ದಾವಣಗೆರೆ : ಒಗ್ಗಟ್ಟಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ದಾವಣಗೆರೆಯ ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿನಿರತರ ಸಂಘ (ಆವೋಪ) ದಿಂದ ನಿರ್ಮಾಣವಾದ ಆವೋಪ ಭವನ ಉದಾಹರಣೆಯಾಗಿದೆ ಎಂದು ಶ್ರೀ ವಾಸವಿ ಪೀಠಂ, ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಗಳು ನುಡಿದರು.
ನಗರದ ಪಿ.ಬಿ. ರಸ್ತೆ, ಸಾಯಿ ಇಂಟರ್ನ್ಯಾಷನಲ್ ಹೋಟೆಲ್ ಎದುರು ಆವೋಪ ಕಾಲೋನಿಯಲ್ಲಿ ನಿರ್ಮಿಸಿರುವ ನೂತನ ಆವೋಪ ಭವನಕ್ಕೆ ಭೇಟಿ ನೀಡಿ, ಪಾದಪೂಜೆ ಸ್ವೀಕರಿಸಿ ಶ್ಲಾಘನೀಯ ನುಡಿಗಳನ್ನಾಡಿದರು.
ಆವೋಪ ಭವನಕ್ಕೆ ನಮ್ಮ ಜನಾಂಗದ ಮೊದಲ ಗುರುಗಳಾದ ಶ್ರೀ ಚಂದ್ರಶೇಖರಾನಂದ ಸ್ವಾಮೀಜಿಗಳು ಈ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ, ಹರಸಿದ್ದರು. ಈಗ ನಾವು ನೂತನ ಭವನಕ್ಕೆ ಪಾದಾರ್ಪಣೆ ಮಾಡುವ ಮೂಲಕ ಒಂದು ಸರ್ಕಲ್ ಕಂಪ್ಲೀಟ್ ಆದ ಹಾಗಿದೆ ಎಂದರು.
ಸಮಾಜಕ್ಕಾಗಿ ಒಂದು ಆಸ್ತಿ ಮಾಡುವುದು ಕಷ್ಟಕರ ವಿಚಾರ ಆದರೆ ಪ್ರಯತ್ನ ಬಿಡಬಾರದು. ಸಂಸ್ಥೆಯ ಹಿರಿಯರಾದವರು ಮುಂದಿನ ಪೀಳಿಗೆಗೆ ಏನು ಮಾಡಬೇಕು ಎಂಬುದರ ಮಾರ್ಗದರ್ಶನ ಮಾಡಿರಿ ಎಂದು ಸಲಹೆ ನೀಡಿದರು. ಈ ಭವನದ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ. ದಾವಣಗೆರೆ ಆವೋಪದಿಂದ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಲಿ ಎಂದು ಹಾರೈಸಿದರು.
ಇದೇ ವೇಳೆ ಭವನದ ಮೇಲ್ಛಾವಣಿಗೆ ದೇಣಿಗೆ ನೀಡಿದ ಶ್ರೀಮತಿ ಗಿರಿಜಾ ಸುರೇಶ್ ಹಾಗೂ ವಕೀಲರಾದ ಸುರೇಶ್ ಕುಮಾರ್ ದಂಪತಿಗಳನ್ನು ಆವೋಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
Read also : ದಾವಣಗೆರೆ | ಓಮಿನಿ ವಾಹನ ಕಳ್ಳತನ : ಆರೋಪಿ ಸೆರೆ
ಈ ಸಂದರ್ಭದಲ್ಲಿ ಆವೋಪ ಅಧ್ಯಕ್ಷರಾದ ಡಾ. ಜಗನ್ನಾಥ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಾಕಂ ನಾಗರಾಜ ಗುಪ್ತ, ಖಜಾಂಚಿ ಎಸ್.ವಿ. ಅಶೋಕ್, ಸಂಘಟನಾ ಕಾರ್ಯದರ್ಶಿ ಮಧುಸೂದನ್ ಕಾರ್ಯಕಾರಿ ಸಮಿತಿಯ ಎಲ್ಲ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.