ಚನ್ನಗಿರಿ (Channagiri) : ತಾಲ್ಲೂಕಿನ ಕಾಕನೂರು ಗ್ರಾಮದಲ್ಲಿ ವಿದ್ಯುತ್ ಆಫಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಕಾಪಾಡಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದ ಹನುಮಂತ ಮೃತ ಯುವಕ.
ಕಾಕನೂರಿನ ಜಮೀನುವೊಂದರಲ್ಲಿ ಟ್ರ್ಯಾಕ್ಟರ್ ಮೂಲಕ ನೀರು ಎತ್ತುವ ಮೋಟಾರ್ ಇಳಿಸುವ ಸಂದರ್ಭ ಮೇಲೆ ಹಾದು ಹೋಗಿದ್ದ ಹೈವೋಲ್ಟೆಜ್ ವಿದ್ಯುತ್ ತಂತಿಗೆ ಲಿಫ್ಟಿಂಗ್ ಮಿಷಿನ್ ತಾಗಿ ವಿದ್ಯುತ್ ಶಾಕ್ ಹೊಡೆದು ಈ ಘಟನೆ ನಡೆದಿದೆ.
ವಿದ್ಯುತ್ ಟ್ರ್ಯಾಕ್ಟರ್ ಆವರಿಸಿಕೊಂಡು ಚಾಲನೆ ಮಾಡುತ್ತಿದ್ದ ಹಾಲೇಶಪ್ಪ ಎಂಬುವವರು ವಿದ್ಯುತ್ ಶಾಕ್‍ಗೆ ಗುರಿಯಾಗಿದ್ದಾರೆ. ತಕ್ಷಣ ಸಹಾಯಕನಾಗಿದ್ದ ಹನುಮಂತ ಹಾಲೇಶಪ್ಪನನ್ನು ಟ್ರ್ಯಾಕ್ಟರ್‍ನಿಂದ ಹೊರಗೆಳಿಯುವ ಸಂದರ್ಭ ವಿದ್ಯುತ್ ಶಾಕ್ ಹೊಡೆದಿದೆ. ಈ ವೇಳೆ ಹಾಲೇಶಪ್ಪ ಬದುಕುಳಿದಿದ್ದು, ಹನುಮಂತ ಮೃತಪಟ್ಟಿದ್ದಾರೆ.
Read also : ಮನೆ ಬೋರ್ ವೆಲ್ ನೀರು ವಾಣಿಜ್ಯ ಉದ್ದೇಶಕ್ಕೆ ಬಳಕೆ, ಕ್ರಮ ಕೈಗೊಳ್ಳಲು ಸರಸ್ವತಿ ಬಡಾವಣೆ ನಿವಾಸಿಗಳ ಆಗ್ರಹ
ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.