ದಾವಣಗೆರೆ (Davanagere ) : ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ೩೦ ಲಕ್ಷ ಹಣಕ್ಕೆ ಬೇಡಿಕೆಯಿಟ್ಟು, ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು,ಜಾತಿನಿಂದನೆ ಮಾಡಿರುವುದನ್ನು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ವಿನಾಯಕ ಬಿ.ಎನ್. ಆಕ್ರೋಶ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆಡಿಯೋದಲ್ಲಿ ಹಣಕ್ಕಾಗಿ ಒತ್ತಾಯ ಮಾಡಿದ್ದು, ಅಶ್ಲೀಲವಾಗಿ, ಕೆಟ್ಟದಾಗಿ ಮಾತನಾಡಿದ್ದು, ಜಾತಿ ನಿಂದನೆ, ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ನಿಂದಿಸಿದ್ದು ಕೇಳಿ ಬಂದಿದೆ. ಜನಪ್ರತಿನಿಧಿಯಾಗಿ ಇಂತಹ ಮಾತನಾಡಿದ ಮುನಿರತ್ನ ಕ್ಷಮೆಗೆ ಅರ್ಹರಲ್ಲ ಎಂದಿದ್ದಾರೆ. ಜಾತಿ ನಿಂದನೆ ಮಾಡಿರುವ ಅವರನ್ನು ಬಂಧಿಸಲಾಗಿದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
Read also : Davanagere | ಧ್ವಜಕಟ್ಟುವ ವಿಚಾರದಲ್ಲಿ ವಾಗ್ವಾದ : 8 ಜನರ ವಿರುದ್ದ ಪ್ರಕರಣ ದಾಖಲು
ಬಿಜೆಪಿ ಎಲ್ಲವನ್ನೂ ರಾಜಕೀಯ ಉದ್ದೇಶ ಎನ್ನುತ್ತದೆ. ಹಾಗಿದ್ದರೆ ಸಿದ್ದರಾಮಯ್ಯ ಮೇಲೆ ಕೇಸ್ ಹಾಕಿದ್ದು ರಾಜಕೀಯ ಉದ್ದೇಶ ಅಲ್ವಾ ಎಂದು ಕಿಡಿ ಕಾರಿದ್ದಾರೆ. ಮಹಿಳೆಯರ ಬಗ್ಗೆ ಮುನಿರತ್ನ ಆಡಿರುವ ಕೀಳು ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಆಡಿಯೋವನ್ನು ಕೇಳುವುದಕ್ಕೂ ಆಗುವುದಿಲ್ಲ. ಇಂತಹ ಪ್ರಕರಣದಲ್ಲಿ ಸಿಲುಕಿದ್ದೇರೆ ನಿಮ್ಮ ಮಾತುಗಳು ಯಾವ ರೀತಿ ಇರುತ್ತಿದ್ದವು?.ಮುನ್ನಿರತ್ನ ಅವರ ಮಾತುಗಳಿಗೆ ಬಿಜೆಪಿ ಬೆಂಬಲ ನೀಡುವುದೇ ಎಂಬದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.