ದಾವಣಗೆರೆ: ಕಳ್ಳತನವಾಗಿದ್ದ 15 ಲಕ್ಷ ರೂ. ಮೌಲ್ಯದ ಕೃಷಿ ಯಂತ್ರೋಪಕರಣಗಳು ವಶಪಡಿಸಿಕೊಂಡಿರುವ ಪೋಲೀಸರು, ಕೃತ್ಯ ಎಸಗಿದ್ದ 3 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಿದ್ದಾರೆ.
ಶಿವಪುರ ಗ್ರಾಮದ ಶೇಖರನಾಯ್ಕ ಎಂಬುವರ ಮನೆ ಬಳಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಸ್ಲಾಚರ್, ಬಾಂಡ್ಲಿ ಕಳ್ಳತನವಾಗಿರುವ ಬಗ್ಗೆ ಗ್ರಾಮಾಂತರ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯ್ ಕುಮಾರ್ ಎಂ.ಸಂತೋಷ, ಜಿ.ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್ ಮಾರ್ಗದರ್ಶನದಲ್ಲಿ ಪೋಲೀಸ ನಿರೀಕ್ಷಕ ಕಿರಣ್ ಕುಮಾರ್, ಪಿಎಸೈ ಜೋವಿತ್ ರಾಜ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
ಇದರೊಂದಿಗೆ ದಾವಣಗೆರೆ ಗ್ರಾಮಾಂತರ ಪೋಲೀಸ ಠಾಣೆ ಸರಹದ್ದಿನ 6 ಕಡೆ ಹಾಗೂ ಮಾಯಕೊಂಡ ಪೋಲೀಸ ಠಾಣೆ ಸರಹದ್ದಿನ 3 ಕಡೆ ಕಳ್ಳತನವಾಗಿದ್ದ 15 ಲಕ್ಷ ರೂ. ಮೌಲ್ಯದ 3 ಟ್ರಾಲಿ, 3 ರೂಟವೇಟರ್, 2 ಬಾಂಡ್ಲಿ, 3 ಬಲರಾಮ, 1 ಸ್ಲಾಂಯಶರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಟ್ರಾಕ್ಟರ್ ಇಂಜಿನ್ ಅಮಾನತ್ತುಪಡಿಸಿಕೊಳ್ಳಲಾಗಿದೆ.
ಮೂವರೂ ಬಾಲಕರನ್ನು ಸರ್ಕಾರಿ ಪರಿವೀಕ್ಷಣಾಲಯಕ್ಕೆ ಒಪ್ಪಿಸಲಾಗಿದೆ.