ದಾವಣಗೆರೆ (Davanagere) : ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಹಾಗೂ ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಹಾಗೂ ನೂತನ ಆವಿಷ್ಕಾರಗಳಲಲ್ಲಿ ಉತ್ತಮ ಸಾಧನೆ ಮಾಡಿದವರು 31-07-2025ಕ್ಕೆ ಅನ್ವಯವಾಗುವಂತೆ 5 ವರ್ಷ ಹಾಗೂ 18 ವರ್ಷದೊಳಗಿನವರು ನ್ಯಾಷನಲ್ ಅವಾರ್ಡ್ ಪೋರ್ಟಲ್ ಆನ್ ಲೈನ್ ಜಾಲತಾಣ https://award.gov.in ಮೂಲಕ ಅರ್ಜಿ ಸಲ್ಲಿಸಬಹುದು.
Read also : ಮಹೇಶ ಜೋಶಿ ವಿರುದ್ದ ಕ್ರಮಕ್ಕೆ ಪ್ರೋ.ಸಿದ್ದರಾಮಯ್ಯ ಒತ್ತಾಯ
ಹೆಚ್ಚಿನ ಮಾಹಿತಿಗಾಗಿ ಜೆ.ಹೆಚ್.ಪಟೇಲ್ ಬಡಾವಣೆ, ಜಿಲ್ಲಾ ಬಾಲಭವನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರವಾಣಿ ಸಂಖ್ಯೆ 08192-222701 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.