Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಮಕ್ಕಳೇಕೆ ಕಲಿಕೆಯಲ್ಲಿ ಹಿಂದುಳಿಯುವರು?? : ಮಕ್ಕಳಿಗೆ ಶಿಕ್ಷೆಗಿಂತ ಪ್ರೀತಿ,ವಿಶ್ವಾಸ ಸರಿಯಾದ ಮಾರ್ಗ
Blog

ಮಕ್ಕಳೇಕೆ ಕಲಿಕೆಯಲ್ಲಿ ಹಿಂದುಳಿಯುವರು?? : ಮಕ್ಕಳಿಗೆ ಶಿಕ್ಷೆಗಿಂತ ಪ್ರೀತಿ,ವಿಶ್ವಾಸ ಸರಿಯಾದ ಮಾರ್ಗ

Dinamaana Kannada News
Last updated: July 28, 2024 3:48 am
Dinamaana Kannada News
Share
davanagere nagaraja
ನಾಗರಾಜ ಶಿಕ್ಷಕರು ದಾವಣಗೆರೆ
SHARE

Kannada News | Dinamaana.com | 28-07-2024

ಸರಿಯಾಗಿ ಕುಳಿತು ಅಭ್ಯಾಸ ಮಾಡು’ ಎಂದು ತಾಕೀತು ಮಾಡಿ ಶಿಕ್ಷೆ ನೀಡಿದ ತಾಯಿಯ ಮೇಲೆ ಕೋಪಗೊಂಡ ಪ್ರವೀಣ್ (ಹೆಸರು ಬದಲಾಗಿದೆ )ಎಂಬ ಹದಿನಾರು ವರ್ಷದ ಬಾಲಕನೊಬ್ಬ ತನ್ನ ತಾಯಿ ಕೊಡಿಸಿದ ಬ್ಯಾಟಿನಿಂದಲೇ ಅವಳನ್ನು ಹೊಡೆದು ಸಾಯಿಸಿದ ದಾರುಣ ಘಟನೆ ಉತ್ತರಪ್ರದೇಶ ನೋಯಿಡಾದಿಂದ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಹನ್ನೆರಡು ವರ್ಷದ ತಂಗಿಯನ್ನೂ ಜೊತೆಯಲ್ಲಿಯೇ ಕೊಂದಿದ್ದಾನೆ.

ಪ್ರವೀಣ್ ಮೊದಲಿನಿಂದಲೂ ಓದಿನಲ್ಲಿ ಹಿಂದೆ, ಶಾಲೆಯಲ್ಲಿ ಮಕ್ಕಳ ಜೊತೆ ಸದಾ ಜಗಳ, ಹಿಂಸಾ ಪ್ರವೃತ್ತಿ. ಮಗನ ಈ ವರ್ತನೆಯಿಂದ ಪೋಷಕರು ತುಂಬಾ ನೊಂದಿದ್ದರು,
ಪ್ರತಿ ದಿನ ಅವನಿಗೆ ಬೈದು ಬುದ್ಧಿ ಹೇಳುತ್ತಿದ್ದರೂ ಕೂಡ ಅವನ ವರ್ತನೆಯಲ್ಲಿ ಬದಲಾವಣೆ ಆಗುತ್ತಿರಲಿಲ್ಲ .

ಅವರ ಪೋಷಕರು ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಮಗನ ಹೆಸರನ್ನೂ ಬದಲಾಯಿಸಿದರು. ಹೋಗಲಿ ಓದಿನಲ್ಲಿ ಚುರುಕಾಗಿದ್ದ ತನ್ನ ತಂಗಿಯೊಡನೆ ಹೋಲಿಸಿದರೆ ಪ್ರಯೋಜನ ಆಗುತ್ತೆ ಎಂದುಕೊಂಡರೆ ಅದೂ ಯಶಸ್ಸು ಕಾಣಲಿಲ್ಲ. ಅದರ ಬದಲಿಗೆ ಅವನಲ್ಲಿ ಕೀಳರಿಮೆ ಮತ್ತು ಮತ್ಸರ ಹೆಚ್ಚಾಗಿ ದುರಾದೃಷ್ಟವಶಾತ್‌ ಇಂತಹ ಅತಿರೇಕದ ನಿರ್ಧಾರದೆಡೆಗೆ ಪ್ರಚೋದಿತನಾಗಿಬಿಟ್ಟ. ಓದಿನಲ್ಲಿ ಹಿಂದೆ ಎಂಬ ವಿಷಯ ಮಕ್ಕಳನ್ನು ಎಂಥ ಕ್ರೌರ್ಯಕ್ಕೆ ದೂಡುತ್ತದೆ ಎಂಬುದಕ್ಕೆ ಈ ಘಟನೆ ಒಂದು ನಿದರ್ಶನವಾಗಿದೆ.

ಇನ್ನೊಂದು ನಿದರ್ಶನ (Education)

“6ನೇ ತರಗತಿಯಲ್ಲಿ ಓದುತ್ತಿರುವ ಮಗುವಿಗೆ ಓದಿನಲ್ಲಿ ಗಮನ ಕಡಿಮೆ ಆಗಿದೆ. ಪರೀಕ್ಷೆಯಲ್ಲಿ ತುಂಬಾ ಕಡಿಮೆ ಅಂಕ ಪಡೆಯುತ್ತಾನೆ , ಕೆಲವೊಮ್ಮೆ ನಪಾಸಾಗುತ್ತಾನೆ. ಪರೀಕ್ಷೆಯಲ್ಲಿ ಬರೆಯುವುದಿಲ್ಲಾ. ಮನೆಯಲ್ಲಿ ಉತ್ತರಗಳನ್ನು ಹೇಳುತ್ತಾನೆ , ಆದರೆ ಶಾಲೆಯಲ್ಲಿ ಮರೆತುಬಿಡುತ್ತಾನೆ. ಇಂತಹ ಹಲವಾರು ಮಕ್ಕಳ ಬಗ್ಗೆ ಅವರ ಪೋಷಕರು,ಶಿಕ್ಷಕರು ಹೇಳುವ ಸಾಮಾನ್ಯವಾದ ಅಭಿಪ್ರಾಯವೆಂದರೆ “ಇವನಿನ್ನು ಚಿಕ್ಕವನು ಮುಂದೆ ಬೆಳೆಯುತ್ತಾ ಕಲಿಯುತ್ತಾನೆ.ತುಂಬಾ ಸೋಮಾರಿ ಅಥವಾ ದಡ್ಡ ಮುದ್ದು ಮಾಡಿ ಹಾಳಾಗಿದ್ದಾನೆ.

ಪರೀಕ್ಷೆ , ಅಭ್ಯಾಸ ಹಾಗೂ ಫಲಿತಾಂಶ ಈ ಮೂರು ವಿಷಯಗಳು ಶಾಲಾ ಮಕ್ಕಳ ಆತಂಕಕ್ಕೆ ಅಥವಾ ತಳಮಳಕ್ಕೆ ಕಾರಣ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಪರಿಷತ್ತು (ಎನ್ ಸಿ ಇ ಆರ್ ಟಿ) ಅಧ್ಯಯನದಲ್ಲಿ ತಿಳಿದು ಬಂದಿದೆ. 33% ವಿದ್ಯಾರ್ಥಿಗಳು ಸ್ನೇಹಿತರ ಪ್ರಭಾವಕ್ಕೆ ಒಳಗಾಗಿ ಅವರು ಮಾಡುವುದನ್ನೇ ಮಾಡಲು ಯತ್ನಿಸುತ್ತಾರೆ ಎಂದು ಅಧ್ಯಯನ ಹೇಳಿದೆ. 29% ರಷ್ಟು ಮಕ್ಕಳಿಗೆ ಶಾಲೆಯಲ್ಲಿ ಏಕಾಗ್ರತೆ ಇರುವುದಿಲ್ಲ. 6 ರಿಂದ 12ನೇ ತರಗತಿಯ 43% ಮಕ್ಕಳು ತಮ್ಮ ಮನಸ್ಸನ್ನು ವೇಗವಾಗಿ ಬದಲಾಯಿಸುತ್ತಾರೆ.

81% ಮಕ್ಕಳಿಗೆ ಪರೀಕ್ಷೆ ಎಂದರೆ ಭಯ, 26% ಮಕ್ಕಳು ಶಿಕ್ಷಕರಿಗೆ ಪ್ರಶ್ನೆ ಕೇಳಲು ಹಿಂಜರಿಕೆ ಇದೆ, 51% ಮಕ್ಕಳು ಆನ್ಲೈನ್ ತರಗತಿಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಿರುವುದಾಗಿ ಅಧ್ಯಯನದ ಮಾಹಿತಿಯಿಂದ ತಿಳಿದು ಬಂದಿದೆ.  ಬಿ ಎನ್ ರಾಮಚಂದ್ರ ಮನಶಾಸ್ತ್ರಜ್ಞರ ಪ್ರಕಾರ ಈ ಕೆಳಕಂಡ ಅಂಶಗಳಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

ಕಲಿಕೆಯಲ್ಲಿ ಭಿನ್ನತೆ:(Education)

ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳು ಮನೆ ಮತ್ತು ಶಾಲೆಯಲ್ಲಿ ಸಿಗುವ ಪ್ರೀತಿಯಿಂದ ವಂಚಿತರಾಗುತ್ತಾರೆ . ಶಿಕ್ಷೆ-ನಿಂದೆನೆಗಳಿಂದ ಕುಗ್ಗಿಹೋಗುತ್ತಾರೆ; ಶಿಕ್ಷಕರು ಹಾಗೂ ಪಾಲಕರನ್ನು ದ್ವೇಷಿಸಲು ಪ್ರಾರಂಭಿಸುತ್ತಾರೆ. ಜೊತೆಗೆ ಕಲಿಕೆಯನ್ನೂ ಸಹ. ಕೆಲವು ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಡಲು ಇದೇ ಮುಖ್ಯ ಕಾರಣವಾಗುತ್ತದೆ.

ತಮ್ಮ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯಲು ಸ್ವತಃ ಅವರೇ ಕಾರಣ; ಸೋಮಾರಿತನವನ್ನು ಮೈಗೂಡಿಸಿಕೊಂಡು ಕಲಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದು ಕೆಲವು ಪಾಲಕರು ಭಾವಿಸಿ ಬೈದು ಬುದ್ದಿ ಹೇಳಿ ಶಿಕ್ಷಿಸಿ ಹೋಲಿಕೆ ಮಾಡಿ ಅವರನ್ನು ಸರಿದಾರಿಗೆ ತರಲು ಮುಂದಾಗುತ್ತಾರೆ. ಅವರ ಉದ್ದೇಶ ಒಳ್ಳೆಯದಿರಬಹುದು ಆದರೆ ಪರಿಣಾಮ ಪರಿಸ್ಥಿತಿ ಇನ್ನಷ್ಟು ಉಲ್ಬಣವಾಗುವುದೇ ವಿನಃ ಸುಧಾರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕೋಪಗೊಳ್ಳುವ ಬದಲು ಸಮಾಧಾನವಾಗಿ ಯೋಚಿಸಿದರೆ, ಕಲಿಕೆಯಲ್ಲಿ ಹಿಂದುಳಿಯುವುದಕ್ಕೆ ಕಾರಣ ಹುಡುಕಿ ಪರಿಹಾರ ಕಂಡುಕೊಂಡರೆ ಮಾತ್ರ ಯಶಸ್ಸು ದೊರೆಯುತ್ತದೆ.

ಕಲಿಕೆಯಲ್ಲಿ ಹಿಂದುಳಿಯಲು ಕಾರಣ ಏನು?:(Education)

ಕಲಿಕೆಯಲ್ಲಿ ಮಕ್ಕಳು ಹಿಂದುಳಿಯಲು ಹಲವಾರು ಕಾರಣಗಳಿದ್ದರು ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ, ಮನೆಯಲ್ಲಿ ಮಕ್ಕಳನ್ನು ಬೆಳೆಸುವುದು ದೋಷಪೂರಿತವಾಗಿರುವುದು ಪ್ರಧಾನ ಕಾರಣ ಎಂದು ಸಂಶೋಧನೆಗಳು ಹೇಳುತ್ತವೆ. ಮಕ್ಕಳನ್ನು ಅತಿ ಶಿಸ್ತು, ಅತಿಪ್ರೀತಿಯಿಂದ ಬೆಳೆಸುವುದು ತಪ್ಪು.
ಶಿಕ್ಷಣ ಎಂಬುದು ಮನಸ್ಸಿಗೆ ಸಂಬಂದಿಸಿದ ವಿಚಾರ. ಕಲಿಕೆಯ ಬಗ್ಗೆ ಮಕ್ಕಳಿಗೆ ಆಸಕ್ತಿ ಬರಬೇಕು. ಆಸಕ್ತಿ ಮೂಡಿಸುವ ಪ್ರಯತ್ನ ಮನೆಯಲ್ಲಿ ಆಗದಿದ್ದರೆ ಮಕ್ಕಳು ಕಲಿಕೆಯನ್ನು ಇಷ್ಟಪಡದೇ ತನಗೆ ಸಂತೋಷ ಕೊಡುವ ಟಿ.ವಿ,ಮೊಬೈಲ್, ಇನ್ಸ್ಟಾಗ್ರಾಂ,ಲ್ಯಾಪ್ ಟ್ಯಾಪ್, ಫೇಸ್ಬುಕ್, ರೀಲ್ಸ್ ಮೊದಲಾದವುಗಳಲ್ಲಿ ಹೆಚ್ಚಿನ ಸಮಯ ಕಳೆಯಲು ಇಚ್ಛಿಸುತ್ತಾರೆ.

ಇನ್ನು ಎಲ್ಲ ಮಕ್ಕಳ ಬುದ್ಧಿ ಶಕ್ತಿ (ಐಕ್ಯೂ) ಒಂದೇ ರೀತಿ ಇರುವುದಿಲ್ಲ. ಬುದ್ದಿ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ವಿಷಯ ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇದನ್ನು ಅರಿತುಕೊಳ್ಳದೆ ಬೇರೆಯವರಂತೆ ನೀನೂ ಕಲಿಯಬೇಕು ಎಂದರೆ ಹೇಗೆ ಸಾಧ್ಯ? ಅನಾರೋಗ್ಯದ ಸಮಸ್ಯೆಗಳಾದ ಉಸಿರಾಟದ ಸಮಸ್ಯೆ , ರಕ್ತ ಹೀನತೆ,ದೈಹಿಕ ನ್ಯೂನ್ಯತೆ ಮೊದಲಾದ ತೊಂದರೆಗಳು ಖಂಡಿತವಾಗಿಯೂ ಕಲಿಕೆಗೆ ಅಡ್ಡಿ ಉಂಟು ಮಾಡುತ್ತದೆ.

ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿದ್ದರೆ, ಪಾಲಕರಿಗೆ ಅದನ್ನು ಮುಕ್ತವಾಗಿ ತಿಳಿಸುವ ವಾತಾವರಣವಿಲ್ಲದಿದ್ದರೆ ಅವರು ನಾಚಿಕೆ ಮತ್ತು ಹಿಂಜರಿಕೆಯಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇನ್ನು ಕೆಲವು ವೇಳೆ ಮಕ್ಕಳ ಶೈಕ್ಷಣಿಕ ಸಾಧನೆಯು ಸ್ಪರ್ಧಾತ್ಮಕವಾಗಿರಬೇಕೆಂದು ಅತೀವ ಒತ್ತಡವನ್ನು ಹೇರಿದರೆ, ಪಾಲಕರ ಇಚ್ಛೆ ಪೂರೈಕೆಯಾಗುವುದೋ ಇಲ್ಲವೋ ಎಂಬ ಆತಂಕದಲ್ಲಿ ಮಕ್ಕಳಿದ್ದರೆ, ಆ ಆತಂಕದ ಮನಸ್ಥಿತಿ ಕಲಿಕೆಯ ವೇಗವನ್ನು ತಗ್ಗಿಸುತ್ತದೆ.

ಸ್ವಲ್ಪವೂ ಬಿಡುವಿಲ್ಲದೆ ಮಕ್ಕಳಿಗಾಗಿ ಸಮಯ ಮೀಸಲಿಡದ ಪಾಲಕರಿದ್ದರೆ ಅಂತಹ ಮನೆಗಳಲ್ಲಿ ಮಕ್ಕಳು ಸ್ನೇಹಿತರೊಂದಿಗೆ ಅವಶ್ಯಕತೆಗಿಂತ ಹೆಚ್ಚಿನ ಅವಲಂಬನೆ ಬೆಳೆಸಿಕೊಳ್ಳುತ್ತಾರೆ, ಅವರ ಕೆಟ್ಟ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುವುದಲ್ಲದೇ ಪಾಲಕರಿಗೆ, ಶಿಕ್ಷಕರಿಗೆ ಅವಿಧೇಯರಾಗುತ್ತಾರೆ. ಹಠದ ಸ್ವಭಾವವನ್ನು ಬೆಳೆಸಿಕೊಂಡು ಕಲಿಕೆಯ ಬಗ್ಗೆ ನಿರಾಸಕ್ತಿ ಹೊಂದುತ್ತಾರೆ.

ಪರಿಹಾರ ಹೇಗೆ?:(Education)

ತಪ್ಪು ಮಾಡಿದ ಮಕ್ಕಳಿಗೆ ಶಿಕ್ಷೆ ನೀಡಲೇಬಾರದೆ? ಹಾಗೇನೂ ಇಲ್ಲ. ಸರಿಯಲ್ಲದ ನಡವಳಿಕೆಗಳು ಕಂಡುಬಂದಲ್ಲಿ ಲಘು ಶಿಕ್ಷೆ ನೀಡಬಹುದು. ಆದರೆ ಶಿಕ್ಷಿಸಿದ ನಂತರ ಏಕೆ ನಿನಗೆ ಶಿಕ್ಷಿಸಲಾಯಿತು ಎಂಬುದನ್ನು ತಿಳಿಸಿಕೊಡುವುದರ ಜೊತೆಗೆ, ಸರಿಯಾದ ನಡವಳಿಕೆ ಮತ್ತು ತಪ್ಪು ನಡವಳಿಕೆ ಯಾವುದು ಎಂಬುದನ್ನೂ ತಿಳಿಸಿಕೊಡಬೇಕು.

ಶಿಕ್ಷೆ ಎಂಬುದು ಮಕ್ಕಳ ಆತ್ಮಗೌರವಕ್ಕೆ, ವಿಶ್ವಾಸಕ್ಕೆ ದಕ್ಕೆ ಉಂಟುಮಾಡಬಹುದು ಎಂಬುದನ್ನು ನಾವು ಮರೆಯಬಾರದು. ಇಲ್ಲದಿದ್ದರೆ ಪಾಲಕರ ಮೇಲಿರುವ ವಿಶ್ವಾಸ ಕಡಿಮೆಯಾಗುವುದು. ಕಲಿಕೆಗೆ ಸಂಬಂಧ ಪಟ್ಟಂತೆ ಶಿಕ್ಷಿಸುವ ಬದಲು ಕಲಿಕೆಯ ಕುರಿತು ನಿರಾಸಕ್ತಿಯನ್ನು ಏಕೆ ಹೊಂದಿದ್ದಾನೆ ಎಂಬುದು ತಿಳಿಯಲು ಪ್ರಯತ್ನಿಸಿ, ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದೇ ಸೂಕ್ತ. ಶಿಕ್ಷೆಗಿಂತ ಮಕ್ಕಳನ್ನು ಪ್ರೀತಿ ,ವಿಶ್ವಾಸ,ನಂಬಿಕೆ ಗಳಿಂದ ಗೆಲ್ಲುವುದೇ ಪರ್ಯಾಯ ಮಾರ್ಗ.

ಪೋಷಕರ ಪಾತ್ರ (Education)

ಈ ಮೊದಲೇ ತಿಳಿಸಿದಂತೆ ಕಲಿಕೆ ಎಂಬುದು ಮನಸ್ಸಿಗೆ ಸಂಬಂಧಿಸಿದ ವಿಚಾರ. ಅದನ್ನು ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ. ಅದು ಬಕೆಟ್ ಗೆ ನೀರು ತುಂಬಿದಷ್ಟು ಸುಲಭವಲ್ಲ , ಮಕ್ಕಳಿಗೆ ಆಸಕ್ತಿ ಬಂದರೆ ಯಾವುದೇ ಬಾಹ್ಯ ಪ್ರಚೋದನೆಗಳಿಲ್ಲದೇ ತಾನಾಗಿಯೇ ಕಲಿಯಲು ಇಷ್ಟ ಪಡುತ್ತಾರೆ. ಕಲಿಕೆಯ ಕುರಿತು ಆಸಕ್ತಿ ಬರುವಂತೆ ಮಾಡುವುದೇ ಪಾಲಕರ ಮೊದಲ ಕೆಲಸ.

ಮಕ್ಕಳ ಶಿಕ್ಷ ಣದಲ್ಲಿ ಪಾಲಕರೂ ಸಹಭಾಗಿಗಳಾಗಬೇಕು. ಅಂದಮಾತ್ರಕ್ಕೆ ಭೌತಿಕ ಸೌಲಭ್ಯಗಳು , ಡೊನೇಶನ್‌, ಸ್ಕೂಲ್‌ ವ್ಯಾನ್‌ , ಬಣ್ಣ ಬಣ್ಣದ ಪೋಷಾಕುಗಳು ಮುಂತಾದವುಗಳು ಸಹಭಾಗಿತ್ವವಾಗಲಾರದು. ಅಭ್ಯಾಸಕ್ಕೆ ಸಮಯ ನಿಗದಿ ಪಡಿಸಿ ಮಕ್ಕಳು ಅಭ್ಯಾಸ ಮಾಡುವಾಗ ಸ್ವಲ್ಪ ಸಮಯ ಅವರ ಜೊತೆ ಕುಳಿತುಕೊಳ್ಳಬೇಕು.

ಪ್ರತಿದಿನ ಮಕ್ಕಳ ಅನುಭವ ಹೇಗಿತ್ತು ಎಂಬುದನ್ನು ವಿಚಾರಿಸಿ ಅವರುತ್ತರಿಸುವಾಗ ಆಸಕ್ತಿಯಿಂದ ಆಲಿಸಿ ಪ್ರತಿಕ್ರಿಯಿಸಿ ಮನೆಯಲ್ಲಿ ಮಕ್ಕಳಿಗೆ ಅಗತ್ಯ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡಬೇಕು. ಮಕ್ಕಳಿಗೆ ಆಟವಾಡಲು ಪ್ರೋತ್ಸಾಹಿಸಿ ಅವರೊಂದಿಗೆ ನೀವೂ ಆಟವಾಡಿ. ಸಾಧ್ಯವಾದರೆ ವಾರಕ್ಕೊಮ್ಮೆ ಶಾಲೆಗೇ ಭೇಟಿ ನೀಡಿ ಮಕ್ಕಳ ಕಲಿಕೆ ಹಾಗೂ ವರ್ತನೆಯ ಕುರಿತು ಶಿಕ್ಷಕರಿಂದ ಹಿಮ್ಮಾಹಿತಿ ಪಡೆಯಿರಿ.

ಅತೀವ ನಿಂದಿಸಬೇಡಿ (Education)

ಶಾಲೆಯ ಕಾರ್ಯಕ್ರಮಗಳಲ್ಲಿ ಆಹ್ವಾನವಿದ್ದರೆ ಖಂಡಿತವಾಗಿಯೂ ಭಾಗವಹಿಸಿ . ಮಕ್ಕಳಿಗಾಗಿ ಮನೆಯಲ್ಲಿ ಸ್ವಲ್ಪ ಸಮಯ ಕೊಡಿ. ಅವರೊಂದಿಗೆ ಸೌಹಾರ್ದಯುತವಾಗಿ ಮಾತನಾಡಿ ವಿಶ್ವಾಸಗಳಿಸಿಕೊಳ್ಳಿ. ಟೆಸ್ಟ್‌/ಪರೀಕ್ಷೆ ಮಾರ್ಕ್ಸ್‌ ಕಾರ್ಡ್‌ ಗಳು ನಿಮಗೆ ತಲುಪಿದಾಗ ಗಳಿಕೆಯಾಗಿರುವುದನ್ನು ಪ್ರಶಂಸಿರಿ. ಗಳಿಕೆಯಾಗದಿದ್ದಲ್ಲಿ ಅತೀವ ನಿಂದಿಸಬೇಡಿ, ಬದಲಿಗೆ ಯಾವ ವಿಷಯದಲ್ಲಿ ಕಡಿಮೆ ಗಳಿಕೆಯಾಗಿದೆ ಎಂಬುದನ್ನು ತಿಳಿದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳೋಣ, ಧೈರ್ಯಗೆಡಬೇಡ ಎಂದು ಹುರಿದುಂಬಿಸಿ.

ಕಡಿಮೆ ಸಾಮರ್ಥ್ಯ‌ದ ಮಕ್ಕಳಿಗೆ ಕಲಿಯಲು ಜಾಸ್ತಿ ಸಮಯ ಬೇಕಾಗುತ್ತದೆ. ಸಂಯಮವಿರಲಿ, ಅವಸರಪಡಬೇಡಿ. ಶಾಲೆಯ ಶಿಕ್ಷ ಕರೊಂದಿಗೆ ಉತ್ತಮ ಸಂಬಂಧವಿರಲಿ. ಮಕ್ಕಳೆದುರು ಶಿಕ್ಷ ಕರನ್ನು ಟೀಕಿಸಬಾರದು. ಪರಸ್ಪರ ಇನ್ನೊಬ್ಬರಿಗೆ ಹೋಲಿಕೆ ಮಾಡಿ ನಿಂದಿಸಬಾರದು.

ಅಗತ್ಯ ಮಾರ್ಗದರ್ಶನ ನೀಡಿ (Education)

ಎಷ್ಟು ಸಮಯ ಅಭ್ಯಾಸ ಎಂಬುದು ಮುಖ್ಯವಲ್ಲ. ಬದಲಿಗೆ ಎಷ್ಟು ಶ್ರದ್ದೆಯಿಂದ ಅಭ್ಯಾಸ ಮಾಡಿದರು ಎಂಬುದು ಮುಖ್ಯ. ಬರಿ ಹೋಂವರ್ಕ್‌ ಮುಗಿಸಿದರೆ ಅಭ್ಯಾಸ ಮುಗಿಯಿತು ಎಂದೆನಿಸಬಾರದು. ಮಕ್ಕಳು ಪಠ್ಯಪುಸ್ತಕಗಳನ್ನು ಓದಬೇಕು, ಪದಗಳನ್ನು ಕಲಿಯಬೇಕು. ಸಾಕಷ್ಟು ಲೆಕ್ಕಗಳನ್ನು ಮಾಡಬೇಕು. ಕೆಲವೊಮ್ಮೆ ಗಟ್ಟಿಯಾಗಿ ಓದಲು ಅಭ್ಯಸಿಸಬೇಕು. ಮಕ್ಕಳ ಬರವಣಿಗೆಯನ್ನು ಪರಿಶೀಲಿಸಿ, ಸರಿ ಇಲ್ಲದಿದ್ದರೆ ಅಗತ್ಯ ಮಾರ್ಗದರ್ಶನ ನೀಡಿ ಸರಿಪಡಿಸಿಕೊಳ್ಳಲು ತಿಳಿಸಬೇಕು.

ಯಾವುದೇ ಕಾರಣಕ್ಕೆ ಮಕ್ಕಳು ಸರಿಯಾಗಿ ಅಭ್ಯಸಿಸುತ್ತಿಲ್ಲವೆಂದು ಗದರುವುದು ಸರಿಯಲ್ಲ. ಮಗುವಿಗೆ ಹೋಮ್‌ ವರ್ಕ್‌ ಮಾಡಲು ಬರುತ್ತಿಲ್ಲವಿರಬಹುದು, ತಿಳಿಯದೇ ಅನಾವಶ್ಯಕ ಬೈಯುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಮಕ್ಕಳ ವರ್ತನೆ ವಿಪರೀತವಾಗಿದ್ದಲ್ಲಿ ಮನೋವಿಜ್ಞಾನಿಗಳ, ಶಿಕ್ಷಣ ತಜ್ಞರ ನೆರವನ್ನು ಪಡೆಯಬೇಕು.

ಸಮಕಾಲಿನ ಜ್ಞಾನವನ್ನು ಕಲಿಸಬೇಕು  (Education)

ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಕೆಲವು ಶಿಫಾರಸ್ಸುಗಳನ್ನು ಕೂಡ ಮಾಡಿದೆ. ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಹಂತದಿಂದಲೇ ಪದ್ಯ ,ಕಥೆ, ಆಟಿಕೆಗಳ ಮೂಲಕ ಶಿಕ್ಷಣ ನೀಡಬೇಕು ಈ ಹಂತದಲ್ಲಿ ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಪದ್ಧತಿ ,ಭಾಷೆ, ಸಮಕಾಲಿನ ಜ್ಞಾನವನ್ನು ಕಲಿಸಬೇಕು ಎಂದು ಹೇಳುತ್ತದೆ.

ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳಬಾರದು (Education)

ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರಂಭಿಕ ಕಲಿಕೆಯ ವರ್ಣಮಾಲೆ ,ಭಾಷೆ, ಸಂಖ್ಯೆಗಳು, ಎಣಿಕೆ ,ಬಣ್ಣ, ಚಿತ್ರಕಲೆ, ಒಳಾಂಗಣ, ಹೊರಾಂಗಣ ಆಟಗಳು ಸಂಗೀತ, ಭಾರತದ ಪ್ರಾಚೀನತೆ, ಭೌಗೋಳಿಕತೆ, ಕರಕುಶಲತೆ ಕಲಿಕೆಗೆ ಒತ್ತು ನೀಡಬೇಕೆಂದು ಶಿಫಾರಸು ಮಾಡಿದೆ…. ಯಾವ ಮಕ್ಕಳು ಕೂಡ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳಬಾರದು ಮತ್ತು ಕಲಿಕೆಯಲ್ಲಿ ಹಿಂದುಳಿಯಬಾರದೆಂದು.

ನಾಗರಾಜ್ ಹೆಚ್
ಶಿಕ್ಷಕರು

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Shimoga ಶಿವಮೊಗ್ಗ ಜನಪರ ಚಳವಳಿಗಳ ತವರೂರು: ಕೆವಿಪಿ
Next Article Badhra dam Shivamogga ಭದ್ರಾ ಜಲಾಶಯ : ಭರ್ತಿಗೆ 6 ಅಡಿ ಮಾತ್ರ ಬಾಕಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ 75ನೇ ವರ್ಷದ ಧ್ವಜಾ ಚೀಟಿ ಬಿಡುಗಡೆ

ದಾವಣಗೆರೆ ನ.8 (Davanagere): ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ 75 ನೇ ವರ್ಷದ ಭಾರತ್ ಸ್ಕೌಟ್ಸ್…

By Dinamaana Kannada News

Power outage | ಮೇ.13 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ (Davanagere): ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಮಹಾನಗರಪಾಲಿಕೆ ವತಿಯಿಂದ ಪಾದಚಾರಿರಸ್ತೆ  (ಪುಟ್ಟಪಾತ್)ಕಾಮಗಾರಿ ಕೆಲಸ ಹಮ್ಮಿಕೊಂಡಿರುವುದರಿಂದ ಮೇ.13 ರಂದು…

By Dinamaana Kannada News

Davanagere | ಜೂನ್ 10 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ (Davanagere) : 66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಸುವ  ಸಿದ್ದವೀರಪ್ಪ ಬಡಾವಣೆ,ಎಸ್.ಎಸ್. ಲೇಔಟ್ ಎ…

By Dinamaana Kannada News

You Might Also Like

Dinesh K Shetty
ತಾಜಾ ಸುದ್ದಿ

ದಾವಣಗೆರೆ|ದೇಶ ಮತ್ತು ಯೋಧರ ವಿಚಾರದಲ್ಲಿ ರಾಜಕೀಯ ಸಲ್ಲ: ದಿನೇಶ್ ಕೆ ಶೆಟ್ಟಿ

By Dinamaana Kannada News
recruitment for posts in BSF
ತಾಜಾ ಸುದ್ದಿ

BSFನಲ್ಲಿ 3588 ಹುದ್ದೆಗಳ ಭರ್ಜರಿ ನೇಮಕಾತಿ

By Dinamaana Kannada News
Gold price
ತಾಜಾ ಸುದ್ದಿ

ಮೂರು ದಿನಗಳಲ್ಲಿ ಚಿನ್ನದ ಬೆಲೆ 2,400 ರೂ. ಇಳಿಕೆ

By Dinamaana Kannada News
PUC
ತಾಜಾ ಸುದ್ದಿ

ಪ್ರಥಮ PUC ಪ್ರವೇಶಾತಿಗೆ ಜುಲೈ 31 ಕೊನೆ ಅವಕಾಶ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?