ದಾವಣಗೆರೆ : ಹರಿಹರದ ಕಡರನಾಯಕನ ಗ್ರಾಮದ ಇಟ್ಟಿಗೆ ಬಟ್ಟಿಯಲ್ಲಿ ನಿಲ್ಲಿಸಿದ್ದ ಲಾರಿ ಕಳ್ಳತನ ಮಾಡಿದ್ದ ಆರೋಪಿಯನ್ನು ಮಲೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಗುಡ್ಡದ ಕಮಲಾಪುರ ಗ್ರಾಮದ ಕೃಷ್ಣಪ್ಪ ಮಲ್ಲೂರು (34)ಬಂಧಿತ ಆರೋಪಿ.
ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಡರನಾಯಕಹಳ್ಳಿ ಗ್ರಾಮದ ಇಟ್ಟಿಗೆ ಬಟ್ಟಿಗೆಯಲ್ಲಿ ನಿಲ್ಲಿಸಿದ್ದ ಲಾರಿ ಕಳ್ಳತನವಾದ ಸಂಬಂಧ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಮಲೆಬೆನ್ನೂರು ಪೊಲೀಸರು ಆರೋಪಿತನಿಂದ ಕೆಎ-50/ಎ-6969 ನೇ ನಂಬರ್ ನ ಭರತ್ ಬೆಂಜ್ ಕಂಪನಿಯ 10 ಲಕ್ಷ ರೂ ಬೆಲೆಯ ಲಾರಿ ಮತ್ತು ಹಾವೇರಿ ಜಿಲ್ಲೆ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯ 01 ಬೈಕ್ ಕಳವು ಪ್ರಕರಣವನ್ನು ಭೇದಿಸಿ 20,000/- ರೂ ಬೆಲೆಯ ಕೆಎ-26/ಕ್ಯೂ-6358 ನೇ ಬೈಕ್‍ನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿತನನ್ನು ಪತ್ತೆ ಹಚ್ಚಿ ಕಳುವಾಗಿದ್ದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಪ್ರಭು ಡಿ ಕೆಳಗಿನ ಮನಿ, ಸಿಬ್ಬಂದಿಯವರಾದ ಲಕ್ಷ್ಮಣ, ರಾಜಶೇಖರ್, ಸಂತೋಷಕುಮಾರ್, ಮಲ್ಲಿಕಾರ್ಜುನ, ಜೀಪ್ ಚಾಲಕರಾದ ರಾಜಪ್ಪ, ಮುರುಳಿದರ ರವರುಗಳನ್ನು ಪೊಲೀಸ್ ಅಧೀಕ್ಷಕಕರು ಮೆಚ್ಚುಗೆ ವ್ಯಕ್ತ ಪಡಿಸಿ ಶ್ಲಾಘಿಸಿದ್ದಾರೆ.