ಹರಿಹರ (Davanagere news): ನಗರದಲ್ಲಿ ಭಾನುವಾರ ಹಿಂದೂ ಜಾಗರಣ ವೇದಿಕೆ ಹಾಗೂ ಸಂಘ, ಪರಿವಾರದವರು ಸೇರಿ ನಡೆಸಿದ ಹಿಂದೂ ಮಹಗಣಪತಿ ವಿಸರ್ಜನೆ ಶೋಭಾಯಾತ್ರೆ ಸಂದರ್ಭದಲ್ಲಿ ಡಾ.ಅಂಬೇಡ್ಕರ್‍ರವರ ಭಾವಚಿತ್ರ ಬಳಸಿದ್ದಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್‍ರವರು ಹಿಂದೂ ಧರ್ಮದಲ್ಲಿನ ಜಾತೀಯತೆ, ಮೌಢ್ಯತೆಯನ್ನು ಖಂಡಿಸಿ ಬೌದ್ಧ ಧರ್ಮಕ್ಕೆ ಮತಾಂತರ ಆಗಿದ್ದರು. ವಿದ್ಯಾರ್ಥಿಯಾಗಿದ್ದಾಗ ನಂತರ ವಕೀಲರಾಗಿ ಸೇವೆ ಸಲ್ಲಿಸುವಾಗ ಸವರ್ಣೀಯ ಹಿಂದೂಗಳ ಜಾತೀಯತೆ, ಕಿರುಕುಳದಿಂದ ಅವರು ನೊಂದಿದ್ದರು.
Read also : Davanagere | ಸ್ವಚ್ಛತಾ ಹಿ ಸೇವಾ ಅಭಿಯಾನ : ಸೈಕಲ್ ಜಾಥಾಕ್ಕೆ ಮೇಯರ್ ಚಮನ್ ಸಾಬ್ ಚಾಲನೆ
ದಲಿತರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಭಾರತೀಯ ಸಮಾಜದಲ್ಲಿ ಕಾಣಲಾಗುತ್ತಿತ್ತು. ಇಂತಕ ಮನೋಭಾದ, ಸಿದ್ದಾಂತದ ರಾಷ್ಟ್ರ ನಾಯಕನ ಭಾವಚಿತ್ರವನ್ನು ಬಳಸುವ ಹಕ್ಕು ಸಂಘ ಪರಿವಾರದವರಿಗಿಲ್ಲ. ಅಂಬೇಡ್ಕರ್‍ರವರ ಬಗ್ಗೆ ಅವರಿಗೆ ನಿಜವಾದ ಕಾಳಜಿ ಇದ್ದರೆ ದಲಿತರಿಗೆ ದೇವಸ್ಥಾನ, ಕ್ಷೌರದಂಗಡಿಗೆ ಪ್ರವೇಶ ದೊರಕಿಸಲು ಅವರು ಸವರ್ಣೀರಲ್ಲಿ ಜಾಗೃತಿ ಮೂಡಿಸಲಿ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.