ದಾವಣಗೆರೆ : ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಎಮ್ ಎಸ್ ಎಮ್ ಇ ಐಡಿಯಾ ಹ್ಯಾಕಥಾನ್ 5.0 ನ ಅಡಿಯಲ್ಲಿ ನವೀನ ಆವಿಸ್ಮಾರಗಳಿಗೆ ಧನ ಸಹಾಯಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಾವಣಗೆರೆ, ಭಾರತ ಸರ್ಕಾರದ, ಸಣ್ಣ ಮತ್ತು ಸೂಕ್ಷ್ಮ, ಮದ್ಯಮ ಉದ್ಯಮಗಳ ಸಚಿವಾಲಯದಿಂದ, ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯೂಬೇಷನ್ ಕೇಂದ್ರದಲ್ಲಿ ಹೊಸ ಆವಿಸ್ಕಾರಗಳೊಂದಿಗೆ ನವೀನ ರೀತಿಯ ಎಮ್ ಎಸ್ ಎಮ್ ಇ ಕ್ಷೇತ್ರಕ್ಕೆ ಅನುಕೂಲವಾಗುವ ನವೀನ ಉತ್ಪನ್ನಗಳನ್ನಗಳನ್ನ ಬಳಸಲು ಮುಂದೆ ಬರುವ ನವೋದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗು ಅಧ್ಯಾಪಕರು ಮತ್ತು ಸಾರ್ವಜನಿಕರಿಗೆ, ಜೈನ್ ತಾಂತ್ರಿಕ ವಿದ್ಯಾಲಯ ದಾವಣಗೆರೆಯನ್ನು ಆತಿಥೇಯ ಸಂಸ್ಥೆಯಾಗಿ ಪರಿಗಣಿಸಿ ಭಾರತ ಸರ್ಕಾರದ ಧನ ಸಹಾಯವನ್ನು ಪಡೆಯಬಹುದಾಗಿದೆ.
ಈ ಕಾರ್ಯಕ್ರಮ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಬೇಕಾಗುವ ತಂತ್ರಜ್ಞಾನದ ಬಗ್ಗೆ ನವೀನ ಉತ್ಪನ್ನಗಳ ತಯಾರಿಕಾ ವಿಧಾನ ಮತ್ತು ವಿವಿಧ ತಂತ್ರಜ್ಞಾನಗಳಲ್ಲಿನ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸುವ ಅಥವಾ ಪರಿಹಾರಗಳನ್ನು ನೀಡುವ ತಂತ್ರಜ್ಞಾನಗಳಿಗೆ ಧನ ಸಹಾಯವನ್ನು ಕೊಡಲಾಗುವುದು. ಈ ವರ್ಷ ಐದು ಕ್ಷೇತ್ರಗಳಲ್ಲಿನ ವಿಷಯಗಳನ್ನು ಆರಿಸಿಕೊಳ್ಳಲಾಗಿದ್ದು, ಕಾರ್ಬನ್ ಉಳಿತಾಯ ಮತ್ತು ಕಡಿಮೆ ಉಪಯೋಗಿಸುವ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಸೂಚಿಸುವ ಪ್ರಯತ್ನಗಳು, ರಹಸ್ಯ ಮತ್ತು ಸೈಬರ್ ರಕ್ಷಣಾ ತಂತ್ರಜ್ಞಾನ, ಸಣ್ಣ ಮತ್ತು ಅತಿಸಣ್ಣ ಮದ್ಯಮ ಕಾರ್ಖಾನೆಗಳಲ್ಲಿ 4.0 ಮತ್ತು 5.0 ನೇ ಸರಣಿಯ ಉನ್ನತೀಕರಣಕ್ಕೆ ಸಂಬಂಧಿಸಿದ ತಂತ್ರಜ್ಞಾನ, ಕರಾವಳಿ ಹಾಗೂ ಬೆಟ್ಟದ ಪ್ರದೇಶಗಳಲ್ಲಿ ಉದ್ಯಮಗಳ ಅಭಿವೃದ್ಧಿ ಮತ್ತು ತೀಕ್ಷತೆಯ ನವೀನತೆ, ಸುಸ್ಥಿರ ಗುಣಾತ್ಮಕ ಮತ್ತು ಸರಬರಾಜು ಸರಪಳಿಗೆ ಬೇಕಾದ ತಂತ್ರಜ್ಞಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ದಾವಣಗೆರೆ ಭಾಗದ 18 ರಿಂದ 60 ವರ್ಷದೊಳಗಿನ ಸಾರ್ವಜನಿಕರು, ನವೀನ ಉದ್ಯಮಿಗಳು, ವಿದ್ಯಾರ್ಥಿಗಳು, ಬೋಧಕರು ಇದರ ಸದುಪಯೋಗವನ್ನು ಪಡೆಯಬಹುದೆಂದು ತಿಳಿಸಲಾಗಿದೆ. ಈ ವಿಷಯಗಳಿಗೆ ಬೇಕಾದ ಮುಖ್ಯಾಂಶಗಳನ್ನು ಸಲ್ಲಿಸಲು ಇದೇ ಜುಲೈ 14 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗಾಗಿ ಕಾಲೇಜಿನ ಪ್ರಾಂಶುಪಾಲರು ಅಥವಾ ಎಮ್ ಎಸ್ ಎಮ್ ಇ ಸಂಯೋಜಕರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ :8618417475, 9448338622, 9886582125, 9480184610 ಕರೆ ಮಾಡಬಹುದು.