ದಾವಣಗೆರೆ: ಒಳ ಮೀಸಲಾತಿ ಅಳವಡಿಸಿಕೊಂಡು ಸರ್ಕಾರ 56 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಇಲ್ಲ ವಾದರೆ ಉಗ್ರಹೋರಾಟಕ್ಕೆ ರಾಜ್ಯಾದಂತ್ಯ ಬಿದಿಗಿಳಿಯಬೇಕಾಗುತ್ತದೆ ಆಲೂರು ನಿಂಗರಾಜ್ ಎಚ್ಚರಿಸಿದ್ದಾರೆ.
ಒಳ ಮೀಸಲಾತಿ ಅಳವಡಿಸಿಕೊಂಡು ಸರ್ಕಾರದ ನೇಮಕಾತಿ ಮಾಡಬೇಕು ಇಲ್ಲವಾದರೆ ಒಳಮಿಸಲಾತಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ್ದಂತಾಗುತ್ತದೆ. ತಕ್ಷಣವೇ ಸ್ಥಗಿತಗೊಳಿಸಬೇಕು ಇಲ್ಲವಾದರೆ ಉಗ್ರಹೋರಾಟಕ್ಕೆ ರಾಜ್ಯಾದಂತ್ಯ ಬಿದಿಗಿಳಿಯಬೇಕಾಗುತ್ತದೆ. ಒಳ ಮೀಸಲಾತಿಯ ಅಸ್ಪಷ್ಟತೆ ನಿವಾರಣೆಯಾಗುವವರೆಗೆ ಯಾವುದೇ ನೇಮಕಾತಿ ಪ್ರಕ್ರಿಯೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ನೇಮಕಾತಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿರುವುದು ಮಾದಿಗ ಸಮುದಾಯಕ್ಕೆ ಮರಣ ಶಾಸನವಾಗಿಸಿದೆ. ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದರೂ, ಸರ್ಕಾರ 56,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಹೊರಟಿರುವುದು ಕಾನೂನುಬಾಹಿರ.ಈ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಇಲ್ಲವಾದರೆ ದಂಗೆ ಹೇಳಬೇಕಾಗುತ್ತದೆ. ರಾಜ್ಯದಲ್ಲಿ ಒಳ ಮೀಸಲಾತಿಯೇ ಇನ್ನೂ ಜಾರಿಯಾಗಿಲ್ಲ. ಅಲೆಮಾರಿ ಸಮುದಾಯ ಒಳ ಮೀಸಲಾತಿ ಹಂಚಿಕೆ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ.
ರೋಸ್ಟರ್ ಬಿಂದುವಿನ ಮೂಲಕ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ಇದು ಮರಣ ಶಾಸನವಾಗಿದೆ ಅಷ್ಟೇ ಅಲ್ಲದೇ ಪ್ರವರ್ಗ ಬಿ, ಪ್ರವರ್ಗ ಸಿ ಸಮುದಾಯಗಳಿಗೂ ದೊಡ್ಡ ಅನ್ಯಾಯವಾಗಿದೆ. ಒಂದು ಸಮುದಾಯಕ್ಕೆ ಸುಣ್ಣ, ಒಂದು ಸಮುದಾಯಕ್ಕೆ ಬೆಣ್ಣೆ ಕೊಡುವುದು ಸರಿಯಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೇಮಕಾತಿ, ಪದೋನ್ನತಿ ಹಾಗೂ ಬ್ಯಾಕ್ಲಾಗ್ ಸೇರಿ ಎಲ್ಲಾ ರಂಗಗಳಲ್ಲಿ ಒಳಮೀಸಲಾತಿ ಜಾರಿಮಾಡಬೇಕು. ಎಸ್ಸಿಪಿ, ಟಿಎಸ್ಪಿ ಅನುದಾನ 6:6:5ರ ಅನುಪಾತದಲ್ಲಿ ಹಂಚಿಕೆಯಾಗಬೇಕಾಗಿದೆ. ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಶೇ.1 ಮೀಸಲಾತಿ, ಪ್ರತ್ಯೇಕ ನಿಗಮ ಹಾಗೂ ಪ್ಯಾಕೇಜ್ ಶಾಶ್ವತ ಆಯೋಗ ನೇಮಕ ಹಾಗೂ ಮೀಸಲಾತಿ ಹೆಚ್ಚಳಕ್ಕೆ ಕಾನೂನು ಕ್ರಮ ಕೈಗೊಂಡು ನಂತರ ನೇಮಕಾತಿ ಪ್ರಕ್ರಿಯೆಗಳು ಮಾಡಬೇಕೆಂದು ಆಲೂರ್ ನಿಂಗರಾಜ್ ಒತ್ತಾಯಿಸಿದ್ದಾರೆ,
Read also :ಪೋಕ್ಸೋ ಮತ್ತು ಬಾಲ್ಯವಿವಾಹ ತಡೆಗಟ್ಟಲು ಇಲಾಖೆಗಳ ಸಮನ್ವಯ ಅಗತ್ಯ : ಅಪರ್ಣ ಕೊಳ್ಳ
ಮಾದಿಗ ಸಮುದಾಯ ಕಳೆದ 35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಸುಪ್ರಿಂಕೋರ್ಟಿನ 7 ನ್ಯಾಯಾಧೀಶರ ಪೀಠದ ತೀರ್ಪಿನಂತೆ, ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ದಾಸ್ಅವರ ಸಮಿತಿ ವರದಿ ಆಧರಿಸಿ ಒಳಮೀಸಲಾತಿ ಘೋಷಣೆ ಮಾಡಿದೆ. ನಾವು ಯಾರ ಪಾಲನ್ನು ಕೇಳುತ್ತಿಲ್ಲ.ನಮ್ಮ ಪಾಲಿನ ಹಕ್ಕನ್ನುಎಲ್ಲಾರಂಗದಲ್ಲಿಯೂ ನೀಡಿ ಎಂದು ಕೇಳುತಿದ್ದೇವೆ ಎಂದರು.
