Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ದಿನಮಾನಹೆಮ್ಮೆ: ಬಂಡಾಯದ ಕೂಗು:ಡಿ.ಬಿ.ಬಡಿಗೇರ ಮಾಸ್ತರ
Blog

ದಿನಮಾನಹೆಮ್ಮೆ: ಬಂಡಾಯದ ಕೂಗು:ಡಿ.ಬಿ.ಬಡಿಗೇರ ಮಾಸ್ತರ

Dinamaana Kannada News
Last updated: July 11, 2024 3:23 am
Dinamaana Kannada News
Share
dinamaana
ಡಿ.ಬಿ.ಬಡಿಗೇರ ಮಾಸ್ತರ
SHARE

Kannada News | Dinamaanada Hemme  | Dinamaana.com | 11-07-2024

ಬಳ್ಳಾರಿಯಿಂದ ಭೌಗೋಳಿಕವಾಗಿ ದೂರವಿರುವ ಮತ್ತು ಅತಿಹೆಚ್ಚು ಭೂ ವಿಸ್ತೀರ್ಣವುಳ್ಳ ಹರಪನಹಳ್ಳಿ ತಾಲೂಕಿನ ಹಳ್ಳಿಗಳಲ್ಲಿ ಅವಮಾನಿತ ಜಾತಿಗಳು,ದಲಿತರು , ಕಡುಬಡವರು , ಕೃಷಿ ಕೂಲಿಕಾರರ ಸಂಖ್ಯೆಯೇ ಹೆಚ್ಚು.

ಇಂಥದೊಂದು ಪರಂಪರೆಯ ನಂತರದ  ತಲೆಮಾರು ಓದಿಗೆಂದು ತೆರೆದುಕೊಳ್ಳುವ ಸಂಕ್ರಮಣ ಸ್ಥಿತಿಯೊಳಗೆ, ಹರಪನಹಳ್ಳಿಯೆಂಬ ಊರೆಂಬ ಊರ ತುಂಬಾ ಶಾಲೆ,ಕಾಲೇಜುಗಳು.ರಾಜ್ಯದ ಮೂಲೆ ಮೂಲೆಗಳಿಂದ ಟಿ.ಸಿ.ಎಚ್. ಮತ್ತು ಬಿ.ಎಡ್.ಎಂಬ ಮೇಷ್ಟ್ರು ಟ್ರೈನಿಂಗ್ ಕೋರ್ಸಿಗೆ ಮೈ -ಕೈಗಳಿಗೆ ಮಣ್ಣು ಅಂಟಿಸಿಕೊಂಡೆ ಕಲಿಯಲು ಬರುವ ಜವಾರಿತನದ ಹುಡುಗರು,ಕಲಿಸಲು ಬಂದ ಅನೇಕ ಮೇಷ್ಟ್ರುಗಳು ಇದ್ದರು.

ಅಂಥವರ ಪೈಕಿ ಬೆಳಗಾವಿಯ ಸಾಣಿಕೊಪ್ಪದ ಎಸ್.ಎಸ್.ಹಿರೇಮಠರು,ಗದುಗಿನ ಚಿಕ್ಕಮಠ, ಪಶುಪತಿ ಹಾಳದ ಡಿ.ಬಿ.ಬಡಿಗೇರ, ಹಡಗಲಿಯ ಗಂಗಪ್ಪ , ಶಿವಮೊಗ್ಗ ಹತ್ತಿರದ ತಿಮ್ಮಪ್ಪ…ಹೀಗೆ ಪಟ್ಟಿ ಸಾಗುತ್ತದೆ.

 ನಿಷ್ಠುರವಾದ ದನಿ(D.B. Badigera)

ಹಿರೇಮಠರು ಗುರುತಿಸಿದಂತೆ ಅಪ್ಪಟ ಬೆವರಿನ ನಾಡಾದ ಹರಪನಹಳ್ಳಿಯ ಜನರು ಜೀವನದ ಕುರಿತು ಅಷ್ಟೇ ನೇರ ಮತ್ತು ಖಚಿತವಾದ ಗ್ರಹಿಕೆಗಳನ್ನು ಹೊಂದಿದವರು.

ವ್ಯವಸ್ಥೆಯ ಕರಾಳತೆಯನ್ನು ಕಾಲಕಾಲಕ್ಕೆ ವಿರೋಧಿಸುತ್ತಲೇ ಬಂದ ಇಲ್ಲಿನ ನೆಲದ ದನಿಗಳ ಪೈಕಿ ಡಿ.ಬಿ.ಬಡಿಗೇರರದೂ ಬಹು ಮುಖ್ಯ ಮತ್ತು ನಿಷ್ಠುರವಾದ ದನಿ.

ಮೇಷ್ಟ್ರಾಗಿ ಅತ್ಯಂತ ಯಶಸ್ವಿಯಾಗಿ ಹೆಸರು  ಮಾಡಿದ್ದ ಬಡಿಗೇರರಿಗೆ ವಿದ್ಯಾರ್ಥಿಗಳೆಂಬ ಗೆಳೆಯರ ಬಲವೂ ಸೇರಿದಂತೆಲ್ಲ ಅವರೊಳಗೆ ಒಬ್ಬ ಕ್ರಾಂತಿಕಾರಿ ಭಾಷಣಕಾರ,ಬರೆಹಗಾರ ಹೊರಬರಲು ಸಾಧ್ಯವಾಯಿತೆನ್ನಬಹುದು.

Read also : ದಿನಮಾನ ಹೆಮ್ಮೆ : ಜನರ ನಂಬಿಕೆಯ ಲೋಕದೊಳಗೆ ಪ್ರವೇಶಿಸಿ ಬರೆವ ಕವಿ–ಡಿ.ರಾಮನಮಲಿ

ಪಕ್ಕಾ ಉತ್ತರ ಕರ್ನಾಟಕದ ಜವಾರಿ ಭಾಷೆಯ ಈ ಮೇಷ್ಟ್ರು ಬಾಯಲ್ಲಿ”ಹಡಸೀಮಗನ”ಎಂದು ಬೈಸಿಕೊಳ್ಳೋದು ಕೂಡ ಒಂದು ಕಾಲಕ್ಕೆ ಹೆಮ್ಮೆಯ ವಿಷಯವಾಗಿ ಹೋಗಿತ್ತು. ಜಾತಿ ವ್ಯವಸ್ಥೆಯ ,ಬಂಡವಾಳಶಾಹಿ ವ್ಯವಸ್ಥೆಯ ಪೋಷಕರನ್ನು ತರಾಟೆಗೆ ತೆಗೆದುಕೊಳ್ಳವ ಪರಿಗೆ ವಿದ್ಯಾರ್ಥಿಗಳಿಂದ ಕರತಾಡನವೋ ಕರತಾಡನ. ಜನ,ಜನರ  ನೋವಿಗೆ ಕವಿತೆ ಸ್ಪಂದಿಸಬೇಕು ಮತ್ತು  ಪ್ರತಿಭಟಿಸಬೇಕು ಎನ್ನುವುದು ಅವರ ಬರೆಹದ  ಮೂಲ ಆಶಯವಾಗಿತ್ತು.

ಪ್ರಧಾನಿಯೊಬ್ಬರ ಬಹುನಿರೀಕ್ಷಿತ ಭಾರತ ಪ್ರಕಾಶಿಸುತ್ತಿದೆ ಎಂಬ ವರ್ತಮಾನವನ್ನು ಅವರು ,

ಭಾರತ ಪ್ರಕಾಶಿಸಬೇಕಾಗಿದೆ

ಹಸಿರು ಉಡಲಾರದ ಮಣ್ಣು ಮಣ್ಣುಗಳಲ್ಲಿ

ಬಸಿರು ಹೊರಲಾರದ ಬಾಳು ಬಾಳುಗಳಲ್ಲಿ

ನಿಜ ಭಾರತ ಪ್ರಕಾಶಿಸಬೇಕಾಗಿರುವುದು ಎಲ್ಲಿ ಎಂಬುದನ್ನು ಹೇಳುತ್ತಾರೆ.

 

ತೊಂಭತ್ತರ ಶ್ರೀರಾಮ ಯಾತ್ರೆ ಸೃಷ್ಟಿಸಿದ ಅವಾಂತರಗಳನ್ನು,

ರಾಜ್ಯ ತ್ಯಾಜ್ಯ ಮಾಡಿದ ರಾಮ

ಅಂಗಡಿ ತೆರೆದಿರುವನು

ಚೈನು,ಚಾಕು,ಚೂರಿ ಮಾರಲು

ನೆತ್ತರು ರಸ್ತೆಗೆ ತೂರಲು

ಕಮಲವನು ಊರಲು

ಎಂದು ವಿಷಾದದಿಂದಲೇ ಹೇಳುತ್ತಾರೆ.

 

ಹಾಗೆಂದು ನಿರಾಶರಾಗದೆ,

ಕಾಲದ ಕೂಗು ಕಾವು ಕುಳಿತಿದೆ

ರಾತ್ರಿ ರಾತ್ರಿಗಳೆಲ್ಲವೂ ಎಚ್ಚರವಾಗಿವೆ

ನಳನಳಿಸುವ ನಾಳೆಗಾಗಿ:

ಆಶಯವನ್ನು ವ್ಯಕ್ತಪಡಿಸುತ್ತಾರೆ.

 

ಎಲ್ಲ ಎಡಪಂಥೀಯರ ಹಾಗೆ ವರ್ತಮಾನದ ಕವಿತೆಗಳನ್ನು ಬರೆದರು ಎನ್ನುವುದಕ್ಕಿಂತಲೂ ಮುಖಾಮುಖಿಯಾಗಿ ಬರೆದ,

 

ಹವಾಲಾ ಹವಾಲಾ

ಹಾವಾತೋ ಹರಕೊಂತೋ ಹವಾಲಾ

ಹವಾಲಾ ಹವಾಲಾ

ಅರ್ಥವ್ಯವಸ್ಥೆ ದಿವಾಳಿಕೋರ ಹವಾಲಾ

ಕಾಕಿ-ಕಾವಿ-ಖಾದಿಗಳನು

ಸಾಕಿ ಹಿಡಿತೋ ಹವಾಲಾ

ಕೋಟಿ ಕೋಟಿ ಜನರಿರುವ

ಸವಾಲಾತೋ ಹವಾಲಾ.

 

ಇವರ ಈ ತರಹದ ಪದ್ಯಗಳು ಆ ಕಾಲದ ಕಾಲೇಜು ಹುಡುಗರ ನಾಲಿಗೆಯ ಮೇಲೆ ಘೋಷಣೆಗಳಂತೆ ಕೇಳಿಬರುತ್ತಿದ್ದವು.

ಅವರು ನಂಬಿದ ರಾಜಕೀಯ ಸಿದ್ಧಾಂತಗಳು , ವ್ಯಕ್ತಿಗಳು ಕವಲುದಾರಿ ತುಳಿದರೂ ಮತ್ತು ಅವರ ವೈಯಕ್ತಿಕ ಬದುಕನ್ನ ವಿಚಲಿತಗೊಳಿಸುವಂಥ ಘಟನೆಗಳು ಎಷ್ಟೇ ನಡೆದರೂ ಸಹ ಅವರಿಗೆ,

 

ಈ ನಾಟಕ

ಬಹುಕಾಲ ಬದುಕದು

ಶ್ರಮಿಕರು

ಬರತಾರ

ಅಂಕ ಪರದೆ

ಎಳೀತಾರ.

 

ಎಂಬ ಬಹುದೊಡ್ಡ ನಿರೀಕ್ಷೆಯಲ್ಲಿದ್ದಾರೆ ಮತ್ತು ಓದುಗರನ್ನೂ ಹಾಗೆ ಕಾಯುವಂತೆ ಮಾಡುತ್ತಾರೆ ಕೂಡ

 

ಬದುಕು ಭಾವಗಳ ತದುಕಿ

ಕೋಟಿ ಕೊತ್ತಲ ಕಟ್ಟಲು

ಕೈ ಕಾಲು ಕಣ್ಣು

ಕರುಳು-ಕತ್ತುಗಳ ಕಿತ್ತರು

ಅಣ್ವಸ್ತ್ರಗಳ ಬಸಿರು ಹೊತ್ತು

ಹಿರೊಶಿಮಾ-ನಾಗಾಸಾಕಿ

ದುರಂತ ಕೂಸು ಹೆತ್ತರು

ಶಾಂತಿಗಾಗಿ ಹಂಬಲಿಸುವ ಬಡಿಗೇರರದು ಕಲ್ಪನಾ ವಿಲಾಸದಲ್ಲಿ ತೇಲಿಬರದ ನೇರಾನೇರ ಮಾತು.ಅವರೆಂದಿಗೂ ನೆಲ ಬಿಟ್ಟು ಮೇಲೇಳದೆ ,ನೆಲದ ನಂಟಿಗೆ ಬದ್ಧರಾಗಿಯೇ ಕಾರ್ಯನಿರ್ವಹಿಸಿದರು.

ಹರಪನಹಳ್ಳಿಯೆಂಬ ದೊಡ್ಡ ಹಳ್ಳಿಯಂತಹ ಊರಿನಲ್ಲಿ ಕೂತು ಕವನಿಸುವುದನ್ನು ಧ್ಯಾನಿಸುವಂತೇನೂ ಮಾಡಲಿಲ್ಲ.ತಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಆಡಳಿತ ಮಂಡಳಿಯ ಸರ್ವಾಧಿಕಾರ,ಪುರೋಹಿತಶಾಹಿ ಗುಣ,ಸ್ವಜನಪಕ್ಷಪಾತಗಳ ಧೋರಣೆಗಳ ವಿರುದ್ಧ ಸದಾ ಬಂಡೆದ್ದವರು.

ಬೀದಿಗೆ ಬಿದ್ದರೆ

ಎದಿಗೆ ಒದ್ದರೆ

ಕಂಗಾಲಾಗಿ ಅಂಗಾತ ಬೀಳುವವರಿವರು

ಹಿಟ್ಲರನ ಗೋರಿಯಿಂದೆದ್ದವರು

ಎಂಬಂತೆ ಜಾಗತಿಕವನ್ನು ಸ್ಥಳೀಯವಾಗಿಯೂ ಎದುರಿಸಿದವರು.

 

‘ಜನಕವಿ'(D.B. Badigera)

ಒಬ್ಬ ಸಾರ್ವಜನಿಕ ವ್ಯಕ್ತಿಯ ಸುತ್ತಲೂ ಸದಾ ಜನತೆಯ ಕನ್ನಡಿ ಇರುತ್ತದೆ.ಬಡಿಗೇರ ಮಾಸ್ತರರಿಗೆ ಅಂಟಿದ ಬಂಡಾಯ ಜನರಿಗೂ ಬೇಕಾಗಿತ್ತು.ಅವರ ನಿರೀಕ್ಷೆಯಂತೆಯೇ ಮಾಸ್ತರರು ಬರೆದರು,ಮತ್ತು ಬದುಕಿದರು.ಆದರೆ ಇವರ ಕಾವ್ಯವನ್ನು ಕನ್ನಡ ಸಾಹಿತ್ಯಲೋಕ ತನ್ನ  ಒಡಲೊಳಗೆ ಅಷ್ಟಾಗಿ ಯಾಕೆ ಬಿಟ್ಟುಕೊಳ್ಳಲಿಲ್ಲವೋ..ಆ ಬಗ್ಗೆ ತಲೆಯನೆಂದೂ ಕೆಡಿಸಿಕೊಳ್ಳದೆ ‘ಜನಕವಿ’ಯಾಗಿ ಉಳಿದುಬಿಟ್ಟರು.

ಅದೇನೆ ಇರಲಿ,ಒಬ್ಬ ಸಾಹಿತಿಗೆ ಇರಬೇಕಾಗಿದ್ದುದು ಸಾರ್ವಜನಿಕ ನೈತಿಕತೆಯ ಬಗೆಗಿನ ಎಚ್ಚರ- ಆ ಎಚ್ಚರದಲ್ಲಿಯೇ ಬಡಿಗೇರರು ಜೀವಿಸುತ್ತಿರುವುದು ನಮಗೆಲ್ಲ ಮಾದರಿ.

 ಪ್ರೀತಿಯಿರದಿರೆ

ರೈತ-ನೇಗಿಲ ನಡುವೆ

ಅದೆಂತು ಭೂಮಿ ಹದವಾದೀತು

ಕಣ ಕಾಳು ತುಂಬೀತು

ಪ್ರೀತಿಯಿರದಿರೆ

ಗಿಡ ಮರ ಮನುಷ್ಯ ಮಧ್ಯೆ

ಅದೆಂತು ಉಸಿರಾಟ ಉಳಿದೀತು;

ಜೀವ ಭಾವ ತಳಿದೀತು

ಮೇಷ್ಟ್ರು –ವಿದ್ಯಾರ್ಥಿಗಳ ನಡುವೆ ಪ್ರೀತಿಯಿರದಿರೆ ..

ಕವಿ, ಹೋರಾಟಗಾರ ಬಡಿಗೇರ್ ಮಾಸ್ತರರು ನಮ್ಮವರಾಗುವುದು ಹೀಗೆ.

 

ಬಡಿಗೇರರ ಒಡಲಲ್ಲಿ ಬೆಂಕಿಯಿದೆ (DB Badigera)

ರಾಜಾಶ್ರಯದಿಂದ ಸದಾ ಅಂತರ ಕಾಪಾಡಿಕೊಳ್ಳುತ್ತಲೇ,ಕಚೇರಿ ಸಂಗೀತದ ಕಾವ್ಯದಿಂದ ದೂರವಿದ್ದು,ತಮ್ಮ ಎಂದಿನ “ವಾಚಾಳಿತನ”ವಿಟ್ಟುಕೊಂಡ ಅಪರೂಪದ ಸ್ವತಂತ್ರ ಕವಿಯಾದರು.ಅಪಾರ ಜೀವನದ್ರವ್ಯದ ಬಡಿಗೇರರ ಒಡಲಲ್ಲಿ ಬೆಂಕಿಯು ಇದೆ,ತಂಗಾಳಿಯು ಇದೆ.ಕನ್ನಡದ ಬಹುತೇಕರಂತೆ ಸುಖಾಸುಮ್ಮನೆ ಜೀವನಕಾವ್ಯ ಬರೆಯದೆ,ಜನಪರ ನಿಲುವುಗಳನ್ನು ತಮ್ಮ ಬರೆಹದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿದರು.

ಇಲ್ಲಿನ ವಿದ್ಯಾರ್ಥಿಗಳಿಗೆ , ಚಳುವಳಿಗಾರರಿಗೆ ಎಸ್ಸೆಸ್ ಹಿರೇಮಠರ ಮನೆ ಬಿಟ್ಟರೆ, ನಂತರ ನೆನಪಾಗುತ್ತಿದ್ದುದೇ ಬಡಿಗೇರ್ ಸರ್ ಮನೆ.ನೂರಾರು ಚಳುವಳಿಗಾರರನ್ನು ಸಾಕಿ,ಪೊರೆದವರು.

ಬಡಿಗೇರರು ‘ಪರಕೀಯ’ನಂತೆ ಕಾಣಿಸುತ್ತಾರೆ.. (DB Badigera)

ಸಾಹಿತ್ಯದಲ್ಲಿ ಸತ್ಯಶೋಧನೆಗಿಳಿದವರಂತೆ ಬರೆಯುವ ಕವಿ,ಸಾಮಾಜಿಕವಾಗಿ ಹಾಸುಹೊಕ್ಕಾಗಿರುವ ಮರ್ಯಾದೆ,ದಾಕ್ಷಿಣ್ಯ,ಸಭ್ಯತೆ,ಇವುಗಳಿಂದ ಬಹುತೇಕ ಚಳುವಳಿಗಾರರು ವಂಚಿತರಾದ ಹಾಗೆ,ಬಡಿಗೇರರ ಹಾದಿಯ ಕತೆಯೂ ಅದೇ.ಹೀಗೆ ವಂಚಿತರಾಗಿ ಬರೆಯುವುದು ಮತ್ತು ಹಾಗೆ ಬದುಕುವುದು ಸುಲಭದ್ದಲ್ಲ.ಪ್ರಭುತ್ವದ ಅರಾಜಕತೆಯನ್ನು ಕಣ್ಣುಮುಚ್ಚಿ ಅನುಸರಿಸುವ ಎಷ್ಟೋ ಜನ ಸೋ ಕಾಲ್ಡ್ ಲೇಖಕರ ಮಧ್ಯೆ ಬಡಿಗೇರರು ‘ಪರಕೀಯ’ನಂತೆ ಕಾಣಿಸುತ್ತಾರೆ.ಅವರ ಆ ಕುರುಚಲು ಗಡ್ಡ,ಹಲ್ಲಿನಲ್ಲಿ ಕಡ್ಡಿಯನಿಟ್ಟುಕೊಂಡು ಮಾತನಾಡುವ ಶೈಲಿ ಅವರ ವಿಶೇಷತೆ ಕೂಡ.

ಅವರ ಕವಿತೆಗಳಿಗಿಂತ ಅವರ ಬದುಕಿನ ಸಂವೇದನೆಗಳ ಕಾವ್ಯವ್ಯಕ್ತಿತ್ವ ನನ್ನನ್ನು ಬಹುವಾಗಿ ಆಕರ್ಷಿಸುತ್ತದೆ.ಅವರ ಜವಾರಿತನದ ಮಾತು,ಜೀವಂತ ಕನ್ನಡವನ್ನು ಪ್ರತಿನಿಧಿಸುವುದಷ್ಟೇ ಅಲ್ಲ,ನಮ್ಮೊಳಗಿನ ನಮ್ಮನ್ನು ಸದಾ ಎಚ್ಚರಿಸುವಂತೆ ಮಾಡುವ ಅಪ್ಪಟ ಕವಿ-ಮೇಷ್ಟ್ರು ನೂರು ವಸಂತಗಳನ್ನು ದಾಟಲಿ.         

ಬಿ.ಶ್ರೀನಿವಾಸ

TAGGED:Davangere Newsdinamaana.comDinamaanada HemmeKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂದಿನಮಾನದ ಹೆಮ್ಮೆ
Share This Article
Twitter Email Copy Link Print
Previous Article Applications invited ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅರ್ಜಿ ಆಹ್ವಾನ
Next Article dinamaana cinema ಶಿವಣ್ಣನ ಜನ್ಮದಿನ “45” ಚಿತ್ರದಿಂದ ಅಭಿಮಾನಿಗಳಿಗೆ ವಿಶೇಷ ಉಡುಗೊರೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ವೈದ್ಯೆ ಮೇಲಿನ ದೌರ್ಜನ್ಯ ಖಂಡಿಸಿ ಮೌನ ಪ್ರತಿಭಟನೆ

ಚನ್ನಗಿರಿ (Davanagere)  :  ಕಲ್ಕತ್ತಾದಲ್ಲಿ ಮಹಿಳೆ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ  ನಾಗರೀಕ ಅಧಿಕಾರ ಸಂರಕ್ಷಣಾ…

By Dinamaana Kannada News

ದೂರದೃಷ್ಟಿತ್ವ, ಯೋಜನೆಗಳು ಅಜರಾಮರ: ಸೈಯದ್ ಖಾಲಿದ್ ಅಹ್ಮದ್

ದಾವಣಗೆರೆ (Davanagere):  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಭಾರತದ ಆರ್ಥಿಕತೆ ಉದಾರೀಕರಣಗೊಳಿಸಿ ಕೈಗೊಂಡ ಯೋಜನೆಗಳು…

By Dinamaana Kannada News

Davanagere | ಪತ್ನಿ ಕೊಲೆ ಪ್ರಕರಣ : ಪತಿಗೆ 03 ವರ್ಷ ಸಾದಾ ಕಾರಾಗೃಹ ಶಿಕ್ಷೆ

ದಾವಣಗೆರೆ  (Davanagere):  ಪತ್ನಿ ಕೊಲೆ ಮಾಡಿದ ಆರೋಪಿಗೆ ನ್ಯಾಯಾಲಯವು 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ…

By Dinamaana Kannada News

You Might Also Like

bhadra-dam
ತಾಜಾ ಸುದ್ದಿ

Bhadra dam | ಭದ್ರಾ ಜಲಾಶಯ : ತುಂಬಲು ದಿನಗಣನೆ ಆರಂಭ

By Dinamaana Kannada News
Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?