ದಾವಣಗೆರೆ ಡಿ.21 (Davanagere) : ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ 5 ದಿನಗಳ ವೃತ್ತಿ ನಾಟಕ ರಚನಾ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಶಿಬಿರದ ನಂತರ ತಿಂಗಳಲ್ಲಿ ಶಿಬಿರಾರ್ಥಿಗಳು ರಚಿಸಿದ ಆಯ್ಕೆಗೊಂಡ ನಾಟಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಸ್ಪಷ್ಟವಾಗಿ ಕನ್ನಡ ಓದಲು, ಬರೆಯಲು ಬರುವ ಮತ್ತು ರಂಗಸಾಹಿತ್ಯ ಕುರಿತು ಪ್ರಾಥಮಿಕ ಜ್ಞಾನವುಳ್ಳ 18 ವರ್ಷ ಮೇಲ್ಪಟ್ಟವರು ಸ್ವ-ಪರಿಚಯದೊಂದಿಗೆ 20 ಜನವರಿ 2025 ರೊಳಗೆ ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ, ವಸತಿ ಸೌಲಭ್ಯ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ, ಮೊದಲನೇ ಮಹಡಿ, ಕೊಠಡಿ ಸಂ:38ಎ, ಜಿಲ್ಲಾಡಳಿತ ಭವನ, ಪಿ.ಬಿ.ರಸ್ತೆ ದಾವಣಗೆರೆ ದೂ.ಸಂ:08192-200635, 9341010712 ನ್ನು ಸಂಪರ್ಕಿಸಲು ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.
Read also : ಮೋದಿ ಮೆಚ್ಚಿಸಲು ಓನ್ ನೇಷನ್ ಓನ್ ಎಲಕ್ಷನ್ ತರಲಾಗುತ್ತಿದೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಟೀಕೆ