ಹರಿಹರ (Harihara) : ಸುತ್ತಮುತ್ತಲಿನ ಪರಿಸರವನ್ನು ಹಾಗೂ ಸಮಾಜವನ್ನು ಸ್ವಚ್ಛತೆಯೆಡೆಗೆ ಕೊಂಡೊಯ್ಯುವುದರಿಂದ ಮಾತ್ರ ದೇಶದ ಸ್ವಚ್ಛತೆ ಸಾಧ್ಯ ಎಂದು ಹರಿಹರ ಶಾಸಕ ಬಿ.ಪಿ ಹರೀಶ್ ಹೇಳಿದರು.
ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಸ್ವಚ್ಛ ಭಾರತ್ ಮಿಷನ್ ಅಭಿಯಾನದಲ್ಲಿ ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 02ರವರೆಗೂ ಇಡೀ ದೇಶದಾದ್ಯಂತ ಸ್ವಚ್ಛತಾ ಆಂದೋಲನವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದು ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ, ನಗರಸಭೆ ಪೌರಯುಕ್ತ ಸುಬ್ರಮಣ್ಯಶೆಟ್ಟಿ ಹಾಗೂ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ರವಿಪ್ರಕಾಶ್ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
Read also : Davanagere | 23 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಸೆರೆ
ಸಂಸ್ಥೆಯ ಮುಖ್ಯಸ್ಥರಾದ ಫಾದರ್ ಎರಿಕ್ ಮತಾಯಸ್, ಫಾದರ್ ವಿನೋದ್ ಎಚ್, ಫಾದರ್ ಜಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪುಷ್ಪಲತಾ ಅರಸ್ ಉಪ ಪ್ರಾಂಶುಪಾಲರಾದ ಮೂಸಿನಲ್ಲ ಹಾಗೂ ಪಾಸ್ಕಲ್ ಫರ್ನಾಂಡಿಸ್ ಕಾರ್ಯಕ್ರಮ ಸಂಯೋಜಕರಾಗಿ ಮಂಜುನಾಥ ಟಿ ಎಸ್ ಹಾಗೂ ಶಮೀರ್ ಭಾನು ಉಪಸ್ಥಿತರಿದ್ದರು.