Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಪ್ರಯತ್ನ- ಭಾರತದ ಆರದ ಗಾಯ
ಅಭಿಪ್ರಾಯ

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ಪ್ರಯತ್ನ- ಭಾರತದ ಆರದ ಗಾಯ

Dinamaana Kannada News
Last updated: October 7, 2025 9:05 am
Dinamaana Kannada News
Share
supreme court
SHARE
1) ಪ್ರಾಚೀನ ಕಾಲದಲ್ಲಿ ಭಾರತೀಯ ಸಂಸ್ಕೃತಿ ಎಂದರೆ ಬ್ರಾಹ್ಮಣ ಸಂಸ್ಕೃತಿ ಮಾತ್ರವೇ ಎಂಬ ನಂಬಿಕೆ ಆವರಿಸಿದಂತಹ ಆ ಕಾಲದಲ್ಲಿಯೇ -ಬ್ರಾಹ್ಮಣೇತರರಿಗೆ ಸ್ವಂತ ಸಂಸ್ಕೃತಿ ಇಲ್ಲವೆಂಬ ಭಾವ ಆವರಿಸುವಂತೆ ಮಾಡಲಾಗಿತ್ತು.ಆದರೆ ವೈದಿಕ ದರ್ಶನದ ಸಂಪ್ರದಾಯ ಕ್ರೌರ್ಯಗಳ ವಿರುದ್ಧ ಬಂಡೆದ್ದವರು ಆ ಕಾಲದಲ್ಲಿ  ಅನೇಕರಿದ್ದರು.
ದಲಿತರಿಗೆ ಸಾಂಸ್ಕೃತಿಕ ಸ್ಮೃತಿಯನ್ನು ಕಟ್ಟಿಕೊಡುವ ಸಲುವಾಗಿ ಅಸ್ಪೃಶ್ಯರು ಮೂಲತಃ ಬೌದ್ಧರು ಎಂದು ಅಂಬೇಡ್ಕರ್ ಪ್ರತಿಪಾದಿಸಿದರು.
ಆದರಿಂದು ರಾಜಕಾರಣದ ಪುರಾಣೀಕರಣ ಮತ್ತು ಭಾರತೀಯ ಮಾಧ್ಯಮ ರಂಗದ ಕಪೋಲ ಕಲ್ಪಿತ ಚಿತ್ರಗಳೇ ಸೇರಿ ನಾಗರಿಕ ಸಮಾಜದಲ್ಲಿ ಇನ್ನಿಲ್ಲದ ಗೊಂದಲ ನಿರ್ಮಿಸಿವೆ.
ಪ್ರಸ್ತುತ ಭಾರತದ ಸಮಾಜದಲ್ಲಿ ಮಾಧ್ಯಮಗಳ ಮೂಲಕ ಬಿತ್ತಲಾಗುತ್ತಿರುವ ಭಾರತೀಯ ಸಂಸ್ಕೃತಿಯ ಕಲ್ಪನೆ ಏಕಾಕಾರಿಯಾದದ್ದು. ಪ್ರಾಚೀನರಲ್ಲೂ ಸಾಂಸ್ಕೃತಿಕ ದಂಗೆಗಳಾಗಿದ್ದವು ಎಂಬುದರ ಚರಿತ್ರೆಯ ಜ್ಞಾನವೇ ಇಲ್ಲದವರು ಇವತ್ತು ಮಾಧ್ಯಮಗಳಲ್ಲಿ 24*7 ಹೇಳುವ ಮಾತುಗಳನ್ನೆ ಕೇಳಬೇಕಿದೆ.
ಪರಿಣಾಮವೇ ರಾಕೇಶ್ ಕಿಶೋರ್ ಎಂಬ ವಕೀಲ,ಸುಪ್ರೀಂ ಕೋರ್ಟಿನ ಮೊತ್ತ ಮೊದಲ ಬೌದ್ಧ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರತ್ತ ಶೂ ಎಸೆಯಲು ಪ್ರಯತ್ನಿಸಿದ್ದಾರೆ.
2) ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಮಧ್ಯಪ್ರದೇಶದ ಖಜುರಾಹೊದ ಜಾವರಿ ದೇವಸ್ಥಾನದಲ್ಲಿ ಏಳು ಅಡಿ ಎತ್ತರದ ವಿಷ್ಣುಮೂರ್ತಿಯ ತಲೆಯ ಭಾಗವು ಭಗ್ನಗೊಂಡಿತ್ತು. ಈ ಮೂರ್ತಿಯನ್ನು ಮರುನಿರ್ಮಿಸಿ, ದೇವಾಲಯದಲ್ಲಿ ಮರು ಸ್ಥಾಪಿಸ ಬೇಕು ಎಂದು ಕೋರಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಅದಕ್ಕೆ ಭಾರತದ ಸಿಜೆಐ ಗವಾಯಿಯವರು,“ಇದೊಂದು ಪ್ರಚಾರದ ಹಿತಾಸಕ್ತಿಯ ಮೊಕದ್ದಮೆ. ಏನಾದರೂ ಮಾಡುವಂತೆ ಹೋಗಿ, ನಿಮ್ಮ ದೇವರಲ್ಲಿಯೇ ಕೇಳಿಕೊಳ್ಳಿ.ನೀವು ವಿಷ್ಣುವಿನ ಪರಮಭಕ್ತ ಎಂದು ಹೇಳುತ್ತೀರಿ ನೀವೇ ಹೋಗಿ ಕೇಳಿ.ಇದು ಪುರಾತತ್ವ ಇಲಾಖೆಗೆ ಸೇರಿದ ಜಾಗ. ಇದಕ್ಕೆ ಆ ಇಲಾಖೆ ಅನುಮತಿ ನೀಡಬೇಕು”ಎಂದು ವಿಚಾರಣೆ ವೇಳೆ ಹೇಳಿದ್ದರು.
ಇದು ಜಾಲತಾಣಗಳಲ್ಲಿ ವಿವಾದದ ಸ್ವರೂಪವನ್ನು ಪಡೆದುಕೊಂಡಾಗ ,ಅವರು “ನಾನು ಎಲ್ಲಾ ಧರ್ಮಗಳನ್ನೂ ಗೌರವಿಸುತ್ತೇನೆ.ಇವೆಲ್ಲವುಗಳೂ ಸಾಮಾಜಿಕ ಜಾಲತಾಣಗಳ ಸೃಷ್ಟಿ “ಎಂದೂ ಹೇಳಿದ್ದರು.
 ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸಿಕೊಳ್ಳುವುದಿಲ್ಲ ಎಂದು ರಾಕೇಶ್ ಕಿಶೋರ್ ಎಂಬ ದೆಹಲಿ ಬಾರ್ ಕೌನ್ಸಿಲ್  ವಕೀಲ ಕೂಗಾಡುತ್ತ,ನ್ಯಾಯಾಧೀಶರತ್ತ ಶೂ ಎಸೆಯಲು ಮುಂದಾದರು ಎಂಬುದಾಗಿ ವರದಿಯಾಗಿದೆ.
3) ಭಾರತವು ಒಂದು ಸಾರ್ವಭೌಮ ರಾಷ್ಟ್ರ. ನಮ್ಮ ನಿರ್ಮಾರ್ತೃಗಳ ಆಲೋಚನೆಗಳನ್ನು ಆಧರಿಸಿದ ಲಿಖಿತ ಸಂವಿಧಾನವನ್ನು ದೇಶ ಹೊಂದಿದೆ ; ಸಂವಿಧಾನ, ತನ್ನ ದೃಷ್ಟಿಕೋನದ ವಿಶಾಲತೆ ಮತ್ತು ಸಮಾನತೆಯ ಮೌಲ್ಯಗಳಿಂದಾಗಿ ಭಾರತದ ಅಮೂಲ್ಯವಾದ ದಾಖಲೆಯಾಗಿದೆ.
ಈ ಸಂವಿಧಾನವನ್ನು ಭಾರತೀಯ ಸಮಾಜದ ಬಹುತ್ವ ಸ್ವರೂಪದ ಕಾರಣಕ್ಕಾಗಿಯೇ ವಿಶೇಷ ಎಂಬುದಾಗಿ ಪರಿಗಣಿಸಲಾಗಿದೆ.
ಭಾರತೀಯ ಪೌರತ್ವವನ್ನು ನಿರ್ದಿಷ್ಟ ಸಂಸ್ಕೃತಿ ಅಥವಾ ಧರ್ಮಕ್ಕೆ ಬದ್ಧತೆಯ ಆಧಾರದ ಮೇಲೆ ನಿರ್ಧರಿಸಲಾಗಿಲ್ಲ. ಬದಲಾಗಿ ರಾಜಕೀಯದಲ್ಲಿ ಸಾಮಾನ್ಯ ಭಾಗವಹಿಸುವಿಕೆಯ ಆಧಾರದ ಮೇಲೆ ವ್ಯಾಖ್ಯಾನಿಸಲಾಗಿದೆ.
ಭಾರತೀಯ ರಾಷ್ಟ್ರ ನಿರ್ಮಾಣದ ಪಿತಾಮಹರು ಭಾರತೀಯ ಸಮಾಜದ ಬಹುಸಂಸ್ಕೃತಿ, ಬಹುಧರ್ಮೀಯ, ಬಹುಭಾಷಾ ಮತ್ತು ಬಹುಜನಾಂಗೀಯ ಸ್ವಭಾವದ ಬಗ್ಗೆ ಚೆನ್ನಾಗಿ ತಿಳಿದಿದ್ದರು. ಆದ್ದರಿಂದ ಭಾರತೀಯ ಸಮಾಜದ ಬಹುತ್ವದ ಸ್ವರೂಪವನ್ನು ದೃಢೀಕರಿಸುವುದು ಬಹಳ ಮುಖ್ಯವಾಯಿತು.
ಯಾವುದೇ ಧಾರ್ಮಿಕ ಗುಂಪು ಭಾರತವನ್ನು ತಮ್ಮದು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ.ಇದು ಎಲ್ಲರ ಭಾರತ.ಆದರೆ ಈ ಹೊತ್ತಿನ ಭಾರತದ ಚಲನೆಗಳು ಹಾಗೆ ಕಾಣಿಸುತ್ತಿಲ್ಲ ಎನ್ನುವುದು ಕಳವಳಕಾರಿ ಅಂಶ.
ಇಂದು ಭಾರತ ಎದುರಿಸುತ್ತಿರುವ ಸಮಸ್ಯೆಗಳು ಭಾರತೀಯ ವಾಸ್ತವದ ಮೂರು ಪ್ರಮುಖ ಕ್ಷೇತ್ರಗಳಾದ ಸಂಸ್ಕೃತಿ, ರಾಷ್ಟ್ರ ಮತ್ತು ಮತಾಂತರಕ್ಕೆ ಸಂಬಂಧಿಸಿವೆ.ಈ ವಿಷಯಗಳನ್ನು ಈ ಹೊತ್ತು, ಹಿಂದೂ ಸಮಾಜದ ಮೇಲ್ಜಾತಿ ಮತ್ತು ಸಂಸ್ಕೃತಿಕರಣ ದೃಷ್ಟಿಕೋನಕ್ಕೆ ಸರಿಹೊಂದುವಂತೆ ಹೆಚ್ಚು ಹೆಚ್ಚು ರಾಜಕೀಯಗೊಳಿಸಲಾಗಿದ್ದೇ ಇವತ್ತಿನ ಪರಿಸ್ಥಿತಿಗೆ ಕಾರಣ.
ಒಂದು ಧರ್ಮವನ್ನು ಪೊಲಿಟಿಕಲ್ ಐಡೆಂಟಿಟಿಯಾಗಿ ಬಳಸುವ, ಬಳಸಿದ್ದರ ಪರಿಣಾಮವೇ ಇಂತಹ ದುರಂತಗಳು ಸಂಭವಿಸಲು ಕಾರಣ.
Read also : Poem : ಹೊಸ ಗಾಯ 
ಭಾರತೀಯ ಸಮಾಜದ ಬಹುತ್ವದ ಸ್ವರೂಪವನ್ನು ಕಾಪಾಡಲು ಈ ದೇಶದ ಎಲ್ಲಾ ಹಿಂದುಳಿದ ವರ್ಗಗಳು,ಅಲ್ಪಸಂಖ್ಯಾತರು, ದಲಿತರು ಮತ್ತು ಭಾರತೀಯ ಸಮಾಜದ ಇತರ ದಮನಿತ ಜನಸಾಮಾನ್ಯರು ತಮಗಾಗಿ ರಚಿತವಾದ ದೇಶದ ಸಂವಿಧಾನವನ್ನು ಅರಿಯ ಬೇಕಿದೆ. ತಮ್ಮ ಹಕ್ಕುಗಳಿಗಾಗಿ ಜಾಗೃತರಾಗಬೇಕಿದೆ .
ವಿಶೇಷವಾಗಿ ಸಂವಿಧಾನವನ್ನು ಪರಾಮರ್ಶಿಸುವ,ಪರಿಶೀಲಿಸುವ /ಬದಲಿಸುವ ಪ್ರಯತ್ನಗಳ ಸಂದರ್ಭದಲ್ಲಿ  ಮತ್ತು ದಾಳಿ ಸಂದರ್ಭಗಳಲ್ಲಿ ಇದು ಬಹಳ ಮುಖ್ಯ.
ಭಾರತದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ನಡೆದ ಹಲ್ಲೆ ಪ್ರಯತ್ನವನ್ನು ನಾವು ಇಂದಿಗೂ ಹಳ್ಳಿಹಳ್ಳಿಗಳಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವಾಗ ಉಂಟಾಗುವ ಸಂಘರ್ಷದಂತೆಯೇ ನೋಡಬೇಕಾಗಿದೆ.
ಇಂತಹ  ಪ್ರತಿರೋಧಗಳು,ಸಂಘರ್ಷಗಳೆಲ್ಲವುಗಳು ಬಹುತೇಕ ದಲಿತ,ಹಿಂದುಳಿದ ವರ್ಗಗಳ ನಾಯಕರುಗಳು ಮುಖ್ಯವಾಹಿನಿಗೆ ಬಂದು ನಿರ್ಣಾಯಕ ಅಧಿಕಾರಯುತ ಪದವಿಗಳಲ್ಲಿ ಇದ್ದಾಗ ಮತ್ತೆ ಮತ್ತೆ ಸಂಭವಿಸುತ್ತವೆ  ಮತ್ತು ಭಾರತಕ್ಕೆ ಆಳದ,ಆರದ ಗಾಯವನ್ನುಂಟು ಮಾಡುತ್ತವೆ ಎಂಬುದನ್ನು ಮರೆಯಬಾರದು.
4) ರಾಜಕೀಯ ಅಧಿಕಾರ ಬದಲಾವಣೆಯು ಮುಖ್ಯವಾಗಿ ಸಾಂವಿಧಾನಿಕ ಮಾರ್ಗಗಳಿಂದಾಗಿ ಸಂಭವಿಸಿದೆ ಎಂಬುದರ ಅರಿವೇ ದಮನಿತ ಸಮುದಾಯಗಳಿಗೆ ಇಲ್ಲ.ಈ ಹೊತ್ತು ಎಲ್ಲರ ತಲೆಗೇರಿರುವ ಸ್ಯೂಡೋ ಹಿಂದೂ ಸಿದ್ಧಾಂತವೇ ರಾಜಕೀಯ ಸಿದ್ಧಾಂತವೂ ಆಗಿಬಿಟ್ಟಿರುವ ವಿಚಿತ್ರ ಸನ್ನಿವೇಶದಲ್ಲಿ ಬಹುಸಂಖ್ಯಾತ ಭಾರತೀಯ ಸಮಾಜ ತುಂಬಾ ಕೆಟ್ಟದಾಗಿ ಸಿಕ್ಕಿಹಾಕಿಕೊಂಡಿದೆ.
ಅವು ಎಷ್ಟರಮಟ್ಟಿಗೆ ಎಂದರೆ, ಭಾರತೀಯ ಸಂವಿಧಾನದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಮರೆಸುವಷ್ಟು,ನಾವು ನಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪ್ರತಿಪಾದಿಸುವುದನ್ನು ಮರೆತುಬಿಡುವಷ್ಟು, ಮತ್ತು ಭಾರತದ ಜನರಲ್ಲಿ ಭೀತಿಯನ್ನೂ ಹುಟ್ಟಿಸುವಷ್ಟು ಬೆಳೆದಿರುವುದು,ಭಾರತಕ್ಕಂತೂ ಒಳ್ಳೆಯ ಲಕ್ಷಣ ಅಲ್ಲ.
ಮುಖ್ಯನ್ಯಾಯಮೂರ್ತಿ ಅವರೆಡೆಗೆ ರಾಕೇಶ್ ಕಿಶೋರ್ ತೂರಬೇಕೆಂದಿದ್ದ ಒಂದು ಬೂಟಿನ ಹಿಂದೆ ಎಷ್ಟೊಂದು ವಿಚಾರಗಳಿವೆ ಎಂಬುದನ್ನು ನೆನೆದರೆ ಈಗಲೂ ಭಯ,ಆತಂಕ ಮತ್ತು ಭಾರತದ ಭವಿಷ್ಯ ಕಣ್ಮುಂದೆ ಬರುತ್ತಿದೆ.ಹಾಗೆಯೇ ಆ ವಕೀಲನ ವಯಸ್ಸೂ ಕೂಡ 71 ವರ್ಷ!
5)  ಇದನ್ನು ಯಾವ ಯಾವ ರಾಜಕೀಯ ಪಕ್ಷಗಳು ಮುಖಂಡರುಗಳು ಖಂಡಿಸಿದ್ದಾರೆ ಎಂದು ಕುತೂಹಲದಿಂದ ಪತ್ರಿಕೆ,ದೂರದರ್ಶನದ ಸುದ್ದಿ,ಸಾಮಾಜಿಕ ಜಾಲತಾಣಗಳ ತಡಕಾಡಿದೆ.  ಪ್ರಕರಣ ನಡೆದ ಒಂಭತ್ತು ತಾಸುಗಳ ನಂತರ ಸಿಜೆಐ ಅವರೊಂದಿಗೆ ಪ್ರಧಾನಿ ಮಾತನಾಡಿದ್ದಾರೆ.
ಖರ್ಗೆಯವರು ಖಂಡಿಸಿದ್ದಾರೆ. ಅಲ್ಲಿಗೆ ಪ್ರಕರಣ ಮುಕ್ತಾಯಗೊಂಡಂತಾಗಿದೆ.ಪ್ರಶ್ನೆಗಳು ಹಾಗೇ ಉಳಿಯುತ್ತವೆ.
ಕೊನೆಯದಾಗಿ, ಜೆ.ಹೆಚ್.ಪಟೇಲರು ತಮ್ಮ ಆಪ್ತರಿಗೆ ಹೇಳಿದ ಮಾತು  ನೆನಪಾಯಿತು.ವಿ.ಪಿ.ಸಿಂಗ್ ಮಂಡಲ್ ವರದಿ ಜಾರಿಗೆ ತಂದ ದಿನಗಳು .ಆಗ,ಪಟೇಲರು ಸಿಂಗ್ ಅವರನ್ನು ಸಮರ್ಥಿಸಿಕೊಂಡು  “ನೋಡಪಾ,ನಮ್ಮ ವಿಧಾನಸಭೆಯ ಅಧಿಕಾರಿಗಳಲ್ಲಿ ಇರುವವರಲ್ಲಿ ಹೆಚ್ಚಿನ ಪಾಲು ಜನ ಮೇಲ್ಜಾತಿಯವರು.
ಇದಕ್ಕೆ ವಿನಾಯಿತಿ ಎಂದರೆ ರಿಸರ್ವೇಶನ್ ಮುಖಾಂತರ ಅನಿವಾರ್ಯವಾಗಿ ಮೇಲಕ್ಕೆ ಬಂದಂತಹ ಕೆಲವು ದಲಿತ ಅಧಿಕಾರಿಗಳು ಮಾತ್ರ.ಇವರಲ್ಲಿ ಕೆಲವರು ಒಳ್ಳೆಯ ಅಧಿಕಾರಿಗಳೂ ಇದ್ದಾರೆ.ಆದರೆ ಇಡೀ ವಿಧಾನಸಭೆಯಲ್ಲಿ ಕ್ಷೌರಿಕರ ಜಾತಿಯವನೋ,ಅಗಸರವನೊ , ಮುಸಲ್ಮಾನರವನೊ, ಬಡಗಿಯೋ,ನೇಕಾರನೋ, ಕುಂಬಾರನೋ ಅಥವಾ ಹೆಚ್ಚು ಜನರ ಓಟಿನ ಬಲವಿಲ್ಲದ ಅಸಂಖ್ಯಾತ ಇತರ ಜಾತಿಗಳಲ್ಲಿ ಯಾವೊಬ್ಬನೂ ಐಎಎಸ್ ಅಧಿಕಾರಿಯಾಗಿರುವುದು ಅಪರೂಪ.
ವಿ.ಪಿ.ಸಿಂಗರ ನಿರ್ಧಾರದಿಂದಾಗಿ ಈ ಎಲ್ಲಾ ಜಾತಿಗಳ ಮುಖಗಳೂ ಇನ್ನು ಮುಂದೆ ಅಧಿಕಾರದ ಸ್ಥಾನದಲ್ಲಿರುವುದನ್ನು ಕಾಣುವಂತಾಗುತ್ತದೆ.”
ಪ್ರಾಚೀನ ಭಾರತ ಆಧುನಿಕವಾಗುವುದು ಎಂದರೆ ಹೀಗೆ ಎಂದು ತೋರಿದ ವಿ.ಪಿ.ಸಿಂಗ್ ಮತ್ತು ಅವರ ಮಾತನ್ನು ಹೇಳಿದ ಜೆ.ಎಚ್.ಪಟೇಲರಂತಹ ಸಂವೇದನಾಶೀಲ ರಾಜಕಾರಣಿಗಳು ಇಂದು ನಮ್ಮ ಜೊತೆಗಿಲ್ಲ.

   ಬಿ.ಶ್ರೀನಿವಾಸ

TAGGED:CJI of India GavaiDavanagere NewsDinamana.comKannada NewsSupreme Court.ಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಭಾರತದ ಸಿಜೆಐ ಗವಾಯಿಯ
Share This Article
Twitter Email Copy Link Print
Previous Article Deadline extended ಬಿಸಿಎಂ ಹಾಸ್ಟೆಲ್‌ಗೆ ಪ್ರವೇಶಕ್ಕೆ ಅರ್ಜಿ : ಅವಧಿ ವಿಸ್ತರಣೆ
Next Article heart attack ಜಾತಿ ಗಣತಿ ವೇಳೆ ಶಿಕ್ಷಕರೊಬ್ಬರಿಗೆ ಹೃದಯಾಘಾತ : ಅಪಾಯದಿಂದ ಪಾರು
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಒಳಮೀಸಲಾತಿ ಜಾರಿ: ಸಿಎಂ ಸಿದ್ದರಾಮಯ್ಯಗೆ ಶಾಸಕ ಕೆ.ಎಸ್.ಬಸವಂತಪ್ಪ ಅಭಿನಂದನೆ

ದಾವಣಗೆರೆ: ವಿಧಾನಸಭೆಯಲ್ಲಿ ಬುಧವಾರ ದಲಿತ ಸಮುದಾಯಕ್ಕೆ ಒಳಮೀಸಲಾತಿ ಘೋಷಿಸುವ ಮೂಲಕ ದಶಕಗಳ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಯಕೊಂಡ…

By Dinamaana Kannada News

ದಾವಣಗೆರೆಯಲ್ಲಿ ಮೈಸೂರಿನ ವಿದ್ವಾನ್ ಪುಟ್ಟಣ್ಣಯ್ಯ ಅವರ ರಂಗಸಂಗೀತ ಸಂಜೆ

ಮೈಸೂರು ನಿವಾಸಿ ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯ (ವಿದ್ವಾನ್ ಪುಟ್ಟಣ್ಣಯ್ಯ ) ಅವರ ಹುಟ್ಟೂರು ಹಾಸನ ಜಿಲ್ಲೆ ಅರಸೀಕೆರೆ ಬಳಿಯ ಯರಿಗೇನಹಳ್ಳಿ.…

By ಮಲ್ಲಿಕಾರ್ಜುನ ಕಡಕೋಳ

ಹರಿಹರ: ಸೂರಿಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ಹರಿಹರ: ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದ ಸೂರಿಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮಂಗಳವಾರ ಹೊರವಲಯದ ಪ್ರೊ.ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಿಂದ ತಾಲ್ಲೂಕು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಗುಂಡಿ ಮುಚ್ಚಿ ಅಪಘಾತ ತಪ್ಪಿಸಿ:ಅಧಿಕಾರಿಗಳಿಗೆ ಡಿಸಿ ಸೂಚನೆ

By Dinamaana Kannada News
MLA basavanathappa
ತಾಜಾ ಸುದ್ದಿ

ಯುವಜನೋತ್ಸವ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲಿ: ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Awareness campaign against alcohol and drugs
ತಾಜಾ ಸುದ್ದಿ

ಮದ್ಯ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನಕ್ಕೆ ನ್ಯಾ. ಮಹಾವೀರ ಮ. ಕರೆಣ್ಣವರಿಂದ ಚಾಲನೆ

By Dinamaana Kannada News
Workshop on AI for students
ತಾಜಾ ಸುದ್ದಿ

ವಿದ್ಯಾರ್ಥಿಗಳಿಗಾಗಿ AI ಕುರಿತು ಕಾರ್ಯಗಾರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?