ದಾವಣಗೆರೆ (Davanagere): ಬಡ ಕುಟುಂಬದಲ್ಲಿ ಜನಿಸಿರುವ ಯುಸೂಫ್ ಅತೀ ಚಿಕ್ಕ ವಯಸ್ಸಿನಲ್ಲಿ ಜಿಲ್ಲಾ, ಅಂತರ್ ಜಿಲ್ಲಾ , ರಾಜ್ಯಮಟ್ಟ ಹಾಗೂ ಅಂತರ್ ರಾಜ್ಯಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಿರುವುದು ದಾವಣಗೆರೆ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಮ್ಮೆಯ ಸಂಗತಿ ಎಂದು 31ನೇ ವಾರ್ಡಿನ ಮಹಾನಗರಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಅಸೋಶಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಜಿಲ್ಲಾ ಹಾಗೂ ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನಗರಕ್ಕೆ ಕೀರ್ತಿ ತಂದ ಕ್ರೀಡಾಪಟು ಯೂಸುಫ್ ಐ.ಬಿ. ಅವರಿಗೆ ಎಸ್.ಓ.ಜಿ. ಕಾಲೋನಿಯಲ್ಲಿ ಅದ್ಧೂರಿಯಾಗಿ ಸನ್ಮಾನಿಸಿ ಮಾತನಾಡಿದರು.
ಎಸ್.ಓ.ಜಿ. ಕಾಲೋನಿಯಲ್ಲಿ ಕೋಳಿ ಅಂಗಡಿ ವ್ಯಾಪಾರದಲ್ಲಿ ತೊಡಗಿರುವ ತಂದೆ ಇನಾಯತ್ ಮತ್ತು ತಾಯಿ ದಿಲ್‍ಶಾದ್‍ರವರ ಮಗನಾದ ಯೂಸುಫ್ ಐ.ಬಿ.ಅವರು 23ನೇ ವಯಸ್ಸಿನಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಉನ್ನತ ಸಾಧನೆಯತ್ತ ಹೆಜ್ಚೆ ಇಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರಲೆಂದು ಹಾರೈಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತೋಳಹುಣಸೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪಾಮೇನಹಳ್ಳಿ ಬಸವರಾಜಪ್ಪ, ಕಾರ್ ಬಸವರಾಜ್, ಆಸೀಫ್, ಮುಖಂಡ ಬಿ. ಕಲ್ಲೇಶಪ್ಪ, ಗುಜರಿ ಚಮನ್ ಸಾಬ್, ನನ್ನೂಸಾಬ್, ಮಾರುತಿ, ಫಯಾಜ್ ಸಾಬ್, ಪಾಮೇನಹಳ್ಳಿ ಟ್ರಾಕ್ಟರ್ ನಾಗಣ್ಣ, ಬುಡೇನ್ ಸಾಬ್, ಫೈರೋಜ್, ಪಾಮೇನಹಳ್ಳಿ ಶೇಖರಪ್ಪ, ತಿರ್ಲಪ್ಪ, ರಿಯಾಜ್, ಫಾರೂಕ್, ಉಮೇಶ್‍ರಾವ್, ಖಾಸಿಂಸಾಬ್, ತಾಜುದ್ದೀನ್, ಅಂಗಡಿ ಜಯಣ್ಣ, ಪರಮೇಶಣ್ಣ, ಪ್ರಭು, ಅವಲಕ್ಕಿ, ಬಸವರಾಜ, ಹೋಟೆಲ್ ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಹದಡಿ ವೆಂಕಟೇಶ್ ನಿರ್ವಹಿಸಿದರು.