ದಾವಣಗೆರೆ (Davanagere) : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಹಾಗೂ ಆಯುಕ್ತ ಹುಲ್ಮನೆ ತಿಮ್ಮಣ್ಣ ಮತ್ತು ಇಂಜಿನಿಯರ್ ಗಳ ಜೊತೆಗೂಡಿ ಹರಿಹರ ನಗರಸಭೆಯ ಆವರಣದಲ್ಲಿ ನೂತನವಾಗಿ ಧೂಡಾ ಕಚೇರಿ ಸ್ಥಳ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಕೇಳಿಕೊಂಡರು ಸಾರ್ವಜನಿಕರು ತೊಂದರೆಯನ್ನು ನಿವಾರಿಸಲು ಹರಿಹರದಲ್ಲಿ ನೂತನವಾಗಿ ಕಚೇರಿ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುತ್ತೇವೆ ಎಂದು ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ಹೇಳಿದರು.
ನೂತನವಾಗಿ ದೂಡಾ ಸದಸ್ಯರಾದ ಜಬ್ಬರ್ ಖಾನ್, ನಗರಸಭೆ ಅಧ್ಯಕ್ಷರಾದ ಕವಿತಾ ಬೇಡರ್, ನಗರಸಭೆ ಆಯುಕ್ತರಾದ ಸುಬ್ರಮಣ್ಯ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡರಾದ ರೇವಣಸಿದ್ದಪ್ಪ ನಗರಸಭೆ ಸದಸ್ಯರಾದ ಶಂಕರ್ ಕಟಾವರ್ ಸನಾವುಲ್ಲ ಸಿದ್ದೇಶ್ ಮಂಜುನಾಥ್ ಜಾವಿದ್ ಅಲಿ ಬಾಬುಲಾಲ್ ಬಿಲ್ಲು , ಫೈರೋಜ್ ಇನ್ನು ಮುಂತಾದವರು ಇದ್ದರು.