ದಾವಣಗೆರೆ (Davanagere): ಮರಳಿನ ಲಾರಿ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಚನ್ನಗಿರಿ ತಾಲೂಕಿನ ಗುಡ್ಡದಕುಮಾರನಹಳ್ಳಿ ಹಾಗೂ ಹಾಲೇಶ್‌ಪುರ ಗ್ರಾಮಗಳ ನಡುವೆ ನಡೆದಿದೆ.
ರಮೇಶ್ ಹಾಲೇಶಪುರ(21) ರಮೇಶ ಜಮ್ಮನಹಳ್ಳಿ (22) ಮೃತಪಟ್ಟ ಬೈಕ್ ಸವಾರರು.
ಗುರುವಾರ ಬೆಳಿಗ್ಗೆ ಎರಡು ಮರಳಿನ ಲಾರಿಗಳು ಪರಸ್ಪರ ಓವರ್ ಟೆಕ್ ಮಾಡುವಾಗ ಎದುರಿಗೆ ಬಂದ ಬೈಕ್ ಗೆ ಡಿಕ್ಕಿ ಹೊಡೆದಿವೆ. ಇದರಿಂದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆ ಗುಡ್ಡದ ಕುಮಾರನ ಹಳ್ಳಿ ಗ್ರಾಮಸ್ಥರು ಆಕ್ರೋಶಗೊಂಡ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಬಸವಾ ಪಟ್ಟಣ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಮುಂದುವರೆಸಿದ್ದಾರೆ.
Read also : Davanagere | ಮನೆಕಳ್ಳತನ ಪ್ರಕರಣ : ಒರಿಸ್ಸಾ ರಾಜ್ಯದ ಇಬ್ಬರ ಬಂಧನ