ದಾವಣಗೆರೆ ಆ.13: ಗ್ರಾಮಾಂತರ ಕೈಗಾರಿಕಾ ಕೇಂದ್ರದಿAದ ಪ್ರಸಕ್ತ ಸಾಲಿಗೆ ಅನುಮೋದಿತ ಕಾರ್ಯಕ್ರಮಗಳ ಪೈಕಿ ಸುಧಾರಿತ ಉಪಕರಣಗಳ ವಿತರಣೆಯಲ್ಲಿ ಹೊಲಿಗೆಯಂತ್ರ ವಿತರಣೆ, ಕುಶಲಕರ್ಮಿಗಳಿಗೆ ಬ್ಯಾಂಕ್ ಸಾಲದ ಮೇಲೆ ವಿಧಿಸುವ ಬಡ್ಡಿ ಸಹಾಯಧನ ಹಾಗೂ ಉಚಿತ ಟೈಲರಿಂಗ್ ತರಬೇತಿ ನೀಡಲಾಗುವುದು. ಉಚಿತ ತರಬೇತಿ ಪಡೆದ ಫಲಾನುಭವಿಗಳಿಗೆ ರೂ.5000/ ಮೌಲ್ಯದ ಉಪಕರಣಗಳ ಕಿಟ್‌ನ್ನು ನೀಡಲಾಗುವುದು. ಇದೇ ಆಗಸ್ಟ್ 14 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಸೆ.13 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಆಸಕ್ತ ಅರ್ಹ ಗ್ರಾಮೀಣ ಅಭ್ಯರ್ಥಿಗಳು davanagere.nic.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸ್ವೀಕೃತಿ ಅರ್ಜಿಯೊಂದಿಗೆ ಸೆ.30ರೊಳಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಗ್ರಾಮಾಂತರ ಕೈಗಾರಿಕಾ ವಿಭಾಗ ಕಚೇರಿಗೆ ಸಲ್ಲಿಸಲು ಸೂಚಿಸಿದೆ.
Read also : ಸರಣಿ ಜಾನುವಾರು ಕಳ್ಳತನ ಪ್ರಕರಣ : 6 ಜನರ ಬಂಧನ
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 9448944050, 8496941852 ಗೆ ಸಂಪರ್ಕಿಸಬಹುದು ಎಂದು ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪನಿರ್ದೇಶಕ ವೀರೇಶನಾಯ್ಕ ತಿಳಿಸಿದ್ದಾರೆ.