ಪರಿಚಯ
ಆಧುನಿಕ ಯಾಂತ್ರಿಕ ಜೀವನಶೈಲಿ ಹಾಗೂ ಅನಿಯಂತ್ರಿತ ಅಸಮರ್ಪಕ ಆಹಾರ ಪದ್ಧತಿ ನಗರೀಕರಣ, ಅತಿಯಾದ ಒತ್ತಡ, ದುರಭ್ಯಾಸಗಳು, ಹಾಗೂ ಕೃತಕ ದಿನಚರಿಯ ಪರಿಣಾಮವಾಗಿ ಅನೇಕರು ಇಂದು ಅನೋರೆಕ್ಟಲ್ ರೋಗಗಳಿಂದ ಬಳಲುತ್ತಿದ್ದಾರೆ. “ಅನೋರೆಕ್ಟಲ್” ಎಂಬ ಪದವು ಅನಸ್ (ಗುದ ಮಾರ್ಗ) ಮತ್ತು ರೆಕ್ಟಮ್ (ಮಲದ್ವಾರದ ಕೊನೆಯ ಭಾಗ) ಎಂಬ ಎರಡು ಅಂಗಾಂಗಗಳಿಗೆ ಸಂಬಂಧಿಸಿದ ರೋಗಗಳನ್ನು ಸೂಚಿಸುತ್ತದೆ.
ಆಯುರ್ವೇದ ಶಾಸ್ತ್ರದಲ್ಲಿ ಇವುಗಳನ್ನು ಮುಖ್ಯವಾಗಿ ಅರ್ಸಸ್ಸು (ಹೆಮೊರಾಯ್ಡ್ಸ್), ಭಗಂದರ (ಫಿಸ್ಟುಲಾ-ಇನ್-ಅನೋ), ಪರಿಕಾರ್ಥಿಕಾ (ಫಿಸರ್), ಮತ್ತು ಗುದ ಭ್ರಂಶ (ರೆಕ್ಟಲ್ ಪ್ರೊಲ್ಯಾಪ್ಸ್) ಮಲಬದ್ಧತೆಯ ಎಂದು ವರ್ಗೀಕರಿಸಲಾಗಿದೆ.
ಮುಖ್ಯ ಅನೋರೆಕ್ಟಲ್ ರೋಗಗಳು :
1. ಅರ್ಸಸ್ಸು (ಹೆಮೊರಾಯ್ಡ್ಸ್ / ಪೈಲ್ಸ್)
ಇದು ಗುದ ಮಾರ್ಗದ ಸುತ್ತಲಿನ ಶಿರಾ ವಿಸ್ತಾರದಿಂದ ಉಂಟಾಗುವ ರೋಗ. ಮಲವಿಸರ್ಜನೆಯಾಗುವಾಗ ರಕ್ತಸ್ರಾವ, ನೋವು ಮತ್ತು ಉಬ್ಬರ ಇದರ ಮುಖ್ಯ ಲಕ್ಷಣಗಳು.
ಆಯುರ್ವೇದದಲ್ಲಿ: ಅತಿವ್ಯ ವಾಯ, ಕುಳಿತಿರುವ ಜಡವಾದ ಜೀವನಶೈಲಿ, ಮಲಬಂಧ (ಕಾಸ್ಟಿಪೇಶನ್), ಮತ್ತು ಅಹಿತಾಹಾರದಿಂದ ವಾತ-ಪಿತ್ತ ಕಫದ ದೋಷವು ವ್ಯತ್ಯಾಸಗೊಂಡು ಶಿರಾಸ್ತಂಭಗಳಲ್ಲಿ ಉಂಟಾಗುವ ವಿಸ್ತಾರದಿಂದ ಅರ್ಸಸ್ಸು ಉಂಟಾಗುತ್ತದೆ.
ಚಿಕಿತ್ಸೆ:
1 ಔಷಧ ಚಿಕತ್ಸೆ: ತ್ರಿಫಲಾ, ಅಭಯಾರಿಷ್ಟ, ಪೈಲೋನಿಲಕ್ಯಾಪ್ಸುಲ್ ಮುಂತಾದವು.
2 ಕ್ಷಾರಸೂತ್ರ ಚಿಕತ್ಸೆ: ವಿಶೇಷ ಔಷಧೀಯ ತಂತು (ಮೆಡಿಸಿನಲ್ ಥ್ರೆಡ್) ಬಳಸಿ ಪೈಲ್ಸ್ ಕಟ್ಟುಗಳನ್ನು ನಿರ್ನಾಮಗೊಳಿಸುವ ವಿಧಾನ
ಆಹಾರ ನಿಯಮ:
-ತೇವಯುಕ್ತ ಆಹಾರ, ಹಣ್ಣುಗಳು, ಹಸಿರು ತರಕಾರಿಗಳ ಸೇವನೆಯನ್ನು ಹೆಚ್ಚಿಸುವುದು
-ಮಸಾಲೆ ಹಾಗೂ ಮಾಂಸಾಹಾರ ತ್ಯಜಿಸುವುದು ಸೂಕ್ತ.
2. ಭಗಂದರ (ಫಿಸ್ಟುಲಾ-ಇನ್-ಅನೋ)
ಆಯುರ್ವೇದದಲ್ಲಿ ಭಗಂದರವನ್ನು ಕ್ರೂರ ರೋಗ, ಮಹಾ ರೋಗ ಎಂದು ಪರಿಗಣಿಸಲಾಗಿದೆ. ಇಲ್ಲಿ ಗುದ ಮಾರ್ಗದ ಒಳಗೆ ಮತ್ತು ಹೊರಗಿನ ಚರ್ಮದ ನಡುವೆ ಪಿಡುಗು (ಅಬ್ಸೆಸ್) ಉಂಟಾಗಿ ಪೈಪ್ನಂತೆ ಮಾರ್ಗ ನಿರ್ಮಾಣವಾಗುವುದು.
ಪಿಸ್ತೂಲಾ (ಫಿಸ್ಟುಲಾ)ಲಕ್ಷಣಗಳು ಮತ್ತು ಗಂಭೀರತೆ ಯ ಸೂಚನೆಗಳು:
ನೋವು, ಕೀವು ಅಥವಾ ಉರಿಯುವ ಅನುಭವ-.ಗುದದ ಬಳಿಯಿಂದ ಕೀವು ಅಥವಾ ಕಹಿ ಅಥವಾ ರಕ್ತ ಸಂಯುಕ್ತ ಸ್ರಾವಣೆ.ಸ್ರಾವಣದ ತೀವ್ರವಾದ ದುರ್ಗಂಧ.ಗುದದ ಹತ್ತಿರ ಸಣ್ಣ ನೋವುಳ್ಳ ಗಾತ್ರದ ಗುಂಟೆಗಳಾಗಿರುವುದು.
-ಮಲಬದ್ಧತೆ ಅಥವಾ ಮಲವಿಸರ್ಜನೆ ಸಮಯದಲ್ಲಿ ತೀವ್ರ ನೋವು.ಕೆಲವು ಸಂದರ್ಭಗಳಲ್ಲಿ ಜ್ವರ ಮತ್ತು ವ್ಯಾಪಕ ಸೋಂಕಿನ ಲಕ್ಷಣಗಳು ಕಾಣಬಹುದು.
– ದುರ್ಗಂಧ, ಸ್ರಾವ, ನೋವು, ಉರಿ, ಜ್ವರ ಇತ್ಯಾದಿ
ಚಿಕಿತ್ಸೆ:
ಪಿಸ್ತೂಲಾ ಸ್ವಯಂ ಗುಣವಾಗುವುದಿಲ್ಲ, ಆದ್ದರಿಂದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ.
- -ಶಸ್ತ್ರಚಿಕಿತ್ಸೆ ಮತ್ತು ಸೂಕ್ತ ಆರೈಕೆಯಿಂದ ಚಿಕಿತ್ಸೆ ಸಾಧ್ಯವಿದೆ.
- – ಶಸ್ತ್ರಚಿಕಿತ್ಸೆ ನಂತರ ನಿಯಮಿತ ಡ್ರೆಸ್ಸಿಂಗ್ ಕೂಡ ಅನಿವಾರ್ಯ.
- -ಟಬ ಬಾತ್ ಅತ್ಯಂತ ಅವಶ್ಯಕ
ಕ್ಷಾರಸೂತ್ರ ಚಿಕಿತ್ಸೆ: ಇದು ಅತ್ಯಂತ ಯಶಸ್ವೀ ಆಯುರ್ವೇದ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಈ ತಂತು ಪಿಡುಗು ಮಾರ್ಗವನ್ನು ನಿಧಾನವಾಗಿ ಕತ್ತರಿಸಿ, ಸೋಂಕು ನಿವಾರಿಸಿ, ಸಂಪೂರ್ಣ ಗುಣಪಡಿಸುತ್ತದೆ.
ಸೂತ್ರದ ಹೇರಳ ಉಪಯೋಗ: ಈ ವಿಧಾನವನ್ನು ಆಧುನಿಕ ಸರ್ಜರಿಗಿಂತ ಸುರಕ್ಷಿತ ಮತ್ತು ಪುನಃಮಾರ್ಗ ಉಂಟಾಗದAತೆಯಾಗಿ ಪರಿಗಣಿಸಲಾಗಿದೆ.
3. ಪರಿಕಾರ್ಥಿಕಾ (ಫಿಸರ್)
ಮಲದ್ವಾರದ ಚಿಗುರು (ಟಿಯರ್) — ಸಾಮಾನ್ಯವಾಗಿ ಕಠಿಣ ಮಲದಿಂದ ಉಂಟಾಗುತ್ತದೆ.
ಲಕ್ಷಣಗಳು: ತೀವ್ರ ನೋವು, ಉರಿ, ರಕ್ತಸ್ರಾವ, ಮಲವಿಸರ್ಜನೆಗೆ ಭಯ.
ಆಯುರ್ವೇದ ನಿರ್ವಹಣೆ:
ಸ್ಥಾನಿಕ ಚಿಕಿತ್ಸೆ: ಜಾತ್ಯಾದಿ ತೈಲ, ಯಷ್ಟಿ ಮಧು ತೈಲ, ಹಚ್ಚುವುದು ಮತ್ತು ಪಂಚ ವಲಕ್ಲ ಸೇವನೆ
ಆಹಾರ ನಿಯಮ: ಮಲವನ್ನು ಸೌಮ್ಯಗೊಳಿಸುವ ಆಹಾರ, ಹಾಲು ಮತ್ತು ನಾರಿನ ಆಹಾರ ಸೇವನೆ.
4. ಗುದ ಭ್ರಂಶ (ರೆಕ್ಟಲ್ ಪ್ರೊಲ್ಯಾಪ್ಸ್)
ಗುದದ ಮಾರ್ಗದ ಒಳಭಾಗ ಹೊರಗೆ ಬರುವ ಸ್ಥಿತಿ.
ಚಿಕಿತ್ಸೆ:
ವಾತದ ದೋಷವನ್ನು ನಿಯಂತ್ರಿಸಿ, ಬಲವರ್ಧಕ ಔಷಧಿ ಮತ್ತು ತೈಲಸ್ನೇಹನದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಸಹ ಮಾಡಬಹುದು.
Read also : Pilonidal Sinus | ಪಿಲೋನಿಡಲ್ ಸೈನಸ್ ಕಾಯಿಲೆ ಎಂದರೇನು? ಅದರ ರೋಗ ಲಕ್ಷಣ, ಆಯುರ್ವೇದ ಚಿಕಿತ್ಸಾ ವಿಧಾನ ಇಲ್ಲಿದೆ.
ಆಯುರ್ವೇದ ನಿರ್ವಹಣೆಯ ತತ್ವಗಳು :
1. ಅಹಾರ ಮತ್ತು ವಿಹಾರ ನಿಯಮ: ಸಾತ್ವಿಕ, ಲಘು ಮತ್ತು ಪಚನಕ್ಕೆ ಸುಲಭವಾದ ಆಹಾರ. ದಿನನಿತ್ಯ ವ್ಯಾಯಾಮ, ಯೋಗ ಹಾಗೂ ಧ್ಯಾನ
2. ಪಂಚಕರ್ಮ: ವಾತ-ಪಿತ್ತ ಸಮತೋಲನಕ್ಕಾಗಿ ಬಸ್ತೀ (ಮಾತ್ರಾ ಬಸ್ತೀ, ನಿರೂಹ ಬಸ್ತೀ) ಉಪಯುಕ್ತ.
3. ಸ್ಥಾನಿಕ ಚಿಕಿತ್ಸೆ: ತೈಲಧಾರಾ, ಸಿತ್ತ ಬಸ್ತೀ, ತಾಪಸ್ವೇದ ಮುಂತಾದ ಕ್ರಮಗಳು.
4. ಶಸ್ತ್ರಚಿಕಿತ್ಸೆ (ಕ್ಷಾರಸೂತ್ರ): ಆಯುರ್ವೇದ ಶಸ್ತ್ರಚಿಕಿತ್ಸೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತದೆ.
ಆಯುಷ್ ಆರೋಗ್ಯ ಮಂದಿರ
ನರಗನಹಳ್ಳಿ ದಾವಣಗೆರೆ
9886624267
