ದಾವಣಗೆರೆ.ಅ.1 (Davanagere): ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆ ಮತ್ತು ದೇವಸ್ಥಾನಗಳಲ್ಲಿ ನಡೆದಿದ್ದ 23 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ 12.50 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಬಸವಾಪಟ್ಟಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಸವಾಪಟ್ಟಣ ಗ್ರಾಮದ ಸಂಜಯ್ ಅಲಿಯಾಸ್ ಹನುಮಂತ ಅಲಿಯಾಸ್ ಅದ್ದೂರಿ ಹನುಮಂತ ಮತ್ತು ಮಂಜುನಾಥ ಅಲಿಯಾಸ್ ಎಲೆಮಾರಿ ಮಂಜ ಬಂಧಿತ ಕಳ್ಳರು.
ಮನೆ ಮತ್ತು ದೇವಸ್ಥಾನಗಳ ಹುಂಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಆರೋಪಿತರ ಬಂಧನ. ಸುಮಾರು 12.50 ಲಕ್ಷ ಮೌಲ್ಯದ ಸ್ವತ್ತು ವಶ
ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ, ಹರೋಸಾಗರ, ಕೋಟೆಹಾಳ್ ಗ್ರಾಮದಲ್ಲಿ ಹಗಲು ಮನೆಗಳ್ಳತನ ಕುರಿತು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಎಂ ಸಂತೋಷ ಮತ್ತು ಜಿ.ಮಂಜುನಾಥ ಹಾಗೂ ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಸಿಪಿಐ ಲಿಂಗನಗೌಡ ನೆಗಳೂರು, ಪಿ.ಎಸ್.ಐಗಳಾದ ವೀಣಾ, ಶ್ರೀಮತಿ ಭಾರತಿ ಮತ್ತು ಸಿಬ್ಬಂದಿಗಳ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಸವಾಪಟ್ಟಣ ಪೊಲೀಸ್ ಠಾಣೆಯ 03 ಪ್ರಕರಣಗಳು, ಸಂತೆಬೆನ್ನೂರು ಪೊಲೀಸ್ ಠಾಣೆಯ 02 ಪ್ರಕರಣಗಳು, ಮತ್ತು ಹೊನ್ನಾಳಿ ಪೊಲೀಸ್ ಠಾಣೆಯ 01 ಪ್ರಕರಣ, ಒಟ್ಟು 06 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿತರಿಂದ ಕಳುವು ಮಾಡಿದ ಸುಮಾರು 10 ಲಕ್ಷ ರೂಗಳ ಮೌಲ್ಯದ ಬೆಳ್ಳಿ, ಬಂಗಾರ, ನಗದು ಹಣ, ಹಾಗೂ ಅಂದಾಜು 02 ಲಕ್ಷ 50 ಸಾವಿರ ಮೌಲ್ಯದ ಮೋಟಾರ್ ಬೈಕನ್ನು ವಶಪಡಿಸಿಕೊಂಡಿದ್ದು, ಒಟ್ಟು 12 ಲಕ್ಷದ 50 ಸಾವಿರ ರೂಗಳ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
Read also : ಕೃಷಿಹೊಂಡದ ದಡದಲ್ಲಿ ಆಟ ಆಡುವಾಗ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಸಾವು, ಒಬ್ಬರು ಪಾರು
ಆರೋಪಿತರುಗಳು ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 23 ಕ್ಕೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪ್ರಕರಣಗಳಲ್ಲಿ ಈಗಾಗಲೇ ಎರಡು ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ರುದ್ರೇಶ್, ಸತೀಶ್, ವೀರಭದ್ರಪ್ಪ, ಗುರುಬಸಪ್ಪ, ಮತ್ತು ಪರಶುರಾಮ, ಇಬ್ರಾಹಿಂ, ತಿಪ್ಪೇಶ್ ಓಲೆಕಾರ್, ತಿಮ್ಮರಾಜು, ರವಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಯವರಾದ ರಾಘವೇಂದ್ರ, ಶಾಂತರಾಜ್ ಇದ್ದರು.