ದಾವಣಗೆರೆ ಅ.09 (Davanagere): ಕನ್ನಡ ವೃತ್ತಿ ರಂಗಭೂಮಿ ರಂಗಾಯಣ ವತಿಯಿಂದ ದಾವಣಗೆರೆಯಲ್ಲಿ ರಂಗ ಸಂಗೀತ ತರಬೇತಿ ಮತ್ತು ರಂಗ ಗೀತೆಗಳ ಕಲಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹದಿನೈದು ದಿವಸಗಳ ಕಾರ್ಯಾಗಾರದಲ್ಲಿ ಧ್ವನಿ ಸಂಸ್ಕರಣೆ, ಸಂಗೀತದ ಪ್ರಾಥಮಿಕ ಪಾಠಗಳು ಮತ್ತು ರಂಗ ಗೀತೆಗಳ ಅಭಿನಯಪೂರ್ವಕ ಕಲಿಕೆಯ ತರಬೇತಿ ನೀಡಿ, ನಂತರ ಸಾರ್ವಜನಿಕ ಪ್ರದರ್ಶನ ಏರ್ಪಡಿಸಲಾಗುವುದು.
ಸಂಗೀತದ ಪ್ರಾಥಮಿಕ ಜ್ಞಾನವುಳ್ಳ 18 ರಿಂದ 40 ವರ್ಷ ವಯೋಮಾನದೊಳಗಿನ ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ಅಕ್ಟೋಬರ್ 16 ರೊಳಗೆ ಜಿಲ್ಲಾಡಳಿತ ಭವನ, ಮೊದಲನೇ ಮಹಡಿ, ಕೊಠಡಿ ಸಂಖ್ಯೆ-38 “ಎ” ಪಿ.ಬಿ.ರಸ್ತೆ, ದಾವಣಗೆರೆ ದೂ.ಸಂ:08192-200635 ಇಲ್ಲಿ ಹೆಸರು ನೊಂದಾಯಿಸಲು ವೃತ್ತಿ ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ ತಿಳಿಸಿದ್ದಾರೆ.
Read also : ಒತ್ತಡಕ್ಕೆ ಮಣಿಯದೇ ಜಾತಿ ಗಣತಿ ವರದಿ ಜಾರಿಯಾಗಲಿ: ಜಿ. ಬಿ. ವಿನಯ್ ಕುಮಾರ್