ದಾವಣಗೆರೆ (Davanagere) : ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.
ಘಟನೆ ವಿವರ : ದಿನಾಂಕ-27.05.2020 ರಂದು ಪಿರ‍್ಯಾದಿ ಠಾಣೆಗೆ ಹಾಜರಾಗಿ 03 ವರ್ಷಗಳ 2016-ಮಾರ್ಚ್ ತಿಂಗಳಲ್ಲಿ ಕೊಂಡಜ್ಜಿ ಆಂಜನೇಯ ದೇವರ ಜಾತ್ರೆಗೆ ಹೋಗಿದ್ದಾಗ ಹಳಗಂಜಿಗೆರೆ ಗ್ರಾಮದ ಪರಶುರಾಮ ಜೊತೆ ಆಕಸ್ಮಿಕವಾಗಿ ಪರಿಚಯವಾಗಿ, ಪರಸ್ಪರ ಪ್ರೀತಿಸಲು ಪ್ರಾರಂಭಿಸಿದೆವು. ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ. ಮದುವೆಯಾಗುತ್ತೇನೆಂದು ಹೇಳಿ ಹೋಗಿದ್ದು, ಮತ್ತೆ 03 ತಿಂಗಳ ನಂತರ ಹಳೇ ಕುಂದುವಾಡ ಗ್ರಾಮದ ಬಳಿ ಶಿಬಾರ ಹತ್ತಿರ ಬಟ್ಟೆ ತೊಳೆಯಲು ಹೋದಾಗ ಅಲ್ಲಿಯು ಸಹ ಬಲವಂತವಾಗಿ ಅತ್ಯಾಚಾರವೆಸಗಿ ನಂತರ ಪೋನ್‌ನ್ನು ಸ್ವೀಚ್ ಆಫ್ ಮಾಡಿಕೊಂಡು ಹೋಗಿದ್ದಾನೆ. ನಾನು ನನ್ನ ಚಿಕ್ಕಪ್ಪನೊಂದಿಗೆ ಅವರ ಊರಿಗೆ ಹೋಗಿ ಅವನ ತಂದೆ-ತಾಯಿ ಮತ್ತು ಸಂಬಂಧಿಕರಿಗೆ ವಿಷಯ ತಿಳಿಸಿ ಮದುವೆಯಾಗಲು ಕೇಳಿದಾಗ ಕೆಟ್ಟ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ನಿರೀಕ್ಷಕರಾದ ನಾಗಮ್ಮ ಎ1-ಆರೋಪಿ ಪರಶುರಾಮ ಈತನು ಅಪ್ರಾಪ್ತ ವಯಸ್ಸಿನ ಪಿರ್ಯಾದಿಯವರನ್ನು ಪ್ರೀತಿಸಿ ಮದುವೆಯಾಗುತ್ತೇನೆಂತ ನಂಬಿಸಿ ಪಿರ್ಯಾದಿಯು ಅಪ್ರಾಪ್ತ ವಯಸ್ಕಳು ಅಂತ ಗೊತ್ತಿದ್ದರು ಸಹ ಹಲವು ಬಾರಿ ಬಲವಂತವಾಗಿ ಅತ್ಯಾಚಾರವೆಸಗಿದ್ದು, ಅಲ್ಲದೇ ಜೀವಬೆದರಿಕೆ ಹಾಕಿರುವುದು ತನಿಖೆಯಿಂದ ದೃಢಪಟ್ಟ ಹಿನ್ನಲೆಯಲ್ಲಿ ಎ1-ಪರಶುರಾಮ, ಎ2-ದಂಡೇಪ್ಪ, ಎ3-ಮೈಲಮ್ಮ, ಎ4-ಹನುಮಂತಪ್ಪ, ಎ5-ಹಾಲೋಳ್ ಹನುಮಂತಪ್ಪ, ಎ6-ಬಸಮ್ಮ, ಎ7-ಅಂಜಿನಿ ಎ8-ಬಸವರಾಜ ಈ ಎಲ್ಲಾ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಆರೋಪಿತನ ಮೇಲೆ ಆರೋಪ ಸಾಬೀತಾಗಿದ್ದರಿಂದ ಜ.07 ರಂದು ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 35,000/-ರೂ ದಂಡ ವಿಧಿಸಿದ್ದಾರೆ.
ಆರೋಪಿತನಿಂದ ವಸೂಲುಮಾಡಿದ ದಂಡದ ಒಟ್ಟು ಮೊತ್ತ 35,000/-ರೂಗಳನ್ನು ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಸಂತ್ರಸ್ಥೆಗೆ ಸರ್ಕಾರದಿಂದ 4 ಲಕ್ಷ ರೂ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ರವರು ನ್ಯಾಯ ಮಂಡನೆ ಮಾಡಿದ್ದಾರೆ.
ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿ ನಾಗಮ್ಮ .ಕೆ, ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ರವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಶ್ಲಾಘೀಸಿದ್ದಾರೆ.
Read also : ಮೈಲಾರ ಜಾತ್ರೆ : ಫೆ. 14 ರಂದು ಕಾರ್ಣಿಕೋತ್ಸವ, ಭಕ್ತಿ, ಭಕ್ತರ ಭಾವನೆಗಳಿಗೆ ಪ್ರಾಮುಖ್ಯತೆ : ಡಿಸಿ