Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere news | ಕಾರ್ಮಿಕರು ದೇಶದ ಅಭಿವೃದ್ದಿಯ ನೈಜ ಆಧಾರಸ್ತಂಭ : ನ್ಯಾ.ಮಹಾವೀರ್ ಮ. ಕರೆಣ್ಣವರ್
ತಾಜಾ ಸುದ್ದಿ

Davanagere news | ಕಾರ್ಮಿಕರು ದೇಶದ ಅಭಿವೃದ್ದಿಯ ನೈಜ ಆಧಾರಸ್ತಂಭ : ನ್ಯಾ.ಮಹಾವೀರ್ ಮ. ಕರೆಣ್ಣವರ್

Dinamaana Kannada News
Last updated: September 21, 2024 12:52 pm
Dinamaana Kannada News
Share
davanagere
davanagere
SHARE

ದಾವಣಗೆರೆ; ಸೆ.21 (Davanagere) : ಕಾರ್ಮಿಕರು ದೇಶದ ಅಭಿವೃದ್ದಿಯ ನೈಜ ಆಧಾರಸ್ತಂಭವಾಗಿದ್ದು ಇವರ ಶ್ರಮದಿಂದ ಸಮಾಜ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಇದಕ್ಕಾಗಿ ಕಾರ್ಮಿಕ ವರ್ಗ ನೆಮ್ಮದಿಯಾಗಿರಲೆಂದು ಸರ್ಕಾರ ಅವರ ಅಭಿವೃದ್ದಿಗಾಗಿ ಅನೇಕ ಯೋಜನೆಗಳು, ಸೌಲಭ್ಯಗಳನ್ನು ಜಾರಿಗೊಳಿಸಿದ್ದು ಇವುಗಳ ಸದುಪಯೋಗ ಮಾಡಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮಹಾವೀರ್ ಮ. ಕರೆಣ್ಣವರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ದಾವಣಗೆರೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಶನಿವಾರ ಸೆ.21 ರಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾದ ದಾವಣಗೆರೆ ಜಿಲ್ಲೆಯ ಉದ್ಯೋಗದಾತರಿಗೆ, ಹೊರಗುತ್ತಿಗೆ ಏಜನ್ಸಿಗಳು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯು  ಅನುಷ್ಠಾನ ಗೊಳಿಸುತ್ತಿರುವ ಕಾನೂನುಗಳು ಮತ್ತು ಅನುಷ್ಟಾನ ಮಾಡುತ್ತಿರುವ ಯೋಜನೆಗಳ ಕುರಿತು ಅರಿವು ಮೂಡಿಸಲು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರೆಂಬ ಯಂತ್ರದಿಂದ ಸಮಾಜ ಸುಮಗವಾಗಿ ನಡೆದುಕೊಂಡು ಹೋಗುತ್ತಿದೆ, ಒಂದು ಪಕ್ಷ ಕಾರ್ಮಿಕ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸದೇ ಹೋದರೆ ಅನೇಕ ರೀತಿಯಲ್ಲಿ ತೊಂದರೆ ಎದುರಾಗುತ್ತದೆ. ಆದ್ದರಿಂದ ಕಾರ್ಮಿಕ ವರ್ಗದವರ ಜೀವನ ಮಟ್ಟ ಉತ್ತಮವಾಗಿರಲೆಂದು ಸರ್ಕಾರ ಹಲವಾರು ಯೋಜನೆಗಳನ್ನು ಅವರಿಗಾಗಿ ನೀಡಿದೆ. ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ನೋಂದಣಿಗೆ ಅವಕಾಶ ಮಾಡಿಕೊಟ್ಟು, ಕಾರ್ಮಿಕ ಇಲಾಖೆ ಅವರಿಗೆ ಸಹಕಾರ ನೀಡಲು ಸಜ್ಜಾಗಿದೆ, ಕಾರ್ಮಿಕರು ಇದರ ಫಲ ಪಡೆಯಬೇಕು ಎಂದು ತಿಳಿಸಿದರು.

ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಕಾರ್ಮಿಕ ಇಲಾಖೆಯಿಂದ ಕಾಲ ಕಾಲಕ್ಕೆ ಮಾಹಿತಿ ನೀಡಬೇಕು, ಕಾರ್ಮಿಕರು ತಮ್ಮಗಳ ಕುಟುಂಬದ ಜವಾಬ್ದಾರಿ ವ್ಯಕ್ತಿಗಳಾಗಿರುವ ನೀವು ಜಾಗೃತರಾಗಿ ಇತರರಿಗೂ ಮಾಹಿತಿ ತಿಳಿಸಬೇಕು. ತಮಗೆ ಅನ್ವಯವಾಗುವ ಯೋಜನೆಗಳಿಗೆ ಮಾತ್ರ ನೋಂದಣಿ ಮಾಡಿಸಿಕೊಳ್ಳಬೇಕು, ಸುಳ್ಳು ನೋಂದಣಿಗಳು ಕಂಡು ಬಂದಲ್ಲಿ ಇಲಾಖೆಯ ಗಮನಕ್ಕೆ ತರಬೇಕೆಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕಾರ್ಯಾಗಾರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಕಾರ್ಮಿಕ ಇಲಾಖೆ ಸೇರಿದಂತೆ ಸರ್ಕಾರದಿಂದ ಕಾರ್ಮಿಕರಿಗೆ ಲಭ್ಯವಿರುವ ವಿವಿಧ ಯೋಜನೆಗಳು, ಕಾರ್ಯಕ್ರಮಗಳು, ಕಾನೂನುಗಳ ಕುರಿತು ಮಾಹಿತಿ ನೀಡಲಿದ್ದಾರೆ. ಎಲ್ಲ ಕಾರ್ಮಿಕರು ಸವಿವರವಾಗಿ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೋಳ್ಳಬೇಕು ಎಂದು ತಿಳಿಸಿದರು.

Read also : Davanagere | ಮಾನವೀಯತೆಗಾಗಿ ನಡೆ ಮೂಲಕ ನಾವೆಲ್ಲರೂ ಶಾಂತಿ ಪ್ರಿಯರಾಗೋಣ : ಡಿಸಿ

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅರುಣ್‍ಕುಮಾರ್ ಎಲ್.ಎಚ್ ಮಾತನಾಡಿ. ಈ ಕಾರ್ಯಾಗಾರವು ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕಾದರೆ ಕಾರ್ಮಿಕ ಹಾಗೂ ವಿವಿಧ ಸಂಘಟನೆಗಳ, ಹಕ್ಕುಗಳು ಪರವಾಗಿ ಹೋರಾಟ ಮಾಡುತ್ತಿರುವ ಮುಖಂಡರಿಗೆ ಕಾನೂನು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ಇರುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ರಾಜಗೋಪಾಲ್ ವಿವಿಧ ಕಾರ್ಮಿಕ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಅಧಿಕಾರಿಯಾದ ಮಂಜಪ್ಪ ಬಾಲ ಕಾರ್ಮಿಕ ಕಾಯ್ದೆ ಸೇರಿದಂತೆ ಕಾರ್ಮಿಕರಿಗೆ ದೊರೆಯುವ ಸೌಲಭ್ಯ ಮತ್ತು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಗಾರದಲ್ಲಿ ಕಾರ್ಮಿಕ ಸಹಾಯಕ ಆಯುಕ್ತರಾದ ಡಾ. ಅವಿನಾಶ್ ನಾಯ್ಕ, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಜಿಲ್ಲಾ ಬಾಲ ಕಾರ್ಮಿಕ ಯೊಜನಾ ನಿರ್ದೇಶಕರಾದ ಪ್ರಸನ್ನಕುಮಾರ್ ಇ.ಎನ್, ಕಾರ್ಮಿಕ ಸಂಘದ ಮಾಲೀಕರ, ಅಧ್ಯಕ್ಷರು, ಸಂಘಟಿತ ಮತ್ತು ಅಸಂಘಟಿತ ಪದಾಧಿಕಾರಿಗಳು ಹಾಗೂ ಇನ್ನಿತರರು ಹಾಜರಿದ್ದರು.

TAGGED:Davanagere districtDinamana.comKannada Newsಕನ್ನಡ ಸುದ್ದಿ ದಿನಮಾನ.ಕಾಂದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere Davanagere | ಮಾನವೀಯತೆಗಾಗಿ ನಡೆ ಮೂಲಕ ನಾವೆಲ್ಲರೂ ಶಾಂತಿ ಪ್ರಿಯರಾಗೋಣ : ಡಿಸಿ
Next Article davanagere Davanagere | ಸೆ.25 ರಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸಿದವರ ದಾಖಲಾತಿ ಪರಿಶೀಲನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ದಾವಣಗೆರೆ (Davanagere): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಟಿ.ಎನ್.ರಂಗಸ್ವಾಮಿ, ಮೈಕಲ್…

By Dinamaana Kannada News

ರಸ್ತೆ ದುರಸ್ತಿಗೆ ಎಸ್‌ಡಿಪಿಐ ಒತ್ತಾಯ

ದಾವಣಗೆರೆ: ರಜಾ-ಉಲ್-ಮುಸ್ತಫಾ ನಗರ ಸಂಪರ್ಕಿಸುವ ರಿಂಗ್ ರಸ್ತೆ ಗದ್ದೆಯಂತೆ ಭಾಸವಾಗುತ್ತಿದ್ದು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಎಸ್ ಡಿ ಪಿ…

By Dinamaana Kannada News

Davangere University : ಮೊಬೈಲ್ ಗೀಳು ಬಿಡಿ, ಪುಸ್ತಕ ಓದಿ : ಪ್ರೊ.ಕುಂಬಾರ

ದಾವಣಗೆರೆ  (Davangere)  : ಜ್ಞಾನಾರ್ಜನೆಯ ಜೊತೆಗೆ ಮಾನಸಿಕ ಆರೋಗ್ಯದ ಉದ್ದೇಶಕ್ಕಾಗಿ ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು…

By Dinamaana Kannada News

You Might Also Like

Two Wheeler (Bike) Repair
ತಾಜಾ ಸುದ್ದಿ

ದಾವಣಗೆರೆ | ದ್ವಿಚಕ್ರ ವಾಹನ(ಬೈಕ್) ರಿಪೇರಿ ಮತ್ತು ಸೇವೆ ಉಚಿತ ತರಬೇತಿ : ಜುಲೈ 23 ಕೊನೆಯ ದಿನ

By Dinamaana Kannada News
Youth Congress
ತಾಜಾ ಸುದ್ದಿ

ದಾವಣಗೆರೆ | ಜಾತ್ಯತೀತ , ಸಮಾಜವಾದಿ ಪದ ತೆಗೆಯುವ ಹೇಳಿಕೆ : ಆರ್‍ಎಸ್‍ಎಸ್ ಮುಖಂಡ ವಿರುದ್ದ ಕ್ರಮಕ್ಕೆ ಒತ್ತಾಯ

By Dinamaana Kannada News
MP visits STPI Bengaluru
ತಾಜಾ ಸುದ್ದಿ

ದಾವಣಗೆರೆ | ಸಂಸದರಿಂದ ಎಸ್‌ಟಿಪಿಐ ಬೆಂಗಳೂರು ಭೇಟಿ : ಐಟಿವಲಯಕ್ಕೆ ಹೊಸ ಉತ್ತೇಜನ

By Dinamaana Kannada News
ದಾವಣಗೆರೆ
ತಾಜಾ ಸುದ್ದಿ

ದಾವಣಗೆರೆ | ಆತ್ಮಹತ್ಯೆಗೆ ಯತ್ನ : ತಾಯಿ ಮತ್ತು  ಮಗು ರಕ್ಷಿಸಿದ 112 ಹೊಯ್ಸಳ ಸಿಬ್ಬಂದಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?