ದಾವಣಗೆರೆ : ನೀಟ್ ಫಲಿತಾಂಶದಲ್ಲಿ ವೈಫಲ್ಯದಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದ ಕೂಡಲೇ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಎವಿಕೆ ಕಾಲೇಜಿನಿಂದ ಅಂಬೇಡ್ಕರ ವೃತ್ತದವರಿಗೆ ಮೆರವಣೆಗೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಜೂ 4 ರಂದು ನೀಟ್ ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶದಲ್ಲಿ 67 ವಿದ್ಯಾರ್ಥಿಗಳು 720 ಕ್ಕೆ 720 ಅಂಕ ಪಡೆದಿದ್ದಾರೆ. 67 ಜನ ವಿದ್ಯಾರ್ಥಿಗಳು ಪೈಕಿ 12 ಜನ ವಿದ್ಯಾರ್ಥಿಗಳು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರಿದಿದ್ದಾರೆ. ದೇಶಾದ್ಯಂತ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ ಒಂದೇ ರಾಜ್ಯದ ಒಂದೇ ಜಿಲ್ಲೆಯ ಒಂದೇ ಪರೀಕ್ಷಾ ಕೇಂದ್ರದಲ್ಲಿ ಬರೆದಿದ್ದು ವಿದ್ಯಾರ್ಥಿಗಳು 720 ಕ್ಕೆ 720 ಅಂಕ ಪಡೆದಿದ್ದಾರೆ. ಇದು ಅನುಮಾನ ಮೂಡಿಸಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ 180 ಪ್ರಶ್ನೆಗಳಿದ್ದು ಸರಿ ಉತ್ತರಕ್ಕೆ 4 ಅಂಕ, ತಪ್ಪು ಉತ್ತರಕ್ಕೆ ಮೈನಸ್ ಒಂದು ಅಂಕವಿದೆ. ಅದರೆ, ಈ ಫಲಿತಾಂಶದಲ್ಲಿ ಸುಮಾರು ವಿದ್ಯಾರ್ಥಿಗಳು 717,718,719 ಅಂಕ ಪಡೆದಿದ್ದಾರೆ. ಇದು ಸಾಧ್ಯವಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಅಲ್ಲದೇ ಅನೇಕ ವಿದ್ಯಾರ್ಥಿಗಳು ಗ್ರೇಸ್ ಮಾಕ್ಸ್೯ ಕೊಟ್ಟಿದ್ದು ಯಾವ ಅಧಾರದ ಮೇಲೆ ಎನ್ನುವುದುನ್ನು ಎನ್‌ಟಿಎ ಸ್ಪಷ್ಟಪಡಿಸಿಲ್ಲ. ಜೂನ್ 14 ರಂದು ಪ್ರಕಟವಾಗಬೇಕಿದ್ದ ಫಲಿತಾಂಶವನ್ನು ಜೂನ 4 ರಂದೇ ಪ್ರಕಟಿಸಲಾಗಿದೆ ಎಂದು ಆರೋಪಿಸಿದರು.
ನೀಟ್ ಫಲಿತಾಂಶದಲ್ಲಿನ ವೈಫಲ್ಯದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ಅಲಿ ರೆಹಮತ್, ತಾಹೀರ್ ಸಮೀರ್ , ಅಲೀ ರಹಮತ್, ಅನೂಪ್ ಚನ್ನಗಿರಿ , ಗಿರಿಧರ್ ಸಾತಾಲ್, ರೆಹಮನ್ , ಅಹ್ಮದಿ , ಅವಜ್ ಖಾನ್ , ಸುಕನ್ಯಾ , ರಮ್ಯಾ , ದೀಪ ಮಾತಾಡ್ , ಸುಪ್ರಿಯಾ ಇತರರು ಇದ್ದರು.