ದಾವಣಗೆರೆ; ಸೆ.21 (Davanagere) : ಗಾಂಧೀಜಿಯವರ ಆಶಯದಂತೆ ಮಾನವೀಯತೆಗಾಗಿ ನಡೆ ಮೂಲಕ ನಾವೆಲ್ಲರೂ ಶಾಂತಿ ಪ್ರಿಯರಾಗೋಣ ಎಂದು ಜಿಲ್ಲಾಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಗೌರವಾಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ ಎಂದು ತಿಳಿಸಿದರು.
ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಶನಿವಾರ ಸೆಪ್ಟಂಬರ್ 21 ರಂದು ಹಮ್ಮಿಕೊಳ್ಳಲಾಗಿದ್ದ. ಮಾನವೀಯತೆಗಾಗಿ ನಡೆದ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು. ಗಾಂಧೀಜಿಯವರನ್ನು ಇಂದಿನ ದಿನಮಾನಗಳಲ್ಲಿ ಮತ್ತು ಮುಂದಿನ ದಿನಮಾನಗಳಲ್ಲಿ ಯಾಕೆ ಅವರು ಜೀವಂತವಾಗಿದ್ದಾರೆ ಎಂಬುದಕ್ಕೆ, ಇವತ್ತು ನಾವೆಲ್ಲರೂ ಸೇರಿ ಮಾಡುತ್ತಿರುವ ಶಾಂತಿ ನಡೆಯೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಈ ದಿನ ರಾಜ್ಯದ 31 ಜಿಲ್ಲೆಯಲ್ಲೂ ವಿಶ್ವ ಶಾಂತಿ ದಿನಾಚರಣೆ ಪ್ರಯುಕ್ತ ಮಾನವೀಯತೆಗಾಗಿ ನಡಿಗೆ ಜಾಥ ಆಯೋಜಿಸಲಾಗಿದೆ ಎಂದು ತಿಳಿಸಿದರು.
Read also : Davangere | ಪೊಲೀಸ್ ಪಥ ಸಂಚಲನ
ಜಾಥಾದಲ್ಲಿ ಅಶಾಂತಿ ತೊಲಗಿ ಶಾಂತಿ ನೆಲೆಸಲಿ, ರಷ್ಯಾ ಉಕ್ರೇನ್ ಯುದ್ಧ ನಿಲ್ಲಲಿ, ಬಾಂಗ್ಲಾದೇಶದಲ್ಲಿ ಶಾಂತಿ ನೆಲೆಸಲಿ, ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ನಿಲ್ಲಲಿ, ಮಾನವೀಯತೆಯಿಂದ ಮಾತ್ರ ವಿಶ್ವ ಶಾಂತಿ ಸಾಧ್ಯ ಎಂಬ ಘೋಷವಾಕ್ಯದೊಂದಿಗೆ ಜಾಥಾ ಸಾಗಿತು.
ಜಾಥಾವು ಮೋತಿ ವೀರಪ್ಪ ಕಾಲೇಜ್‍ನಿಂದ ಆರಂಭಗೊಂಡು ಬಾಯ್ಸ್ ಹಾಸ್ಟೆಲ್, ಹಾಗೂ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಮುಂಭಾಗದ ರಸ್ತೆಯಿಂದ ಸಾಗಿ ಮೋತಿ ವೀರಪ್ಪ ಕಾಲೇಜ್ ಆವರಣಕ್ಕೆ ಬಂದು ಕೊನೆಯಾಯಿತು.
ಜಾಥಾದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಯಾದ ಎಂ.ವಿ ಶಿವಕುಮಾರ್ ಹಾಗೂ ಕುಂದುವಾಡ ವಾಯುವಿಹಾರಿಗಳ ಬಳಗ, ಅಸಂಘಟಿತ ಕಾರ್ಮಿಕರ ಸಂಘ, ವಿ.ಎಸ್ ಪ್ಯಾರಾಮೆಡಿಕಲ್ ಕಾಲೇಜ್, ಎಂ.ಎಸ್.ವಿ ಕಾಲೇಜ್, ಮಾಕನೂರು ಮಲ್ಲೇಶಪ್ಪ ಕಾಲೇಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್, ಡಿ.ಆರ್.ಎಂ ಕಾಲೇಜ್, ಜೈನ್ ಇಂಜಿನಿಯರಿಂಗ್ ಕಾಲೇಜ್, ಸಿದ್ದಗಂಗಾ ಕಾಲೇಜ್, ಎಸ್.ಜೆ.ವಿ.ಪಿ ಕಾಲೇಜ್, ಎಂ.ಇ.ಎಸ್ ಕಾಲೇಜಿನ ವಿದ್ಯಾರ್ಥಿಗಳು, ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು.