Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ನೆಲ ಹಡೆದ ಮೇಷ್ಟ್ರು : ಎಸ್.ಎಸ್.ಹಿರೇಮಠ
Blog

ನೆಲ ಹಡೆದ ಮೇಷ್ಟ್ರು : ಎಸ್.ಎಸ್.ಹಿರೇಮಠ

Dinamaana Kannada News
Last updated: April 8, 2024 1:21 pm
Dinamaana Kannada News
Share
SS Hiremath
SS Hiremath
SHARE

ವಿವೇಕದ ದೇವರು ದಯೆಯ ದೇವರಿಲ್ಲದೆ ಒಂಟಿಯಾಗುತ್ತಾನೆ ಎನ್ನುವ ಲೋಹಿಯಾ ಕೂಡ ಅನಾಥರ ಹಾಗೆ ಕಾಣುವ ಪ್ರಸ್ತುತ ಭಾರತದ ಸಂದರ್ಭದಲ್ಲಿ ,ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂಸೆ ಅನಿವಾರ್ಯ ಎಂಬ ನಿಲುವನ್ನು ಭಾರತದ ಎಲ್ಲ ಅಂಗಗಳೂ ಬಡವನಿಂದ ಹಿಡಿದು ಶ್ರೀಮಂತರವರೆಗೂ ತಲೆ ತುಂಬಿಸಿಬಿಟ್ಟಿವೆ.

ದಯೆಯೇ ಧರ್ಮದ ಮೂಲವಯ್ಯಾ ಎಂದ ಬಸವಣ್ಣ,ಕುಲ ಕುಲವೆಂದು  ಬಡಿದಾಡದಿರಿ ಎಂದ ಕನಕನನ್ನು ,ಜಾತಿ ವಿನಾಶಕ್ಕಾಗಿ ಹೋರಾಡಿದ ಅಂಬೇಡ್ಕರನನ್ನೂ  ಇಲ್ಲಿ ಸರ್ಕಲ್ಲುಗಳಲಿ ನಿರ್ಜೀವ ಮೂರ್ತಿಗಳನ್ನಾಗಿಸಲಾಗಿದೆ. ೧೯೯೦ರ ನಂತರ ಭಾರತದಲ್ಲಿ ‘ರಾಜಕಾರಣ’ ಎಂಬುದೇ ಅಲ್ಪಾವಧಿಯದಾಗಿ,’ಧರ್ಮ’ ಎಂಬುದೇ ದೀರ್ಘಾವಧಿಯಾದ ಪರಿಣಾಮವನ್ನು ಇಂದು ಎದುರಿಸುತ್ತಿದ್ದೇವೆ.

ಇಂತಹ ಸನ್ನಿವೇಶದಲ್ಲಿ ಭಾರತದಂತಹ ಅದರಲ್ಲೂ ಬಳ್ಳಾರಿಯಂತಹ ಗಡಿನಾಡಿನಲ್ಲಿ ಕನ್ನಡ ಸಾಹಿತ್ಯದ ಮೂಲಕ ಒಬ್ಬ ಸಾಮಾನ್ಯ ರೈತ,ಅಂಗಡಿ ಶೆಟ್ಟರು,ಕೂಲಿ ಕಾರ್ಮಿಕ,ಬಡಮೇಷ್ಟ್ರು,ಕಾರಕೂನ,ವಿದ್ಯಾರ್ಥಿಗಳು,ಯುವಕ ಯುವತಿಯರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂದು ಅವಲೋಕಿಸಿದರೆ ಆಶ್ಚರ್ಯದ ಜೊತೆಗೆ ಹೆಮ್ಮೆಯುಂಟಾಗುತ್ತದೆ.

ಬೈಲಹೊಂಗಲ ತಾಲ್ಲೂಕು ಸಾಣೆಕೊಪ್ಪ ಗ್ರಾಮದ ದೈತ್ಯ ಪ್ರತಿಭೆ ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯಲ್ಲಾದರೂ ಎಸ್.ಎಸ್.ಹಿರೇಮಠರಾಗಿ ಅರಳಿದ್ದು ಮಾತ್ರ ಬಳ್ಳಾರಿಯಲ್ಲಿ.ಸಾವಿರಾರು ವಿದ್ಯಾರ್ಥಿಗಳ ಲೋಕದೃಷ್ಟಿ ಯನ್ನು ಬದಲಿಸಿದ ಕೀರ್ತಿ ಮೇಷ್ಟ್ರಿಗೆ ಸಲ್ಲುತ್ತದೆ.ತಮ್ಮ ಜೀವಮಾನವನ್ನು ಬಡವರಿಗೆ,ದಲಿತರಿಗೆ ಮೀಸಲಿಟ್ಟವರಂತೆ ಹೋರಾಡಿ ಬರೆದು ಬದುಕಿದವರು.ತನ್ನ ಪ್ರತಿ ಪಾಠದಲ್ಲೂ ವೈಚಾರಿಕತೆಯನ್ನು ಬಿತ್ತುತ್ತಿದ್ದ ಹಿರೇಮಠರು ಈ ಕಾರಣಕ್ಕಾಗಿಯೇ ಹಲವಾರು ಸಂಕಟಗಳನ್ನು ಮೈಮೇಲೆ ಎಳೆದುಕೊಂಡರು.

 

ಹಿರೇಮಠರ ಶಿಷ್ಯರಿಂದ  ಒಂದೊಂದೇ ಘಟನೆಗಳನ್ನು ಕೇಳುವಾಗ ಮೈ ಜುಮ್ಮೆನ್ನುತ್ತದೆ

 

ಬಾಂಗ್ಲಾದೇಶದ ಲೇಖಕಿ ಬೇಗಂ ರೂಕೆಯಾರ ಅನುಭವ ಕಥನದ ಮಾತುಗಳು ನೆನಪಾಗುತ್ತವೆ.”….ಡಾಕ್ಟರರೊಬ್ಬರು ನಮ್ಮ ಶಾಲೆಯ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆಗೆ ನಿಯುಕ್ತರಾಗಿದ್ದರು. ತಪಾಸಣೆಯ ನಂತರ ಅವರ ವರದಿಯನ್ನು ಆಯಾ ಬಾಲಕಿಯರ ತಂದೆ ತಾಯಿಗಳಿಗೆ  ಕಳುಹಿಸಲಾಗಿತ್ತು.ಆ ಹುಡುಗಿಯರಿಗೆ ಇರುವ ರೋಗಗಳಿಗಾಗಿ ಡಾಕ್ಟರರ ಬಳಿ ಚಿಕಿತ್ಸೆ ಕೊಡಿಸುವಂತೆ ಬರೆಯಲಾಗಿತ್ತು.ಇದನ್ನು ಕಂಡ ಪೋಷಕರು ನೀಡಿದ ಉತ್ತರ  ಹೀಗಿದ್ದವು:

“ಕಲಿಯಲಿಕ್ಕಾಗಿ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ.ಆಕೆಯ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ,ಕಿವಿ ಸರಿಯಾಗಿ ಕೇಳಿಸುವುದಿಲ್ಲ,ಹಲ್ಲು ಅಲುಗಾಡುತ್ತಿವೆ…ಇತ್ಯಾದಿಗಳನ್ನು ತಿಳಿಯುವುದಕ್ಕೆ ಅಲ್ಲ.ಹೀಗೆಲ್ಲ ಹೇಳಿದರೆ ನಮ್ಮ ಹುಡುಗಿಯ ಮದುವೆ ಆಗುವುದಾದರೂ ಹೇಗೆ? ಇನ್ಮುಂದೆ ನಮ್ಮ ಹುಡುಗಿಯರನ್ನು ಡಾಕ್ಟರರಿಂದ ತಪಾಸಣೆ ಮಾಡಿಸಲೇಬೇಡಿ”.  ಹೀಗೆಂದ ಆ ಪೋಷಕರಿಗೆ ಇದ್ದುದು ಒಂದೇ ಆತಂಕವೆಂದರೆ….ಮದುವೆಯ ಚಿಂತೆ.ಅಶಿಕ್ಷಿತ ತಾಯಿಯಿಂದ ಮತ್ತೇನನ್ನು ತಾನೆ ನಿರೀಕ್ಷಿಸಲು ಸಾಧ್ಯ?

ವೈರುಧ್ಯಗಳ ಮನುಷ್ಯನಂತೆ ಗೋಚರಿಸಿದ್ದು ಸುಳ್ಳಲ್ಲ

ಇಂಥದ್ದೇ ಮನಸ್ಥಿತಿಯಲ್ಲಿ ತೊಂಬತ್ತರ ದಶಕದಲ್ಲಿ ಕಾಲೇಜಿನ ಯುವಕ ಯುವತಿಯರ ಮನ ಗೆದ್ದು ಮೇಷ್ಟ್ರಾಗಿ ಹೊಮ್ಮಿದ ಹಿರೇಮಠರು ಎಲ್ಲರ ನೆಚ್ಚಿನ ‘ಹಿರೇಮಠ ಸರ್ ‘ ಆದರು. ಆದರೆ ಊರ ಜನರ ಪಾಲಿಗೆ ಹಲವು ವೈರುಧ್ಯಗಳ ಮನುಷ್ಯನಂತೆ ಗೋಚರಿಸಿದ್ದು ಸುಳ್ಳಲ್ಲ.

ಚಿಕ್ಕಮಠ,ಡಿ.ಬಿ.ಬಡಿಗೇರ, ಇಸ್ಮಾಯಿಲ್ ಎಲಿಗಾರ್,ಮೇಟಿ ಕೊಟ್ರಪ್ಪ, ಪಿ.ಆರ್.ವೆಂಕಟೇಶ, ಶೇಷಗಿರಿ ಹವಲ್ದಾರ್, ಹುರಕಡ್ಲಿ ಶಿವಕುಮಾರ್,ಪರಶುರಾಮ್ ಕಲಾಲ್,ಹುಲಿಕಟ್ಟಿ ಚನ್ನಬಸಪ್ಪ, ಪೀರ್ ಬಾಷಾ, ರಂಗನಾಥ ಹವಾಲ್ದಾರ್,ಮಂಜುಳಾ ಹವಾಲ್ದಾರ್, ರಾಮನಮಲಿ, ಲಕ್ಷ್ಮಣ ಗಂಟಿ, ಚಂದ್ರಶೇಖರ ಬೆನ್ನೂರು,ಪ್ರಭಾಕರ ಸರಾಫ್,ಎ.ಎಸ್.ಪ್ರಭಾಕರ, ಮುದೇನೂರು ನಿಂಗಪ್ಪ ,ಬಸವರಾಜ ಸಂಗಪ್ಪನವರ,ಗಿರಿಧರ್ ಹವಾಲ್ದಾರ್, ಸುದರ್ಶನ್, ಗುಡಿಹಳ್ಳಿ ನಾಗರಾಜ್, ನಿಂಗರಾಜ್, ಖಾದರ್ ಬಾಷ,ಮಧು ಬಗರೆ,ಮೇಷ್ಟ್ರು ಪಂಚಪ್ಪ…..ಪಟ್ಟಿ ಮುಂದುವರಿಯುತ್ತದೆ.

ಕಮ್ಯುನಿಷ್ಟ್ ಪಕ್ಷಗಳೇ ತಿರುಗಿಯೂ ನೋಡಲಿಲ್ಲ

ಹಿರೇಮಠರನ್ನು ಕನ್ನಡ ನಾಡು ಅರ್ಥಮಾಡಿಕೊಳ್ಳುವುದು ಇರಲಿ,ಅವರಿಂದ ಪಾಠ ಹೇಳಿಸಿಕೊಂಡ ಕಮ್ಯುನಿಷ್ಟ್ ಪಕ್ಷಗಳೇ ತಿರುಗಿಯೂ ನೋಡಲಿಲ್ಲ.ತಳಸಮುದಾಯಗಳನ್ನು ಮೇಲೆತ್ತುವ  ಪ್ರಯತ್ನದಲ್ಲಿ ನಿರತರಾದ ಮೇಷ್ಟ್ರನ್ನು ಕೊನೆಗೂ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾದವು

ಅವರ ಸಾಹಿತ್ಯವನ್ನು,ವೈಚಾರಿಕ ಸಂಸ್ಕ್ರತಿ ಕಥನ ಕೃತಿಗಳಾದ ಲೋಕಾಯತ,ಸಾಂಖ್ಯ,ಮತ್ತು ಹಬ್ಬಗಳು,ಜಾತ್ರೆಗಳು ಮೂಲಕ ಕಾಣಲು ಮತ್ತು ಅರಿಯಲು ಯತ್ನಿಸಿದ ಹಿರೇಮಠರು ಯಾರಿಗೂ ಅರ್ಥವಾಗದೇ ಹೋದರು.

ಒಂದು ವೇಳೆ ಎಸ್.ಎಸ್.ಹಿರೇಮಠರು ಈ ಬಳ್ಳಾರಿಯ ಪಶ್ಚಿಮ ತಾಲೂಕುಗಳ ಕಡೆ ಬರದೇ ಇದ್ದಿದ್ದರೆ..ಬಲಪಂಥೀಯ ಯಾಜಮಾನ್ಯವನ್ನು ಮುರಿಯಲು ಕಷ್ಟವಾಗುತ್ತಿತ್ತು.ಹಿರೇಮಠರು ಲೇಖಕರಾಗಿ ಮಹಾನ್ ಅಲ್ಲದಿರಬಹುದು,ಆದರೆ ಚಳುವಳಿಗಾರನಾಗಿ  ಅವರು ನೀಡಿದ ಬಳುವಳಿಯನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ.

ಬಹುದೊಡ್ಡ ವೈಚಾರಿಕ ಆಕೃತಿಯಂತೆ ಕಾಣಿಸುತ್ತಿದ್ದ ಹಿರೇಮಠರ ಜನಪ್ರಿಯತೆಯೇ ಅವರಿಗೆ ವೈರುಧ್ಯವಾಗಿಹೋದದ್ದು ವಿಪರ್ಯಾಸ.ಚಳುವಳಿ,ಹೋರಾಟಗಳ ಮಳೆಯ ಜನಪ್ರಿಯತೆಯಲ್ಲಿ ಅವರ ಬಹಳ ಸೀರಿಯಸ್ ಆದ ಸಾಹಿತ್ಯಿಕ,ವೈಚಾರಿಕತೆಗಳ ಶ್ರೇಷ್ಠತೆಗಳೂ ಕನ್ನಡದ ಲೋಕ ಸೇರಲು ವಿಫಲವಾದವು.

ಕನ್ನಡದ ಡಿ.ಆರ್.ನಾಗರಾಜ್ ನಂತರದ ಮಹತ್ವದ ವಿಮರ್ಶಕರಾಗಬಹುದಾಗಿದ್ದ ಹಿರೇಮಠರನ್ನು ಬಳ್ಳಾರಿಯ ಹುಸಿ ಸಮಾಜವಾದಿಗಳು,ಕಮ್ಮುನಿಸ್ಟರೆಂದು ನಂಬಿದವರು ಮತ್ತು ನಡೆಸಿದ ವಿಫಲ ಹೋರಾಟಗಳು ಎಲ್ಲವೂ ಪ್ರವಾಹದ ವಿರುದ್ಧದ ಈಜಾಗಿ ಸೋತು ಹೋದವು.

ಕನ್ನಡ ಸಾಹಿತ್ಯ ಪರಂಪರೆಗೆ ಪರಿವರ್ತನಶೀಲ ಸಮುದಾಯಗಳನ್ನು ಜೋಡಿಸುವ,ಸೇರಿಕೊಳ್ಳಬಹುದಾಗಿದ್ದ ಹರಪನಹಳ್ಳಿ,ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿಗಳಂತಹ ಅರೆಶಿಕ್ಷಿತ ಧಾರೆಗಳೆಲ್ಲವೂ ತುಂಡು ತುಂಡಾಗಿ ಹೋದವು.

ಕರ್ನಾಟಕದ ಮಾರ್ಕ್ಸ ವಾದಿಗಳ ಬಹುದೊಡ್ಡ ದೌರ್ಬಲ್ಯ

ಎಸ್.ಎಸ್.ಹಿರೇಮಠರಂತಹ ಅಪ್ಪಟ ಎಡಪಂಥ ನಿಷ್ಟರು  ತಮ್ಮ ವಿದ್ವತ್ತಿನ ಮುಂದುವರಿಕೆ ಅಥವಾ ಜೋಡಣೆಯಾಗಿ ಅರ್ಥಪೂರ್ಣ ಕ್ರಿಯಾಶೀಲತೆಯನ್ನು  ಜೋಡಿಸಿಕೊಳ್ಳಲು ಬಿಡದೆ ಹೋದದ್ದು ಕರ್ನಾಟಕದ ಮಾರ್ಕ್ಸ ವಾದಿಗಳ ಬಹುದೊಡ್ಡ ದೌರ್ಬಲ್ಯವೆಂದೇ ಭಾವಿಸಿದ್ದೇನೆ.

ದಾರಿ ತಪ್ಪಿದ ಕಾಮ್ರೇಡ್

ರಾಜಕೀಯ ಪಕ್ಷವೊಂದು ರಾಜಕೀಯ ಗುಣಗಳನ್ನಷ್ಟೇ ಬೇಡುವ,ಮತ್ತು ಹಿರೇಮಠರ  ದಲಿತ ಸಂಸ್ಕೃತಿಗಳ,ಹಬ್ಬ,ಜಾತ್ರೆಗಳು,ಧರ್ಮಗಳ  ಶೋಧವನ್ನು ತಪ್ಪಾಗಿ ಗ್ರಹಿಸಿದ್ದಲ್ಲದೆ,ಬಹಳ ಪೇಲವವಾದ “ದಾರಿ ತಪ್ಪಿದ ಕಾಮ್ರೇಡ್ ” ಎಂದಷ್ಟೇ ಆ ಕಾಲಕ್ಕೆ ಬ್ರ್ಯಾಂಡ್ ಮಾಡಿ ಗುರುತಿಸಿದರು.

೧೯೯೨ರ ಬಾಬ್ರಿ ಮಸೀದಿ ಧ್ವಂಸದಿಂದಾಗಿ ರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸೆ ಮತ್ತು ಕೋಮು ಜ್ವಾಲೆಗಳನ್ನು ಕಂಡು ಕವಿ ಎಸ್.ಎಸ್.ಹಿರೇಮಠರು,

ಹೂತು ಹೋಯಿತು ವಿವೇಕ

ಗ್ರಂಥಾಲಯಗಳಲ್ಲಿ,

ಹೇಳಿಕೆಗಳಲ್ಲಿ,ವೇದಿಕೆಗಳಲ್ಲಿ.

ಅಯೋಧ್ಯೆಯವರೆಗೆ 

ಬೆಳೆದವು ಕೋಲು ಕಾಲುಗಳು

ಕಾರಸೇವಕರ ಹಾರಿ ಕೈಗಳು

ಗುದ್ದಲಿ ಮುಖಗಳು

ಬಾಂಬು ಮನಸುಗಳು

ರಾಕ್ಷಸರೇಕೆ ಪಟ್ಟವಾಳಬೇಕು?

ಹೇಳಿ,

ತುಂಬಿದ ಬಾತ ತುಂಗೆ ನೀರುಗಳೇ

ಸಹ್ಯಾದ್ರಿಯ ಹಸಿರು ಹಾಡುಗಳೆ.

ಎಂದು ಪ್ರಶ್ನಿಸುತ್ತಾರೆ.

( ಕವನ-ಅಯೋಧ್ಯೆ)

ರಂಗನಾಟಕ ಮತ್ತು ಬೀದಿನಾಟಕಗಳನ್ನು ಬರೆದು,ಡೈಲಾಗ್ ಡೆಲಿವರಿಗಳನ್ನು ಮಾಡುವ ರೀತಿಯನ್ನು, ಆನ್ ದಿ ಸ್ಪಾಟಲ್ಲೇ ಅತ್ಯಂತ ಶಕ್ತ ಸಂಭಾಷಣೆಗಳನ್ನು ಬರೆಯುತ್ತಿದ್ದ ರೀತಿಯಿಂದಾಗಿ ಹಿರೇಮಠರ ಅಸಂಖ್ಯ ಅಭಿಮಾನಿಗಳ ಸೃಷ್ಟಿಗೆ ಕಾರಣವಾಯಿತು.

ಬೆಟಗೇರಿ ಕೃಷ್ಣಶರ್ಮರ “ಜೋಗತಿಕಲ್ಲು”ಕಥೆಯನ್ನು ನಾಟಕಕ್ಕೆ ಇಳಿಸಿದ ರೀತಿ ಕೂಡ ಅನನ್ಯ.ಈ ಕಥೆಯಲ್ಲಿ ತ್ಯಾಗದ ಪ್ರತೀಕವಾಗಿ,ಆರಾಧ್ಯ ದೈವವಾಗಿ ಸಾರ್ಥಕತೆ ಪಡೆವ ದೇವದಾಸಿ ಚಂದಕ್ಕ-ಹಿರೇಮಠರ ಕಣ್ಣೋಟದಲ್ಲಿ ಸಾಮಾಜಿಕ ಸಮಸ್ಯೆಯೊಂದರ ಕಣ್ಮರೆಯಂತೆ ಕಾಡುತ್ತದೆ.ಪರಂಪರೆಯನ್ನು ನೋಡುವ ,ಅರ್ಥೈಸುವ ಪಾಠಗಳನ್ನು ಸಾಮಾನ್ಯರಿಗೆ ಮುಟ್ಟಿಸುವ ರೀತಿಯಿಂದಾಗಿ ಹಿರೇಮಠರ ಪ್ರಯತ್ನ ಬಹುಮುಖ್ಯವಾದದ್ದು.

೧೯೮೬ ರಲ್ಲಿ ಪ್ರದರ್ಶನಗೊಂಡ ಈ ನಾಟಕ, ಪ್ರದರ್ಶನವಾದ ಕಡೆಯಲ್ಲೆಲ್ಲಾ ನಾಟಕದ ಪರಿಣಾಮ ಹೃದಯಕ್ಕೆ ತಟ್ಟುವಂತೆ ಮತ್ತು ವ್ಯವಸ್ಥೆ ಕಲಿಸಿರುವ ಕೀಳು ಅಭಿರುಚಿಯ ವಿರುದ್ಧ ಬಂಡಾಯವೇಳುವ ಅಗತ್ಯವನ್ನು ನಾಟಕ ಹೇಳುತ್ತಾ ಹೋಯಿತು.

ಇಡೀ ರಾಜ್ಯಾದ್ಯಂತ ಪ್ರಚಾರ ಪಡೆದ ಈ ನಾಟಕದ ಕುರಿತು ಅಂದಿನ ದಿ. 5-1-1986 ರ ಟೈಮ್ಸ್ ಆಫ್ ಇಂಡಿಯಾದಲ್ಲಿ ,”Jogathikallu made a scathing attack on the evils of Devadasi system which is still prevailing in North Karnataka .The play was so rich in songs that it engulfed the action of the play itself”  ಚರಿತ್ರೆಯನ್ನು ಮುರಿದು ಕಟ್ಟುವ ಇಂತಹ ಪ್ರಯತ್ನಗಳಿಗೆ ಪ್ರೇಕ್ಷಕರ ಸ್ಪಂದನೆ ಮಾತ್ರ ಅದ್ಭುತವಾಗಿತ್ತು ಎಂದು ಈಗಲೂ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ನೆನಪಿಸಿಕೊಳ್ಳುತ್ತಾರೆ.

ವ್ಯವಸ್ಥೆ ಕಲಿಸಿರುವ ಅಭಿರುಚಿಯ ವಿರುದ್ಧ ಬಂಡಾಯವೇಳುವ ಈ ಕೃತಿಯನ್ನು ರೀ ರೈಟ್ ಮಾಡಬೇಕಾಯಿತು ಎನ್ನುವ ಹಿರೇಮಠರ ಮಾತುಗಳು ಅವರ ಸುತ್ತಲಿದ್ದ ಅಂದಿನ ವಿದ್ಯಾರ್ಥಿ, ಸಂಗಾತಿಗಳೆಲ್ಲರ ಭಾವಗಳಲ್ಲಿ ಹೊಸದೊಂದು ಧೋರಣೆಯನ್ನು ಹುಟ್ಟುಹಾಕಿರಬಹುದೆಂದು ಅನಿಸುತ್ತಿದೆ.  ಆ ಧೋರಣೆಯ ವ್ಯತ್ಯಾಸ ಬಹುಶಃ ಬಂಡಾಯ ಸಾಹಿತ್ಯ ಮತ್ತು ಸಮುದಾಯ ಚಳುವಳಿಗಳ ಚಲನೆಗೆ ಕಾರಣವಾದವು ಎಂಬುದೀಗ ಇತಿಹಾಸ.

 

ಗರತಿಯಾಗಲಾರೆನಯ್ಯೋ  

ಜೋಗತೆಂದು ನಗುವರೆಲ್ಲಾ  

ಮಾನ ಬಿಟ್ಟು ಮೈಯ ಮೇಲೆ  

ಎರಗುವರು ಎಲ್ಲಾ ಬಂದು  

ಸುಡುವರೆಲ್ಲ ನನ್ನ ಬದುಕ…  

ನಾಟಕದ ಪಾತ್ರಧಾರಿ ಚಂದಕ್ಕ ನ ಮಾತುಗಳನ್ನು ನಿಂತನಿಂತಲ್ಲೆ ಬರೆದುಕೊಂಡುತ್ತಿದ್ದ ಹಿರೇಮಠರ ಪ್ರತಿಭೆ ಅಪಾರ ಎಂದು ಪಾತ್ರ ಮಾಡಿದ ಕಲ್ಪಿತ (ನನ್ನ ಬಾಳಸಂಗಾತಿ)ಇಂದಿಗೂ ನೆನಪು ಮಾಡಿಕೊಳ್ಳುತ್ತಾಳೆ. ಕೋಮು ಸೌಹಾರ್ದತೆಯ ಭಾಗವೇ ಆಗಿಹೋದ ಸಫ್ದರ್ ಹಷ್ಮಿಯ ಸಾವು,”ಹಷ್ಮಿ ಅಮರ”ಬೀದಿ ನಾಟಕಕ್ಕೆ ಪ್ರೇರಣೆಯಾಯಿತು. ಹೀಗೆ ಲೇಖಕನೊಬ್ಬ ಕಾಲಕ್ಕೆ ಒಡನಾಡಿಯಾಗಿ,ಸಮಕಾಲೀನ ಬರೆಹಗಿರನಾಗುವುದಷ್ಟೇ ಅಲ್ಲದೆ, ಚಳುವಳಿಗಾರನಾಗುವುದು ಹೇಗೆ ಎಂಬುದನ್ನೂ ಮೇಷ್ಟ್ರು ಕಲಿಸಿದರು.

“ಸಾಹಿತ್ಯದಲ್ಲಿ ಮಾನವತೆ,ದಿವ್ಯತೆ   ಮತ್ತು ಸಭ್ಯತೆ ಹಾಸು ಹೊಕ್ಕಾಗಿಯೇ ಇರುತ್ತವೆ. ದಲಿತರನ್ನು,ನೊಂದವರನ್ನೂ ಮತ್ತು ವಂಚಿತರನ್ನು -ಅವರು ವ್ಯಕ್ತಿಯಾಗಿರಲಿ ಅಥವಾ ಸಮುದಾಯವಾಗಿರಲಿ ಬೆಂಬಲಿಸುವುದು ಮತ್ತು ಅವರ ಪರವಾಗಿ ವಾದಿಸುವುದು ಆತನ ಕರ್ತವ್ಯವಾಗಿರುತ್ತದೆ….”ಎಂದ ಪ್ರೇಮಚಂದರ ಮಾತುಗಳಂತೆಯೇ ಅಕ್ಷರಶಃ ಹಿರೇಮಠರ ಒಟ್ಟೂ ಬದುಕಿದೆ.

ತನ್ನ ಬದುಕಿನ ಕೊನೆಯವರೆಗೂ  ಸಂಪೂರ್ಣ ಮನುಷ್ಯನನ್ನು ಹುಡುಕಾಡುವ ಸಂಕೀರ್ಣ ಮನಸ್ಥಿತಿಯಲ್ಲಿದ್ದ ಎಸ್.ಎಸ್.ಹಿರೇಮಠ ಎಂಬ ಮೇಷ್ಟ್ರು ,ಅವರ “ಮನುಷ್ಯನೆಲ್ಲಿ?” ಪದ್ಯವು ಅವರೊಳಗಿನ ಕವಿಯ ಸಂವೇದನೆಗಳನ್ನು ಮಾತ್ರವಲ್ಲದೆ ಅವರನ್ನೂ ಸಹ ಕಟ್ಟಿಕೊಟ್ಟಿರುವುದು ಕಾಕತಾಳೀಯ.

 

 ಮನುಷ್ಯನೆಲ್ಲಿ?

ನೆಲವೆ ನಿನ್ನನ್ನು ಪ್ರೀತಿಸುತ್ತೇನೆ ನಾನು

ನಿನ್ನ ಅಖಂಡತ್ವದಷ್ಟು

ನಿನ್ನೆದೆಯಲ್ಲಿ ಪ್ರೀತಿಯನ್ನರಳಿಸಿದವರು

ಮನೆಯಾಗಿ ನಿನ್ನನ್ನು ಎತ್ತಿ ನಿಲ್ಲಿಸಿದವರು

ಬೆಳೆಯಾಗಿ ನಿನ್ನನ್ನು ಬೆಳೆದು ನಿಂತವರು

ಜೀವವೊಡೆದು ಮೊಗ್ಗಾಗಿ ದಿನಗಳನ್ನು ಹಡೆಯಲು

ಸದಾ ಕೆಂಪಾದವರು

ಬಯಸುತ್ತ,ಹಂಬಲಿಸುತ್ತ,

ಅಷ್ಟೇ ಅನಾಥರಾಗುತ್ತ ಬಂದರಲ್ಲ;

ಹೇಳಿ ರಾಕ್ಷಸರಿಗೆ,ದೇವತೆಗಳೆ

ನೆಲ ಹಡೆದ ಮನುಷ್ಯನೆಲ್ಲಿ?

ಎಲ್ಲಿ?

ಪೀಪ್ರಾದ ಕಗ್ಗೊಲೆಯಲ್ಲಿ?

ತಿರುಪತಿ,ಕಾಶಿ,ಹಂಪಿ,ಗುಡಿಗಳಲ್ಲಿಯೆ?

ಛತ್ರಗಳೆದುರು ಹೇಲುಹಂದಿಗಳ ಜತೆ 

ಕೂಳು ಕೆಬರುತ್ತಿದ್ದ ಇಲ್ಲಿ ಮನುಷ್ಯ ಇಲ್ಲ

ಅಲ್ಲಿ ಮನುಷ್ಯ ಸಿಗಲಿಲ್ಲ.

ಕುಷ್ಟ ದನಿಯಾಗಿ ಕೂಳೆಂದು ಕೂಗುತ್ತಿದ್ದ ಮನುಷ್ಯ ಇಲ್ಲ

ಅಲ್ಲಿ ಮನುಷ್ಯ ಸಿಗಲಿಲ್ಲ.

ನಿರುದ್ಯೋಗಿಯಾಗಿ ಬೀದಿಯಲೆಯುತ್ತಿದ್ದ ಮನುಷ್ಯ ಇಲ್ಲ

ಅಲ್ಲಿ ಮನುಷ್ಯ ಸಿಗಲಿಲ್ಲ.

ದುಡಿಯುತ್ತಲೆ ಇದ್ದ ನೆಲದಲ್ಲಿ ಅನಾಥವಾಗಿ ಮನುಷ್ಯ ಇಲ್ಲ

ಅಲ್ಲಿ ಸಿಗಲಿಲ್ಲ ಮನುಷ್ಯ:

ಕಾರಖಾನೆಗಳಲ್ಲಿ ಹೊಗೆಯಾಗುತ್ತಿದ್ದ ಮನುಷ್ಯ

ಅಲ್ಲಿ ಸಿಗಲಿಲ್ಲ ಮನುಷ್ಯ.

ಹಮಾಲಿಯಾಗಿದ್ದ, ಜೀತದಾಳುಗಳಾಗಿದ್ದ.

ಪ್ಯೂನಾಗಿದ್ದ,ಡ್ರೈವರಾಗಿದ್ದ.

ನೆಲದ ಒಡಲೆ,ಜೀವವೆ,ಸತ್ವವೆ

ಆಗಿದ್ದ ಮನುಷ್ಯ.ಆದರೆ

ಅಲ್ಲೆಲ್ಲೂ ಸಿಗಲಿಲ್ಲ ನನಗೆ

ಸಂಪೂರ್ಣ ಮನುಷ್ಯ.

 

ಪ್ರಕೃತಿ ಲಯಕ್ಕೆ ಸಹಜವಾಗಿ ಬದುಕಬಹುದಾಗಿದ್ದ ಮನುಷ್ಯನೊಬ್ಬ,ತನ್ನ ದುರಂತಕ್ಕೆ ತಾನೇ ಕಾರಣವಾಗುವ ಈ ಪದ್ಯವು ಒಂದು ರೀತಿಯಲ್ಲಿ ಅವರ ಅಪೂರ್ಣ ಆತ್ಮಕಥನದಂತೆಯೂ ಭಾಸವಾಗುತ್ತದೆ.

 

.…..ಮುಂದುವರಿಯುವುದು

 

            ಬಿ.ಶ್ರೀನಿವಾಸ

 

TAGGED:dinamaana.comKannada NewsSS Hiremath.ಎಸ್‌.ಎಸ್.ಹಿರೇಮಠ ಮೇಷ್ಟ್ರು.ದಿನಮಾನ.ಕಾಂ.ದಿನಮಾನ.ಕಾಂ.ದಾವಣಗೆರೆ ಸುದ್ದಿ
Share This Article
Twitter Email Copy Link Print
Previous Article ಎಸ್ ಎಸ್ ಹಿರೇಮಠ ಎಸ್ ಎಸ್ ಹಿರೇಮಠ ಎಂಬ ಕ್ರಾಂತಿಕಾರಿ ಮೇಷ್ಟ್ರು ನೆನೆಯುತ್ತಾ……
Next Article judgement dvg ತಂದೆ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಮಲಯಾಳಂ ಮನೋರಥಂಗಳ್ ಚಿತ್ರದ ಟ್ರೇಲರ್ ಬಿಡುಗಡೆ : ಒಂಭತ್ತು ಕಥೆಗಳಿಗೆ ೮ ಜನ ನಿರ್ದೇಶಕರು

ಬೆಂಗಳೂರು : ಮಲಯಾಳಂನ ಅಚ್ಚುಮೆಚ್ಚಿನ ಬರಹಗಾರ, ಚಿತ್ರಕಥೆಗಾರ ಮತ್ತು ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮನೋರಥಂಗಳ್…

By Dinamaana Kannada News

ಮಳೆಗಾಗಿ ದೇವರುಗಳಿಗೆ ನೀರಿನ ಅಭಿಷೇಕ

ದಾವಣಗೆರೆ:  ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಕೊಗ್ಗನೂರು ಗ್ರಾಮದಲ್ಲಿ ಯುವಕರು ಮತ್ತು ರೈತರು ಗ್ರಾಮದಲ್ಲಿರುವ ದೇವಸ್ಥಾನಗಳ ದೇವರುಗಳಿಗೆ ನೀರಿನ ಅಭಿಷೇಕ ಮಾಡಿದರು.…

By Dinamaana Kannada News

ದಾವಣಗೆರೆ ಕೆಟೆಜೆ ನಗರ ಪಿಎಸ್‌ಐ ಆತ್ಮಹತ್ಯೆ; ಕುಟುಂಬಸ್ಥರು ಹೇಳಿದ್ದೇನು?

ದಾವಣಗೆರೆ: ಇಲ್ಲಿನ ಕೆಟೆಜೆ ನಗರದ ಪಿಎಸ್‌ಐ ನಾಗರಾಜ (59) ಅವರು ತುಮಕೂರಿನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಟಿಜೆ ನಗರದ ಪೊಲೀಸ್…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?