ದಾವಣಗೆರೆ (Davangere district ) : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆಯುಧದಿಂದ ಪತಿಯೊಬ್ಬ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.
ಗೌರಿಪುರ ಗ್ರಾಮದ ನಿವಾಸಿ, ಶಿಕ್ಷಕಿ ನಾಗಮ್ಮ (50) ಕೊಲೆಯಾದ ಮಹಿಳೆ. ಹತ್ಯೆಗೈದ ಪತಿ ಸತ್ಯಪ್ಪ. ಪತ್ನಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿ ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ.
ಘಟನೆ ವಿವರ: 28 ವರ್ಷಗಳ ಹಿಂದೆ ಗೌರಿಪುರ ಗ್ರಾಮದ ಸತ್ಯಪ್ಪ ಎಂಬುವರನ್ನು ನಾಗಮ್ಮ ವಿವಾಹವಾಗಿದ್ದರು. ವಿವಾಹವಾಗಿ 10 ವರ್ಷಗಳ ನಂತರ ಕೊಲೆ ಆರೋಪಿ ಸತ್ಯಪ್ಪ ತನ್ನ ಪತ್ನಿ ನಾಗಮ್ಮಳ ಮೇಲೆ ವಿನಾಕಾರಣ ಅನುಮಾನ ಪಡುವುದು, ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ನಾಗಮ್ಮ ಸಹೋದರಿ ಶಾಂತಮ್ಮ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ. .
ಸಂಡೂರಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೊಲೆಯಾದ ನಾಗಮ್ಮ, ತಾಲೂಕಿನ ಸಂತೆಮುದ್ದಾಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ವರ್ಗಾವಣೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜಗಳೂರು ಪಟ್ಟಣದಲ್ಲಿ ವಾಸವಾಗಿದ್ದ ಶಿಕ್ಷಕಿ ನಾಗಮ್ಮ, ಕೆಲ ದಿನಗಳ ಹಿಂದೆ ಶಾಲೆಗೆ ರಜೆ ಹಾಕಿ ಗೌರಿಪುರ ಗ್ರಾಮದ ಮಂಜಪ್ಪ ಎಂಬುವರ ಮನೆಗೆ ಸ್ಥಳಾಂತರಗೊAಡಿದ್ದರು. ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.