ದಾವಣಗೆರೆ (Davanagere) : ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಸೆ.12 ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋಬಿ. ಕೃಷ್ಣಪ್ಪ)ಯಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಬೃಹತ್ ತಮಟೆ ಚಳುವಳಿ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಅಧ್ಯಕ್ಷತೆಯಲ್ಲಿ ಕರಪತ್ರವನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು.
ಈ ಜಿಲ್ಲಾ ಸಂಚಾಲಕ ಕುಂದುವಾಡ ಮಾತನಾಡಿ, ಸುಪ್ರ್ರೀಕೋರ್ಟ್ ಆದೇಶದಂತೆ ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿ ಜಾರಿಗೆ ತರಬೇಕು. ಅದರೆ, ಒಳಮೀಸಲಾತಿ ಜಾರಿಗೆ ತರವುಲ್ಲಿ ರಾಜ್ಯ ಕಾಂಗ್ರೇಸ್ ವಿಳಂಬ ನೀತಿ ಅನುಸರಿಸಿ ಇಡೀ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
Read also : Davanagere | ರಾಷ್ಟ್ರೀಯ ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ
ರಾಜ್ಯದ ಕಾಂಗ್ರೆಸ್ ಸರಕಾರ ಒಳಮೀಸಲಾತಿ ಜಾರಿಗೆ ವಿಳಂಬ ನೀತಿ ಖಂಡಿಸಿ ಸೆ.12 ರಂದು ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತಾಲ್ಲೂಕು ಸಂಚಾಲಕ ಹನುಮಂತಪ್ಪ ಅಣಜಿ ಹಾಗೂ ಹರಿಹರ ತಾಲ್ಲೂಕು ಸಂಚಾಲಕ ಮಹಾಂತೇಶ್ ಪಿ. ಜೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಹಾಂತೇಶ್ ಹಾಲುವರ್ತಿ, ಮಂಜುನಾಥ್. ಆರ್. ಲಕ್ಷ್ಮಣ ಕೊಡಗನೂರ್, ಕೆಂಚಪ್ಪ , ಹನುಮಂತಪ್ಪ ಗಂಗನಕಟ್ಟೆ, ತಾಲ್ಲೂಕು ಸಂಘಟನಾ ಸಂಚಾಲಕರಾದ ನಾಗರಾಜ ಬಿ ಚಿತ್ತಾನಹಳ್ಳಿನಗರ, ಸಂಚಾಲಕ ಶಿವಶಂಕರ್ ಎಸ್. ಎಂ, ಸ್ಲಮ್ ಸಂಚಾಲಕ ನಾಗರಾಜ್ ಆನೆಕೊಂಡ ಹಾಗೂ ಇತರರು ಹಾಜರಿದ್ದರು