ದಾವಣಗೆರೆ ಮೇ.08 (Davanagere): ದಾವಣಗೆರೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ, ಕಾಲೇಜು ಮತ್ತು ಮಾದರಿ ಶಾಲೆ, ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ ಉಪನ್ಯಾಸಕರ ಹುದ್ದೆ-3, ಕನ್ನಡ ಅತಿಥಿ ಶಿಕ್ಷಕರ ಹುದ್ದೆ-7, ಇಂಗ್ಲೀಷ್ ಉಪನ್ಯಾಸಕರ ಹುದ್ದೆ-4 ಇಂಗ್ಲೀಷ್ ಶಿಕ್ಷಕರ ಹುದ್ದೆ-3, ಉರ್ದು ಉಪನ್ಯಾಸಕರ ಹುದ್ದೆ-3, ಗಣಿತ ಶಿಕ್ಷಕರ ಹುದ್ದೆ-8, ಗಣಿತ ಉಪನ್ಯಾಸಕರ ಹುದ್ದೆ-4, ಸಾಮಾನ್ಯ ವಿಜ್ಞಾನ ಶಿಕ್ಷಕರು-3, ಭೌತಶಾಸ್ತ್ರ ಉಪನ್ಯಾಸಕರ ಹುದ್ದೆ-3, ಸಮಾಜ ವಿಜ್ಞಾನ ಶಿಕ್ಷಕರು-6, ರಸಾಯನಶಾಸ್ತ್ರ ಉಪನ್ಯಾಸಕರ ಹುದ್ದೆ-3, ಉರ್ದು ಶಿಕ್ಷಕರು-2, ಜೀವಶಾಸ್ತ್ರ ಉಪನ್ಯಾಸಕರ ಹುದ್ದೆ-4, ಹಿಂದಿ ಶಿಕ್ಷಕರ ಹುದ್ದೆ-4, ದೈಹಿಕ ಶಿಕ್ಷಕರು-2 ಹುದ್ದೆಗೆ ಅರ್ಜಿ ಸಲ್ಲಿಸಬಹುದು.
Read also : ಪ್ರಥಮ ಪಿ.ಯು.ಸಿ ಪಿ.ಸಿ.ಎಂ.ಬಿ(ವಿಜ್ಞಾನ ವಿಭಾಗ) ವಿಷಯಗಳಿಗೆ ದಾಖಲಾತಿ ಪಡೆಯಲು ಅರ್ಜಿ ಆಹ್ವಾನ
ಅಭ್ಯರ್ಥಿಗಳು ಮೇ.19 ರೊಳಗಾಗಿ ವೆಬ್ ಸೈಟ್ http://dom.karnataka.gov.in ನಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಜಿಲ್ಲಾ ಕಚೇರಿ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ:08192-250022 ಸಂಪರ್ಕಿಸಲು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.