ದಾವಣಗೆರೆ (Davanagere); ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಕ್ಟೋಬರ್ 3 ರಿಂದ 6 ರವರೆಗೆ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಖೋ-ಖೋ ಪಂದ್ಯಾವಳಿಯಲ್ಲಿ ನಗರದ ಕ್ರೀಡಾ ವಸತಿ ನಿಲಯದ ಪುರುಷರ ಖೋ-ಖೋ ತಂಡವು ಬೆಳ್ಳಿ ಪದಕ ಪಡೆದಿದೆ.
ತಂಡದಿಂದ ಗಗನ್, ಸಿದ್ಧರೂಢ, ಶರತ್, ಅರ್ಜುನ, ಮಹಮ್ಮದ್ ತಾಸೀನ್, ನಾಗರಾಜ, ರಾಜು, ಧನರಾಜ್, ಆಸೀಫ್, ಷರೀಫ್, ಲಕ್ಷ್ಮಣ ಹಾಗೂ ಲಂಕೇಶ ಇವರುಗಳು ಉತ್ತಮ ಪ್ರದರ್ಶನ ನೀಡಿರುತ್ತಾರೆ. ತಂಡದ ತರಬೇತುದಾರರಾಗಿ ರಾಮಲಿಂಗಪ್ಪ.ಜೆ, ತಂಡದ ವ್ಯವಸ್ಥಾಪಕರಾಗಿ ರವಿ.ಕೆ ಇವರು ಭಾಗವಹಿಸಿದ್ದರು.
Read also : Davanagere | ಹರಿಹರದಲ್ಲಿ ನೂತನವಾಗಿ ದೂಡಾ ಕಚೇರಿ ನಿರ್ಮಾಣ : ದಿನೇಶ್ ಕೆ ಶೆಟ್ಟಿ ಸ್ಥಳ ಪರಿಶೀಲನೆ