ದಾವಣಗೆರೆ : ಅಹಿಂದ ಪ್ರಜಾ ಶಕ್ತಿ ಸಂಘಟನೆಯ ಸಭೆಯು ಸಂಘದ ಗೌರವಧ್ಯಕ್ಷ ಸೈಯದ್ ಸೈಪುಲ್ ಹಾಗೂ ರಾಜ್ಯಾಧ್ಯಕ್ಷ ಗೋವಿಂದರಾಜ್ ಅಧ್ಯಕ್ಷತೆಯಲ್ಲಿ ದಾವಣಗೆರೆ ಕಛೇರಿಯಲ್ಲಿ ನಡೆಯಿತು.
ಅಹಿಂದ ಪ್ರಜಾ ಶಕ್ತಿ ಸಂಘಟನೆ ವಾರ್ಡ್ ಮತ್ತು ಹಳ್ಳಿಗಳ ಮಟ್ಟದಲ್ಲಿ ಸಂಘಟನೆ ಆಗಬೇಕು ಹಾಗೂ ಸದಸ್ಯತ್ವ ನೋಂದಣಿ ಮಾಡಿಸುವಂತೆ ಸಂಘಟನೆಯ ಗೌರವ ಅಧ್ಯಕ್ಷ ಸೈಯದ್ ಸೈಪುಲ್ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ಸಂಘಟನೆಯಲ್ಲಿ ಮಹಿಳೆಯರ ಮಾತ್ರ ಬಹಳ ಮುಖ್ಯ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚು ಮಾಡಲು ಕರೆ ನೀಡಿದರು.
ರಾಜ್ಯಾಧ್ಯಕ್ಷ ಗೋವಿಂದರಾಜ್ ಮಾತನಾಡಿ, ರಾಜ್ಯ ಕಮಿಟಿ ಹಾಗೂ ಜಿಲ್ಲಾ, ತಾಲೂಕು ಕಮಿಟಿಗಳ ಪದಾಧಿಕಾರಿಗಳನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚಿಸಿದರು.
ಸಭೆಗೆ ಭಾಗವಹಿಸಿದ ಸರ್ವ ಸದಸ್ಯರು ಕೂಡ ಸಂಘಟನೆ ಕುರಿತು ಅಭಿಪ್ರಾಯಗಳನ್ನು ಹಂಚಿಕೊAಡರು.
Read also : ಕಾಡಾ ಸಭೆ | ಜು.22 ರಿಂದ ಭದ್ರಾ ಬಲದಂಡೆಗೆ ನೀರು : ಸಚಿವ ಮಧು ಬಂಗಾರಪ್ಪ
ರಾಜ್ಯ ಕಾರ್ಯಾಧ್ಯಕ್ಷರು ಫುಟ್‌ಬಾಲ್ ಗಿರೀಶ್, ದಾವಣಗೆರೆ ಜಿಲ್ಲಾಧ್ಯಕ್ಷ ಮಾಲತೇಶ್ ಕುಂದುವಾಡ, ರಮೇಶ್, ಪ್ರವೀಣ್, ಗುಬ್ಬಿ ಬಸವರಾಜ್, ಲಿಯಾಖತ್ ಆಲಿ, ರೇವಣ್ಣ, ಜಕ್ರಿಯಾ, ಮಲ್ಲೇಶ್ ಬಿ.ಬಿ, ಹರಿಹರದ ಶಿವಾಜಿ, ಕವಿತಾ ಚಂದ್ರಶೇಖರ್, ಮಂಗಳಮ್ಮ, ಉಮಾಕುಮಾರ್, ಸಲ್ಮಾ ಬಾನು, ಸುರೇಶ್ ಯಾದವ್, ಉಮಾ ಕುಮಾರ್, ಶಂಕರ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.