ದಾವಣಗೆರೆ (Davanagere):- ಪ್ರಸಕ್ತ ಸಾಲಿನ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನೋಂದಣಿಯು ಏಪ್ರಿಲ್ 10 ರವರೆಗೆ ಇರುತ್ತದೆ. ನೋಂದಣಿ ಪೋರ್ಟ್‍ಲ್ WWW. JOININDINARMY.NIC.IN ಹಾಗೂ ಆನ್ ಲೈನ್ ಪರೀಕ್ಷೆಯು ಜೂನ್ 2025 ರಲ್ಲಿ ನಡೆಯುವ ಸಾಧ್ಯತೆ ಇದ್ದು, ಪರೀಕ್ಷೆಯ ದಿನಾಂಕವನ್ನು ನಂತರ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಚೇರಿ ದೂ.ಸಂ:0824-2951279 ಹಾಗೂ ಇ-ಮೇಲ್ aromangalore2021@gmail.com ಸಂಪರ್ಕಿಸಲು ಇಲಾಖೆಯ ಉಪನಿರ್ದೇಶಕರಾದ ಡಾ.ಸಿ.ಎ ಹಿರೇಮಠ ತಿಳಿಸಿದ್ದಾರೆ.
Read also : Channagiri | ವಿದ್ಯುತ್ ಆಫಾತ : ಯುವಕ ಸಾವು