಿಗೆ ಆರಂಭವಾಗಿದ್ದು ನಗರಸಭೆಯವರು ನಗರದ ಸ್ವಚ್ಚತೆ ಹೆಚ್ಚಿನ ಆಧ್ಯತೆ ನೀಡಬೇಕು. ಎಲ್ಲೆಂದರಲ್ಲಿ ಕಸ ಬೀಸಾಕುವುದನ್ನು ತಡೆಯಬೇಕು, ನಿರಂತರವಾಗಿ ಕಸ ವೀಲೆವಾರಿ ಕಡೆ ವಿಶೇಷ ಗಮನಹರಿಸ ಬೇಕು ಎಂದರು ಪೌರಾಯುಕ್ತರು ಮತ್ತು ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದರು.

ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಮಾತನಾಡಿ, ವಿಷೇಶವಾಗಿ ಗ್ರಾಹಕರು ಪಾನಿ ಪೂರಿ, ಗೋಬಿ ಮಂಚೂರಿ, ಚಿಕನ್ ಕಬಾಬ್, ಎಗ್‌ರೈಸ್, ಜುಲೇಬಿ, ಪಾವ್‌ಭಾಜಿ, ಸೇರಿದಂತೆ ಇತರೆ ಪದಾರ್ಥಗಳನ್ನು ಬೀದಿಬದಿಯ ಅಂಗಡಿಗಳಲ್ಲಿ ಸೇವಿಸುತ್ತಾರೆ. ಸಾರ್ವಜನಿಕರೂ ಕೂಡ ತಾವು ತಿಂಡಿ, ತಿನಿಸು ಸೇವಿಸುವ ಮುನ್ನ ಸದರಿ ಅಂಗಡಿಯ ಸ್ವಚ್ಚತೆ, ಶುದ್ಧ ಕುಡಿಯುವ ನೀರಿನ ಬಗ್ಗೆ ಗಮನಹರಿಸಬೇಕೆಂದರು.

ಪ್ರತಿಯೊಂದು ಬೀದಿ ಬದಿ ಅಂಗಡಿ, ಬೇಕರಿ ಮತ್ತು ಹೋಟೆಲ್ ಮಾಲೀಕರು ಕಡ್ಡಾಯವಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಿಗೆಯನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದ ಅವರು ಶುದ್ಧ ಆಹಾರ ನೀಡಿದರೆ ಗ್ರಾಹಕರು ಸಾಲಿನಲ್ಲಿ ನಿಂತು ಸೇವನೆ ಮಾಡುತ್ತಾರೆ. ಇದರಿಂದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಎಂದರು.

ಈ ವೇಳೆ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್, ಹರಿಹರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಅನಂದ ಕುಮಾರ್, ಆಹಾರ ಸುರಕ್ಷತಾ ಅಧಿಕಾರಿ ನವೀನ್‌ಕುಮಾರ್, ಆರೋಗ್ಯ ಇಲಾಖೆಯ ಎಂ.ಉಮ್ಮಣ್ಣ, ನಗರಸಭೆ ಆರೋಗ್ಯ ನೀರಿಕ್ಷಕ ರವಿಪ್ರಕಾಶ್, ನಗರಸಭೆ ವ್ಯವಸ್ಥಾಪ ಶಿವಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

 

 

TAGGED:clean drinking water.Dinamana.comDinamana.com. Davangere NewsKeep an eye on cleanlinessದಿನಮಾನ.ಕಾಂದಿನಮಾನ.ಕಾಂ.ದಾವಣಗೆರೆ ಸುದ್ದಿಶುದ್ಧ ಕುಡಿಯುವ ನೀರಿನ ಬಗ್ಗೆ ನಿಗಾ ಇರಲಿ.ಸ್ವಚ್ಚತೆ
Share This Article
Twitter Email Copy Link Print
Previous Article Babu Jagjeevan ram ಅಸ್ಪ್ರಶ್ಯತಾ ನಿವಾರಣೆ ಹೋರಾಟದ ಮಹಾನ್ ನಾಯಕ
Next Article Davangere training worker ಚುನಾವಣೆ ಯಶಸ್ವಿಯಾಗಲು ಅಣಕು ಮತದಾನದಲ್ಲಿ ಸಿಆರ್‍ಸಿ ಅತ್ಯವಶ್ಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ರೈತರಿಗೆ 2023 ರ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಬಿಡುಗಡೆ :  ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ

ದಾವಣಗೆರೆ :  ಕಳೆದ ವರ್ಷ 2023 ರ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟವಾದ 82928 ರೈತರಿಗೆ…

By Dinamaana Kannada News

ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಇಂದಿನಿಂದ ಚರ್ಚೆ : ಐಡಾ ಲವ್ಲೇಸ್ ಸಾಫ್ಟ್‍ವೇರ್ ಕಂಪನಿಗೆ ಆಹ್ವಾನ

ದಾವಣಗೆರೆ.ಡಿ.4 (Davanagere) : ಸಾಫ್ಟ್‍ವೇರ್ ದಿಗ್ಗಜ ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್‍ನಲ್ಲಿ ಡಿಸೆಂಬರ್ 5 ರ ಇಂದಿನಿಂದ ಆರಂಭಗೊಳ್ಳಲಿರುವ ಎರಡು ದಿನಗಳ…

By Dinamaana Kannada News

ಬಡವರ ಮಕ್ಕಳು ಐಎಎಸ್,ಐಪಿಎಸ್ ಆಗಬೇಕೆಂಬ ಕನಸು ನನಸಾಗಿಸಲು ಶ್ರಮ: ಜಿ. ಬಿ. ವಿನಯ್ ಕುಮಾರ್

ದಾವಣಗೆರೆ (Davanagere): ಬಡವರ ಮಕ್ಕಳು ಐಎಎಸ್, ಐಪಿಎಸ್ ಆಗಬೇಕೆಂಬ ಕನಸು ಕಂಡಿದ್ದೇನೆ. ಹಾಗಾಗಿ, ರಾಜ್ಯದ ಪ್ರತಿ ಜಿಲ್ಲೆಗಳಿಗೂ ಹೋಗುತ್ತಿದ್ದೇನೆ. ಗ್ರಾಮೀಣ…

By Dinamaana Kannada News

You Might Also Like

Political analysis
ರಾಜಕೀಯ

Political analysis|ಸಿದ್ದು ಗುಡುಗಿದ್ರೂ  ಸುರ್ಜೇವಾಲ ಉಳಿದಿದ್ದು ಹೇಗೆ?

By Dinamaana Kannada News
BHADRA DAM
ತಾಜಾ ಸುದ್ದಿ

ತುಂಗಭದ್ರಾ|ಒಳ ಹರಿವು ಹೆಚ್ಚಳ,ತುಂಬಲು ಇನ್ನೂ 6 ಅಡಿ ಬಾಕಿ

By Dinamaana Kannada News
Davanagere DC
ತಾಜಾ ಸುದ್ದಿ

ತುಂಗಭದ್ರಾ ನದಿಗೆ 1.12 ಲಕ್ಷ ಕ್ಯೂಸೆಕ್ಸ್ ನೀರು : ಎಚ್ಚರಿಕೆಯಿಂದಿರಲು ಡಿಸಿ ಸೂಚನೆ

By Dinamaana Kannada News
Home Minister Dr. G. Parameshwar
ತಾಜಾ ಸುದ್ದಿ

ಸೈಬರ್ ಅಪರಾಧ ತಡೆಗೆ ತಾಂತ್ರಿಕ ತರಬೇತಿ ಕಡ್ಡಾಯ : ಗೃಹ ಸಚಿವ ಡಾ: ಜಿ.ಪರಮೇಶ್ವರ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?