ಹರಿಹರ (davanagere) : ನಗರದ ಸಿಎಂಸಿ ಕಾಂಪ್ಲೆಕ್ಸ್ ನಲ್ಲಿ ದಾವಣಗೆರೆ ಜಿಲ್ಲಾ ಮಲ್ಟಿ ಪರ್ಪಸ್ ಅಸೋಸಿಯೇಷನ್ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಹರಿಹರ ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಜೆ.ಕವಿತಾ ರವರು ಮಾತನಾಡಿ, ಮಲ್ಟಿ ಪರ್ಪಸ್ ಅಸೋಸಿಯೇಷನ್ ಸಂಘದ ಸದಸ್ಯರುಗಳೆಲ್ಲರೂ ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಅಸಂಘಟಿತ ವಲಯಕ್ಕೆ ಬರುವುದರಿಂದ ಸದಸ್ಯತ್ವವನ್ನು ಪಡೆದುಕೊಂಡು ಸರ್ಕಾರದ ಯೋಜನೆಗಳಾದ ಈ ಶ್ರಮ ಕಾರ್ಡುಗಳನ್ನು ಮಾಡಿಸಿದ್ದಲ್ಲಿ ಸೌವಲತ್ತುಗಳನ್ನು ಪಡೆದುಕೊಳ್ಳಬಹುದು. ಯಾವುದೇ ರೀತಿಯಲ್ಲಿ ಕಾರ್ಮಿಕರಿಗೆ ಸಮಸ್ಯೆ ಉಂಟಾದಲ್ಲಿ ನಮ್ಮ ಗಮನಕ್ಕೆ ತಂದರೆ ಕೂಡಲೇ ಸ್ಪಂದಿಸಿ ಅದಕ್ಕೆ ಪರಿಹಾರ ಮಾಡಿಕೊಡುವೆನೆಂದು ಹೇಳಿದರು.
ಧ್ವಜಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಿ.ಐ ದೇವಾನಂದ್ ಚೌಹಾಣ, ತಾಲೂಕು ಆರೋಗ್ಯ ಅಧಿಕಾರಿ ಡಾ|| ಅಬ್ದುಲ್ ಖಾದರ್, ಸರ್ಕಾರಿ ವೈದ್ಯ ನಾಗರಾಜ್.ಎಸ್.ಕೆ, ನಗರಸಭೆ ಸದಸ್ಯರು ಸೈಯದ್ ಅಬ್ದುಲ್ ಅಲಿಂ, ರಿಜ್ವಾನ್, ನಗರಸಭೆಯ ಆರೋಗ್ಯ ಹಿರಿಯ ನಿರೀಕ್ಷಕ ಸಂತೋಷ್ ವಕೀಲರ ಸಂಘದ ಅಧ್ಯಕ್ಷ ಆನಂದ್, ವಕೀಲ ಸಂಘದ ಮಾಜಿ ಅಧ್ಯಕ್ಷ ರುದ್ರೆ ಗೌಡ್ರು, ಬಿ.ಎಸ್.ಪಿ ಜಿಲ್ಲಾ ಅಧ್ಯಕ್ಷ ಡಿ. ಹನುಮಂತಪ್ಪ, ಕನ್ನಡಪರ ಸಂಘಟನೆಯ ಅಧ್ಯಕ್ಷರು ರಮೇಶ್ ಮಾನೆ, ಇಲಿಯಾಸ್, ಗೌಸ್, ಶ್ರೀನಿವಾಸ್ ಕೊಡ್ಲಿ, ಡಿ.ಎಸ್.ಎಸ್ ಸಂಘದ ರಾಜ್ಯ ಅಧ್ಯಕ್ಷ ಹೆಚ್.ಮಲ್ಲೇಶ್, ಕಾರ್ಮಿಕ ಮುಖಂಡ ಎಚ್.ಕೋಟ್ರಪ್ಪ, ಸಂತೋಷ್ ಗುಡಿಮನಿ, ಶಿಕ್ಷಕ ಮನಿಯರ್ ಇವರಿಗೆ ಮಲ್ಟಿಪರ್ಪಸ್ ಅಸೋಸಿಯೇಷನ್ ಸಂಘದಿಂದ ಗೌರವ ಸನ್ಮಾನಿಸಲಾಯಿತು.
Read also : davanagere : ಸರ್ಕಾರದ ಆರೋಗ್ಯ ವಿಮಾ ಪಟ್ಟಿಯಲ್ಲಿರದ ಚಿಕಿತ್ಸೆಗಳಿಗೆ ರಿಯಾಯಿತಿ : ಡಾ.ಸುರೇಶ್ ಬಸರಕೋಡ
ಮಲ್ಟಿಪರ್ಪಸ್ ಅಸೋಸಿಯೇಷನ್ ಸಂಘದ ಸಂಸ್ಥಾಪಕ ಅಧ್ಯಕ್ಷ ಶೇಕ್.ಆರ್.ಕಣವಿ, ಉಪಾಧ್ಯಕ್ಷ ಜಾವೀದ್, ಗಜ್ಜನಬಿ, ಖಜಾಂಚಿ ಸೈಯದ್, ಮಂಜುನಾಥ್, ಸಂಘದ ಪದಾಧಿಕಾರಿಗಳಾದ ಸಾಜಿದ್, ರಿಯಾಜ್, ಮಲ್ಲಿಕ್, ಇಲಿಯಾಸ್, ಮುದಾಸಿರ್, ಅಣ್ಣಪ್ಪ ಅಜ್ಜೆರ, ಶಿವು, ಜಬಿವುಲ್ಲಾ, ಇದಾಯತ್, ರಾಮಣ್ಣ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.