ಹರಿಹರ: ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದ್ದು, ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅತ್ಯವಶ್ಯ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ತಾಲೂಕಿನ ಕಮಲಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬರುವ ಪರೀಕ್ಷೆಗೆ ಶಾಲಾ ವಾರ್ಷಿಕೋತ್ಸವ ಅಡ್ಡಿಯಾಗದಂತೆ ಮುಂಜಾಗ್ರತೆ ವಹಿಸಿ ಕಾರ್ಯಕ್ರಮ ಆಯೋಜಿಸುವುದು ಒಳಿತು ಎಂದು ಸಲಹೆ ನೀಡಿದರು.
ಮಾಜಿ ಪ್ರಧಾನರಾದ ಎನ್.ಜಿ. ನಾಗನಗೌಡರು ಮಾತನಾಡಿ, ಉನ್ನತ ಹುದ್ದೆಗಳಲ್ಲಿ ಇರುವವರಲ್ಲಿ ಬಹುತೇಕರು ಸರ್ಕಾರಿ ಶಾಲೆಯಲ್ಲಿ ಕಲಿತವರು. ಹಾಗಾಗಿ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಲು ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಎಂ.ಕೆ. ಮಾತನಾಡಿ, 142 ಮಕ್ಕಳಿರುವ ನಮ್ಮ ಶಾಲೆಯಲ್ಲಿ 1 ಕೊಠಡಿ ಮತ್ತು ಮಕ್ಕಳು ಮಧ್ಯಾನ್ನದ ಬಿಸಿಯೂಟ ಮಾಡಲು ಸೂಕ್ತ ಭೋಜನಾಲಯ ಕೊಠಡಿ ಕಲ್ಪಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಸದಸ್ಯ ಮಲ್ಲಿಕಾರ್ಜುನ್ ಬಾವಿಕಟ್ಟಿ, ಗ್ರಾಮದ ಮುಖಂಡರಾದ ಕೆ. ಈಶ್ವರಪ್ಪ, ಜಿ. ಬಸವನಗೌಡರು, ರುದ್ರಪ್ಪ ನಾಗಪ್ಪನವರ, ಬಸವರಾಜಪ್ಪ ತಾವರಗೊಂದಿ, ಗುರುಬಸಪ್ಪ, ಪರಮೇಶ್ವರಪ್ಪ, ರುದ್ರಗೌಡ ಪಾಟೀಲ್, ಬಾವಿಕಟ್ಟಿ ಕುರುವತ್ಯಪ್ಪ, ಎಂ.ಬಿ. ಚಂದ್ರಶೇಖರಪ್ಪ, ದಡ್ಡಿ ಬಸವರಾಜಪ್ಪ, ಸಾಹಿತಿ ಷಣ್ಮುಖಪ್ಪ, ಕೆ.ಎಸ್. ಈಶ್ವರಪ್ಪ, ಕೆ. ದೊಡ್ಡಬಸಪ್ಪ, ಬಿ. ಷಣ್ಮುಖಪ್ಪ, ಹುಲ್ಮನಿ ರಾಮಣ್ಣ, ಎಂ.ಬಿ. ರಾಜಪ್ಪ, ಕೆ. ಮಹೇಶ್ವರಮ್ಮ, ಎಂ. ವಸಂತಕುಮಾರ್, ಎಂ.ಎನ್. ಗಂಗಾಧರ, ಸಿರಿಗೆರೆ ಹಾಲೇಶ್, ಮುಖ್ಯಶಿಕ್ಷಕ ಮಂಜುನಾಥ್, ಶಿಕ್ಷಕರಾದ ಉಮಾದೇವಿ, ಹರೀಶ್, ಕ್ಯಾರ್ಲಿನ್ ಓಲಿವರ್ ಫರ್ನಾಂಡಿಸ್, ಈರಮ್ಮ ಅಂಗರಗಟ್ಟಿ, ಎಸ್‌ಡಿಎಂಸಿ ಸದಸ್ಯರು ಇದ್ದರು.ಶಿಕ್ಷಕ ರಾಮನಗೌಡ ಪ್ಯಾಟಿ ಸ್ವಾಗತಿಸಿದರು. ಶಿಕ್ಷಕರಾದ ಪ್ರಭುಗೌಡ ಪಾಟೀಲ್, ಮಹಾಂತೇಶ್ ನಿರೂಪಿಸಿದರು.
